ಸಾರ್ವಜನಿಕ ಆರೋಗ್ಯದ ಹಕ್ಕಿಗಾಗಿ ಸಹಿ ಸಂಗ್ರಹ ಚಳುವಳಿ

ಭಗತ್ ಸಿಂಗ್ ರಕ್ತದಾನಿಗಳ ಸಂಘದಿAದ ಆಗ್ರಹ
ಹೊಸಪೇಟೆ ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿ ಎದುರು ಭಗತ್ ಸಿಂಗ್ ರಕ್ತದಾನಿಗಳ ಸಂಘದಿAದ ಸಹಿ ಸಂಗ್ರಹ ಚಳುವಳಿ ಭಾನುವಾರ ನಡೆಯಿತು. ವಕೀಲ ಬಿಸಾಟಿ ಮಹೇಶ್, ಸಂಘದ ಉಪಾಧ್ಯಕ್ಷ ಕಲ್ಯಾಣ್, ಮುಖಂಡರಾದ ಚನ್ನಬಸವನಗೌಡ, ಬಸವರಾಜ್, ಅಲ್ತಾಫ್ ಇತರರಿದ್ದರು.
ಹೊಸಪೇಟೆ ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿ ಎದುರು ಭಗತ್ ಸಿಂಗ್ ರಕ್ತದಾನಿಗಳ ಸಂಘದಿAದ ಸಹಿ ಸಂಗ್ರಹ ಚಳುವಳಿ ಭಾನುವಾರ ನಡೆಯಿತು. ವಕೀಲ ಬಿಸಾಟಿ ಮಹೇಶ್, ಸಂಘದ ಉಪಾಧ್ಯಕ್ಷ ಕಲ್ಯಾಣ್, ಮುಖಂಡರಾದ ಚನ್ನಬಸವನಗೌಡ, ಬಸವರಾಜ್, ಅಲ್ತಾಫ್ ಇತರರಿದ್ದರು.
Published on: 

ಹೊಸಪೇಟೆ: ಕ್ರಾಂತಿಕಾರಿ ಭಗತ್ ಸಿಂಗ್ ಅವರ 119ನೇ ಜನ್ಮದಿನಾಚರಣೆ ನಿಮಿತ್ತ ಭಗತ್ ಸಿಂಗ್ ರಕ್ತದಾನಿಗಳ ಸಂಘದಿAದ ಭಾನುವಾರ ಇಲ್ಲಿನ ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿ ಎದುರು ಸಾರ್ವಜನಿಕ ಆರೋಗ್ಯದ ಹಕ್ಕಿಗಾಗಿ ಸಹಿ ಸಂಗ್ರಹ ಚಳುವಳಿ ಹಾಗೂ ರೋಗಿಗಳಿಗೆ ಹಣ್ಣು-ಹಂಪಲು ವಿತರಣೆ ಕಾರ್ಯಕ್ರಮ ನಡೆಯಿತು.

ಸಂಘದ ಅಧ್ಯಕ್ಷ ಕೆ.ಎಂ.ಸAತೋಷ್ ಕುಮಾರ್ ಮಾತನಾಡಿ, ವಿಜಯನಗರ ಜಿಲ್ಲೆಯಾಗಿ ಐದು ವರ್ಷ ಕಳೆದರೂ ಸುಸಜ್ಜಿತ ಜಿಲ್ಲಾ ಆಸ್ಪತ್ರೆ ಆರಂಭವಾಗದಿರುವುದು ದುರಂತ. ಬಡ ರೋಗಿಗಳು ತುರ್ತು ಚಿಕಿತ್ಸೆಗಾಗಿ ದೂರದ ಹುಬ್ಬಳ್ಳಿ, ಬೆಂಗಳೂರಿಗೆ ಹೋಗುವ ಮಾರ್ಗಮಧ್ಯದಲ್ಲೇ ಪ್ರಾಣ ಬಿಡುತ್ತಿದ್ದಾರೆ.

ಹೀಗಾಗಿ ಸ್ಥಳೀಯವಾಗಿ ಭಗತ್ ಸಿಂಗ್ ಹೆಸರಿನಲ್ಲಿ ಹೃದಯ ಚಿಕಿತ್ಸಾಲಯ ಸ್ಥಾಪಿಸಬೇಕು. ತಜ್ಞ ವೈದ್ಯರು, ನರ್ಸ್ಗಳು ಹಾಗೂ ಅಗತ್ಯ ಸಿಬ್ಬಂದಿ ನೇಮಕಾತಿ ಪೂರ್ಣಗೊಂಡ ಬಳಿಕವೇ ನೂತನ ಜಿಲ್ಲಾ ಆಸ್ಪತ್ರೆಯನ್ನು ಉದ್ಘಾಟಿಸಬೇಕು.

ಕೆಪಿಎಂಇ ಕಾಯ್ದೆಯಡಿ ಖಾಸಗಿ ಆಸ್ಪತ್ರೆಗಳ ಚಿಕಿತ್ಸಾ ವೆಚ್ಚ ನಿಯಂತ್ರಿಸುವುದು ಮತ್ತು ಸರ್ಕಾರಿ ಆಸ್ಪತ್ರೆಯಲ್ಲಿ 24 ಗಂಟೆ ತಜ್ಞ ವೈದ್ಯರು, ಸಿಟಿ ಸ್ಕ್ಯಾನ್ ಹಾಗೂ ರಕ್ತನಿಧಿ ಸೌಲಭ್ಯ ಕಲ್ಪಿಸುವಂತೆ ಎಂದು ಆಗ್ರಹಿಸಿದರು..

ಜಿಲ್ಲಾ ಸಂಚಾಲಕ ಮೊಹಮ್ಮದ್ ಖಾಲಿದ್ ಅವರು ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು-ಬಿಸ್ಕೆಟ್ ವಿತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net