ತಮ್ಮ ಜಮೀನಿನಲ್ಲಿ ಬೆಳಿದಿದ್ದ ಬೆಳೆಗೆ ಶನಿವಾರ ನೀರು ಬಿಡಲು ತೆರಳಿದ್ದಾರೆ. ಈ ಸಂದರ್ಭದಲ್ಲಿ ಮೃತ ರೈತನ ಸ್ನೇಹಿತರು ಊಟ ಕೋಡಲು ಜಮೀನಿಗೆ ತೆರಳಿದ್ದಾರೆ. ಈ ವೇಳೆ ಮೋಟಾರ್‌ಪಂಪ್ ಬಳಿ ತೆರಳಿ ಹುಡುಕಾಡಿದಾಗ ವಿದ್ಯುತ್ ತಂತಿ ತಗುಲಿ ಪ್ರವೀಣ ಮೃತಪಟ್ಟಿದ್ದು ಕಂಡು ಬಂದಿದೆ. ಸಮಯಕ್ಕೆ ಸರಿಯಾಗಿ ವಿದ್ಯುತ್ ಪೂರೈಕೆ ಮಾಡದ ಕಾರಣ ರೈತರು ಪಂಪ್‌ಬಳಿ ತೆರಳಿ ವಿದ್ಯುತ್ ಪರೀಕ್ಷಿಸುವ ಸಂದರ್ಭದಲ್ಲಿ ಮೃತರಾಗಿದ್ದಾರೆ. ಈ ಘಟನೆಗೆ ಜೆಸ್ಕಾಂ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣ ಎಂದು ಗ್ರಾಮಸ್ಥರು ದೂರಿದರು. ಮೃತರಿಗೆ ತಂದೆ, ತಾಯಿ, ಅಣ್ಣ, ತಂಗಿ ಇದ್ದಾರೆ. ಸ್ಥಳಕ್ಕೆ ಇಟ್ಟಿಗಿ ಪೊಲೀಸರು ಭೇಟಿನೀಡಿ ಪರಿಶೀಲನೆ ನಡೆಸಿದರು.