ಬೀರಬ್ಬಿಯಲ್ಲಿ ಯುವಕನ ಕೊಲೆ: ಚೀಲದಲ್ಲಿ ಮೃತ ದೇಹ ಪತ್ತೆ

ಹೂವಿನಹಡಗಲಿ ತಾಲೂಕಿನ ಬೀರಬ್ಬಿ ಗ್ರಾಮದಲ್ಲಿ ಬೀರೇಶ್ ಅವರ  ಮೃತ ದೇಹದ ಭಾಗಳಿರುವ ಚೀಲ ದೊರೆತ ಸ್ಥಳಕ್ಕೆ ಎಸ್ಪಿ ಜಾಹ್ನವಿ ಎಸ್, ಭೇಟಿ ನೀಡಿ ಪರಿಶೀಲನೆ‌ ನಡೆಸಿದರು. ಡಿವೈಎಸ್‌ಪಿ ಸಂತೋಷ್ ಚೌವ್ಹಾಣ್, ಸಿಪಿಐ ಮಲ್ಲಪ್ಪ ಹೂಗಾರ ಹಾಗೂ ಇತರರಿದ್ದರು.
ಹೂವಿನಹಡಗಲಿ ತಾಲೂಕಿನ ಬೀರಬ್ಬಿ ಗ್ರಾಮದಲ್ಲಿ ಬೀರೇಶ್ ಅವರ ಮೃತ ದೇಹದ ಭಾಗಳಿರುವ ಚೀಲ ದೊರೆತ ಸ್ಥಳಕ್ಕೆ ಎಸ್ಪಿ ಜಾಹ್ನವಿ ಎಸ್, ಭೇಟಿ ನೀಡಿ ಪರಿಶೀಲನೆ‌ ನಡೆಸಿದರು. ಡಿವೈಎಸ್‌ಪಿ ಸಂತೋಷ್ ಚೌವ್ಹಾಣ್, ಸಿಪಿಐ ಮಲ್ಲಪ್ಪ ಹೂಗಾರ ಹಾಗೂ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸ್ಥಳಕ್ಕೆ ಎಸ್ಪಿ ಎಸ್‌.ಜಾಹ್ನವಿ ಬೇಟಿ ಪರಿಶೀಲನೆ
  • 15 ದಿನಗಳ ಹಿಂದೆ ಕಾಣೆಯಾಗಿದ್ದ ಯುವಕ ಶವವಾಗಿ ಪತ್ತೆ
ಹೂವಿನಹಡಗಲಿ : ತಾಲೂಕಿನ ಬೀರಬ್ಬಿ ಗ್ರಾಮದಲ್ಲಿ ಬೀರೇಶ (25) ಎಂಬ ಯುವಕನ ಕೊಲೆ ಮಾಡಿ, ದೇಹವನ್ನು ಕತ್ತರಿಸಿ ಚೀಲದಲ್ಲಿ ತುಂಬಿ ಹಾಕಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಕುರಿ ಕಾಯುವ ಕೆಲಸ ಮಾಡುತ್ತಿದ್ದ ಬೀರೇಶ ಕಳೆದ 15 ದಿನಗಳಿಂದ ಕಾಣೆಯಾಗಿದ್ದರು. ಆದರೆ, ಬುಧವಾರ ಸಂಜೆ ಬೀರೇಶ ಅವರ ಮನೆಯ ಹಿಂಭಾಗದಲ್ಲಿ ಮೃತ ದೇಹ ಪತ್ತೆಯಾಗಿದೆ. ಪ್ರಾಣಿ ಸತ್ತಿರುವ ವಾಸನೆ ಬರುತ್ತಿದೆ ಎಂದು ಸ್ಥಳೀಯರು ಗಮನಿಸಿದಾಗ, ಒಂದು ಚೀಲ ಕಂಡು ಬಂದಿದ್ದು, ಅದನ್ನು ತೆರೆದಾಗ ಬೀರೇಶ ಅವರ ದೇಹದ ಭಾಗಗಳು ಕಂಡು ಬಂದಿದೆ. ಕೂಡಲೇ ಗ್ರಾಮಸ್ಥರು ಹಿರೇಹಡಗಲಿ ಪೊಲೀಸಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳಕ್ಕೆ ಎಸ್ಪಿ ಎಸ್‌.ಜಾಹ್ನವಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಡಿವೈಎಸ್‌ಪಿ ಸಂತೋಷ್ ಚೌವ್ಹಾಣ್, ಸಿಪಿಐ ಮಲ್ಲಪ್ಪ ಹೂಗಾರ ಹಾಗೂ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net