ಯುವ ಸಮೂಹ ದೇಶಿ ಕಲೆಗಳನ್ನು ರೂಡಿಸಿಕೊಳ್ಳಿ

ಹಂಪಿಯ ಶ್ರೀ ವಿರುಪಾಕ್ಷೇಶ್ವರ ದೇಗುಲದಲ್ಲಿ ಶುಕ್ರವಾರ ರಾತ್ರಿ ನಡೆದ ಭಕ್ತಿ ಭಾವನ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹಂಪಿಯ ಶ್ರೀ ವಿದ್ಯಾರಣ್ಯ ಭಾರತಿ ಸ್ವಾಮೀಜಿ ಮಾತನಾಡಿದರು. ಹಂಪಿ ಪಿಡಿಒ ಗಂಗಾಧರ, ಕಲಾವೃಂದದ ಸಂಸ್ಥಾಪಕ ಅಧ್ಯಕ್ಷ ಅಂಗಡಿ ವಾಮದೇವ, ಪ್ರಮುಖರಾದ ಕೆ.ಗೋಪಾಲ್, ಕೆ.ಷಣ್ಮುಖಗೌಡ, ವಿಶ್ವನಾಥ ಹಿಟ್ನಾಳ್ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಭಕ್ತಿ ಭಾವನ ಕಾರ್ಯಕ್ರಮದಲ್ಲಿ ಶ್ರೀ ವಿದ್ಯಾರಣ್ಯ ಭಾರತಿ ಸ್ವಾಮೀಜಿ ಕರೆ
ಹೊಸಪೇಟೆ: ಹಂಪಿ ಜಾತ್ರೆ ನಿಮಿತ್ತ ತಾಲೂಕಿನ ಕಡ್ಡಿರಾಂಪುರದ ಶ್ರೀ ಮರಿದೇವ ಸಂಗೀತ ಸಾಂಸ್ಕೃತಿಕ ಕಲಾವೃಂದದಿAದ ಶ್ರೀ ವಿರುಪಾಕ್ಷೇಶ್ವರ ದೇಗುಲದಲ್ಲಿ 30ನೇ ವರ್ಷದ ಭಕ್ತಿ ಭಾವನ ಸಾಂಸ್ಕೃತಿಕ ಕಾರ್ಯಕ್ರಮ ಶುಕ್ರವಾರ ರಾತ್ರಿ ನಡೆಯಿತು.
ಹಂಪಿ ಶ್ರೀ ವಿದ್ಯಾರಣ್ಯ ಪೀಠಾಧಿಪತಿ ಶ್ರೀ ವಿದ್ಯಾರಣ್ಯ ಭಾರತಿ ಸ್ವಾಮೀಜಿ ದಿವ್ಯ ಸಾನಿಧ್ಯವಹಿಸಿ ಆರ್ಶಿವಚನ ನೀಡಿ, ಸನಾತನ ಧಾರ್ಮಿಕ ಸಂಸ್ಕೃತಿಗಳನ್ನು ನಮ್ಮ ಯುವ ಸಮೂಹ ರೂಡಿಸಿಕೊಳ್ಳಬೇಕು. ನಮ್ಮದು ಸರ್ವೆಜನೋ ಸುಖಿನೋಭವಂತು ಎನ್ನುವ ಸಂಸ್ಕೃತಿ. ಎಲ್ಲರನ್ನು ಪ್ರೀತಿಸುವ ಧರ್ಮ ನಮ್ಮದು. ಗುರುಹಿರಿಯರಲ್ಲಿ ಗೌರವ, ದೇವರಲ್ಲಿನ ಭಕ್ತಿ ಸಂಗೀತ ಭಕ್ತಿ ಮಾರ್ಗಕ್ಕೆ ನಮ್ಮನ್ನು ಕರೆದೊಯ್ಯುವ ಸಾಧನವಾಗಿದೆ. ಯುವಕರು ವಿದೇಶ ಸಂಸ್ಕೃತಿಗೆ ಮಾರುಹೋಗದೆ ದೇಶಿಯ ಕಲೆಗಳನ್ನು ರೂಢಿಸಿಕೊಳ್ಳಬೇಕು ಎಂದರು.
ಹAಪಿ ಪಿಡಿಒ ಗಂಗಾಧರ, ಕಲಾವೃಂದದ ಸಂಸ್ಥಾಪಕ ಅಧ್ಯಕ್ಷ ಅಂಗಡಿ ವಾಮದೇವ, ಪ್ರಮುಖರಾದ ಕೆ.ಗೋಪಾಲ್, ಕೆ.ಷಣ್ಮುಖಗೌಡ, ವಿಶ್ವನಾಥ ಹಿಟ್ನಾಳ್, ಎಚ್.ಕೆ.ತರುಣಕುಮಾರ, ಮಲ್ಲಿಕಾರ್ಜುನ ತುರುವನೂರು, ಸುಮಾ ಕಾಳಘಟ್ಟ, ಅಂಗಡಿ ಸಮರ್ಥ, ಸ್ಪೂರ್ತಿ ಭಟ್, ಜಮೂನರಾಣಿ ಹಿರೇಮಠ, ಶ್ರೀರಕ್ಷ ಪಾಟೀಲ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net