ಕಬ್ಬಡಿ: ಕಮಲಾಪುರ ಕಾಲೇಜು ರಾಜ್ಯಮಟ್ಟಕ್ಕೆ ಲಗ್ಗೆ

ವಿಜಯನಗರ ಜಿಲ್ಲಾಮಟ್ಟದ ಪಿಯು ಕ್ರೀಡಾಕೂಟದಲ್ಲಿ ಕೂಡ್ಲಿಗಿ ಮಣಿಸಿ ಭರ್ಜರಿ ಜಯ
ಕೂಡ್ಲಿಗಿಯಲ್ಲಿ ನಡೆದ ಕಬ್ಬಡಿ ಕ್ರೀಡಾಕೂಟದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಕಮಲಾಪುರ ಪಿಯು ಕಾಲೇಜಿನ ತಂಡ. ಕಾಲೇಜಿನ ಉಪನ್ಯಾಸಕ ಶರಣಪ್ಪ, ನಾಯಕ ಅವಿನ್ ಕುಮಾರ್, ತಂಡದ ಸದಸ್ಯರಾದ ಚೇತನ್ ಕುಮಾರ್, ಹನುಮಂತ ನಾಯ್ಕ, ಅಪ್ಪು ನಾಯ್ಕ, ಕೃಷ್ಣ ಕುಮಾರ್, ಆನಂದ್ ನಾಯ್ಕ, ಸಂತೋಷ್, ವೆಂಕಟೇಶ್, ಶರತ್ ಹಾಗೂ ಹರಿದಾಸ ಇತರರಿದ್ದರು.

Published on: 

ಹೊಸಪೇಟೆ: ಕೂಡ್ಲಿಗಿಯಲ್ಲಿ ಶನಿವಾರ ನಡೆದ ಜಿಲ್ಲಾಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಕಮಲಾಪುರ ಪದವಿ ಪೂರ್ವ ಕಾಲೇಜಿನ ಕ್ರೀಡಾಪಟುಗಳು ಅಪ್ರತಿಮ ಪ್ರದರ್ಶನ ನೀಡಿ ಭರ್ಜರಿ ಜಯಭೇರಿ ಬಾರಿಸಿದ್ದಾರೆ.

ರೋಚಕವಾಗಿ ಸಾಗಿದ ಕಬಡ್ಡಿ ಫೈನಲ್ ಹಣಾಹಣಿಯಲ್ಲಿ ಆತಿಥೇಯ ಕೂಡ್ಲಿಗಿ ಪಿಯು ಕಾಲೇಜು ತಂಡವನ್ನು ಕಮಲಾಪುರ ಕಾಲೇಜು ತಂಡ ಎದುರಿಸಿತು. ಆರಂಭದಿಂದಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಕಮಲಾಪುರದ ಆಟಗಾರರು ಎದುರಾಳಿ ತಂಡದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದರು. ಬರೋಬ್ಬರಿ 23 ಅಂಕಗಳನ್ನು ಕಲೆಹಾಕಿದರು. ಕೂಡ್ಲಿಗಿ ತಂಡ ಕೇವಲ 5ಕ್ಕೆ ತೃಪ್ತಿ ಪಟ್ಟಿತು. ಅಂತಿಮವಾಗಿ ಕಮಲಾಪುರ ತಂಡವು 18 ಅಂಕಗಳ ಬೃಹತ್ ಅಂತರದಿಂದ ಕೂಡ್ಲಿಗಿ ತಂಡವನ್ನು ಮಣಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು.

ಕಾಲೇಜಿನ ಉಪನ್ಯಾಸಕ ಶರಣಪ್ಪ ಅವರ ಮಾರ್ಗದರ್ಶನ ಹಾಗೂ ನಾಯಕ ಅವಿನ್ ಕುಮಾರ್ ಅವರ ಚುರುಕಿನ ನಾಯಕತ್ವದಲ್ಲಿ ತಂಡವು ಸಂಘಟಿತ ಆಟ ಪ್ರದರ್ಶಿಸಿತು. ತಂಡದ ಸದಸ್ಯರಾದ ಚೇತನ್ ಕುಮಾರ್, ಹನುಮಂತ ನಾಯ್ಕ, ಅಪ್ಪು ನಾಯ್ಕ, ಕೃಷ್ಣ ಕುಮಾರ್, ಆನಂದ್ ನಾಯ್ಕ, ಸಂತೋಷ್, ವೆಂಕಟೇಶ್, ಶರತ್ ಹಾಗೂ ಹರಿದಾಸ ಅವರ ಆಕರ್ಷಕ ಆಟ, ಬಲಿಷ್ಠ ಟ್ಯಾಕಲ್ ಮತ್ತು ರೈಡಿಂಗ್ ಕ್ರೀಡಾಭಿಮಾನಿಗಳನ್ನು ಮಂತ್ರಮುಗ್ಧರನ್ನಾಗಿಸಿತು. ಜಿಲ್ಲಾಮಟ್ಟದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿ ರಾಜ್ಯಮಟ್ಟಕ್ಕೆ ಅರ್ಹತೆ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net