ನಾಳೆ 'ವಿಜಯಾನಂದ' ಟೀಸರ್​ ರಿಲೀಸ್; ಆನಂದ್​ ಆಡಿಯೋ ಯೂಟ್ಯೂಬ್​ ಚಾನೆಲ್​ನಲ್ಲಿ ಬಿಡುಗಡೆ

Feature Last
Published on

ಬೆಂಗಳೂರು: ನಾಳೆ, ಆ. 2ರಂದು ವಿಆರ್​ಎಲ್​ ಸಮೂಹದ ಅಧ್ಯಕ್ಷ ಡಾ. ವಿಜಯ ಸಂಕೇಶ್ವರ ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿ 'ವಿಜಯಾನಂದ' ಚಿತ್ರತಂಡವು ಒಂದು ಉಡುಗೊರೆ ಕೊಡುವುದಕ್ಕೆ ಸಜ್ಜಾಗಿದೆ. ಇದುವರೆಗೂ ಚಿತ್ರದ ಪಾತ್ರ ಪರಿಚಯ ಟೀಸರ್​ಗಳನ್ನು ಬಿಡುಗಡೆ ಮಾಡಿದ್ದ ಚಿತ್ರತಂಡವು, ನಾಳೆ ಬೆಳಗ್ಗೆ 10.05ಕ್ಕೆ ಆನಂದ್​ ಆಡಿಯೋದ ಯೂಟ್ಯೂಬ್​ ಚಾನೆಲ್​ನಲ್ಲಿ ಚಿತ್ರದ ಮೊದಲ ಟೀಸರ್​ ಬಿಡುಗಡೆ ಮಾಡಲಿದೆ.

ಈ ಕುರಿತು 'ವಿಜಯವಾಣಿ' ಜತೆಗೆ ಮಾತನಾಡಿದ ನಿರ್ದೇಶಕಿ ರಿಷಿಕಾ ಶರ್ಮ, 'ಇದು ನಮ್ಮ ಚಿತ್ರದ ಮೊದಲ ಅಧಿಕೃತ ದೃಶ್ಯಗಳು. ಇದುವರೆಗೂ ಚಿತ್ರದ ಮೂರು ತಲೆಮಾರಿನ ಪಾತ್ರಗಳ ಪರಿಚಯಿಸುವ ಟೀಸರ್​ ಬಿಡುಗಡೆ ಮಾಡಿದ್ದೆವು. ಈಗ ಚಿತ್ರದ ಟೀಸರ್​ ಬಿಡುಗಡೆ ಮಾಡುತ್ತಿದ್ದೇವೆ. ವಿಆರ್​ಎಲ್​ ಸಮೂಹ ಹೇಗೆ ಶುರುವಾಯಿತು, ವಿಜಯ ಸಂಕೇಶ್ವರ ಅವರು ಹೇಗೆ ಈ ಸಂಸ್ಥೆಗೆ ಅಡಿಪಾಯ ಹಾಕಿದರು ಎಂದು ಈ ಟೀಸರ್​ ಮೂಲಕ ತೋರಿಸಲಾಗುತ್ತದೆ' ಎಂದರು.

ಕಳೆದ ವರ್ಷ ಪ್ರಾರಂಭವಾದ 'ವಿಜಯಾನಂದ' ಚಿತ್ರವು 97 ದಿನಗಳ ಚಿತ್ರೀಕರಣ ಮುಗಿಸಿ ಇದೀಗ ಪೋಸ್ಟ್​ ಪ್ರೊಡಕ್ಷನ್​ ಹಂತದಲ್ಲಿದೆ. ಚಿತ್ರದಲ್ಲಿ ಒಂದು ತಾಸಿಗೂ ಹೆಚ್ಚಿನ ಅವಧಿಯ ವಿಎಫ್​ಎಕ್ಸ್​ ಇದ್ದು, ಗ್ರಾಫಿಕ್ಸ್​ ಅಳವಡಿಕೆ ನಡೆಯುತ್ತಿದೆ. ಜತೆಗೆ ಹಿನ್ನೆಲೆ ಸಂಗೀತ ಮತ್ತು ಕಲರಿಂಗ್​ ಕೆಲಸ ಸಹ ಪ್ರಗತಿಯಲ್ಲಿದೆ. ಚಿತ್ರದ ಮೊದಲ ಕಾಪಿ ಬಂದ ನಂತರ ಬಿಡುಗಡೆ ದಿನಾಂಕದ ಕುರಿತು ಅಧಿಕೃತ ತೀರ್ಮಾನ ತೆಗೆದುಕೊಳ್ಳಲಾಗುವುದು ಎನ್ನುತ್ತಾರೆ ರಿಷಿಕಾ.

ವಿಆರ್​​ಎಲ್​ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಆನಂದ ಸಂಕೇಶ್ವರ ಅವರು ವಿಆರ್​ಎಲ್ ಫಿಲ್ಮ್​​ ಪ್ರೊಡಕ್ಷನ್ಸ್​ನಡಿ ನಿರ್ಮಿಸುತ್ತಿರುವ 'ವಿಜಯಾನಂದ' ಚಿತ್ರದಲ್ಲಿ ನಿಹಾಲ್​, ಅನಂತ್​ ನಾಗ್, ರವಿಚಂದ್ರನ್​, ವಿನಯಾ ಪ್ರಸಾದ್​, ಸಿರಿ ಪ್ರಹ್ಲಾದ್, ಶೈನ್ ಶೆಟ್ಟಿ​ ಮುಂತಾದವರು ನಟಿಸಿದ್ದು, ಗೋಪಿಸುಂದರ್​ ಸಂಗೀತ ಸಂಯೋಜಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net