ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ನಗರ ವಿಭಾಗದಿಂದ ಜೀರೊ ಆಕ್ಸಿಡೆಂಟ್ ಎಂಬ ಅಭಿಯಾನ ಕಳೆದ ಜ.01ರಿಂದ ಆರಂಭಿಸಿದ್ದೇವೆ. ರಾಜ್ಯದಲ್ಲೇ ಇದೇ ಮೊದಲ ಪ್ರಯತ್ನ ನಡೆದಿದೆ. 70 ಕಿಮೀ ವೇಗ ನಿಯಂತ್ರಣ. ನಮ್ಮ ನಿರ್ವಹಣೆ ಮೇಲೆ ಬಸ್‌ಗಳು 15 ಲಕ್ಷ ಕಿಮೀ ಕೂಡ ಒಡಿಸುವ ಸಾಮಾರ್ಥ್ಯ ಇದೆ. ಈ ಹಿಂದೆ 2024ರಿಂದ 2025ರ ವರೆಗೆ 74 ಅಪಘಾತಗಳಾಗಿವೆ. 25 ಮಾರಣಾಂತಿಕ ಅಪಘಾತ, 20 ಗಂಬಿರ ಅಪಘಾತ, 29 ಲಘು ಅಪಘಾತ ನಡೆದಿವೆ. ಕಳೆದ ಜ.01ರಿಂದ ನಡೆದ ಅಭಿಯಾನದಲ್ಲಿ ಲಘು ಅಪಘಾತ ಒಂದು ನಡೆದಿದೆ. 480 ಬಸ್‌ಗಳಿದ್ದು, 10 ಲಕ್ಷ ಕಿಮೀ ಓಡಿರುವ ಬಸ್‌ಗಳ ಸಂಖ್ಯೆ ಹೆಚ್ಚಿವೆ. ಇದಕ್ಕೆ ಉತ್ತಮ ಮೆಕಾನಿಕ್ ಕೆಲಸ ನಡೆಯುತ್ತಿದೆ. ರಸ್ತೆ ಮೇಲೆ ಯಾವುದೇ ಬಸ್ ನಿಲ್ಲದಂತೆ ಕ್ರಮವಹಿಸಲಾದೆ. ಪ್ರತಿ ಚಾಲಕರಿಗೆ ಐಡಿ ಕಾರ್ಡ್, ಹಾಗೂ ಬಸ್‌ನಲ್ಲಿ ಚಾಲಕನಿಗೆ ಕಾಣುವಂತೆ ಹೀರೊ ಆನ್ ವೀಲ್ಸ್, ಸುರಕ್ಷಿತ ಚಾಲಕ ಪ್ರಯಾಣಿಕರ ಮತ್ತು ರಸ್ತೆ ಉಪಯೋಗಿಸುವವರ ಜೀವ ರಕ್ಷಕ ಎಂಬ ಘೋಷವಾಕ್ಯ ಅಂಟಿಸಲಾಗಿತ್ತದೆ. ಇದರಿಂದ ಅಪಘಾತ ಕಡಿಮೆಯಾಗಿದೆ ಎಂದರು.