

ಮಂಜೇಶ್ವರ: ವೈದ್ಯ ಡಾ.ಈರೋಡಿ ಗಣಪತಿ ಭಟ್ ಜೀವನ ಅನುಭವ ಕಥನ ‘ವಿಜಯಪಥ’ದ ಬಿಡುಗಡೆ ಸಮಾರಂಭ ಬಲಿಪಗುಳಿ ಶಬರಿಗಿರಿಯಲ್ಲಿ ಭಾನುವಾರ ಜರುಗಿತು.
ಕಸಾಪ ಕೇರಳ ಗಡಿನಾಡ ಟಕದ ಅಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸಿದ್ದರು. ಪರಕ್ಕಜೆ ಗಣಪತಿ ಭಟ್ ಕೃತಿ ಬಿಡುಗಡೆಗೊಳಿಸಿದರು. ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಪುಸ್ತಕ ಪರಿಚಯಿಸಿದರು.
ವಿದ್ವಾಂಸ ಬೊಳಂತಕೋಡಿ ರಾಮ ಭಟ್ ಶುಭಾಶಂಸನೆಗೈದರು. ಕೋಳ್ಯೂರು ಶ್ರೀ ಶಂಕರನಾರಾಯಣ ದೇವಸ್ಥಾನದ ಪ್ರಧಾನ ಅರ್ಚಕ ರವಿಶಂಕರ ಹೊಳ್ಳ, ನಿವೃತ್ತ ಮುಖ್ಯಶಿಕ್ಷಕಿ ಅನಸೂಯಾದೇವಿ, ನಿವೃತ್ತ ಪ್ರಾಂಶುಪಾಲ ಮಜಿ ನಾರಾಯಣ ಭಟ್, ಮಂಗಳೂರಿನ ಆಕೃತಿ ಆಶಯ ಪ್ರಕಾಶನ ಸಂಚಾಲಕ ಕಲ್ಲೂರು ನಾಗೇಶ, ಕಾಸರಗೋಡಿನ ಆಶೀರ್ವಾದ ಪ್ರಕಾಶನ ಸಂಚಾಲಕ ಪ್ರಣವ ಎ. ಉಪಸ್ಥಿತರಿದ್ದರು.
ಲೇಖಕ ಡಾ.ಐ.ಜಿ.ಭಟ್ ಮತ್ತು ಪತ್ನಿ ಡಾ.ಚಂದ್ರಮತಿ ಕೃತಿ ರಚನೆ ಹಿನ್ನೆಲೆ ವಿವರಿಸಿದರು. ಉಷಾ ರವಿಶಂಕರ್ ಪ್ರಾರ್ಥನೆ ಹಾಡಿದರು. ಉಮೇಶ್ ಭಟ್ ಕೆ.ವಿ. ಸ್ವಾಗತಿಸಿದರು. ರವಿಶಂಕರ್ ಐ. ಪ್ರಸ್ತಾವನೆಗೈದರು. ಡಾ.ಶ್ಯಾಮ್ ಕುಮಾರ್ ಎನ್.ಕೆ. ನಿರೂಪಿಸಿದರು. ಡಾ.ಶಶಿಕಲಾ ಐ. ವಂದಿಸಿದರು.