ಹೊಸಪೇಟೆ ಜಿ.ಪಂ.ಕಚೇರಿ ಸಭಾಂಗಣದಲ್ಲಿ ಶನಿವಾರ ಶ್ರೀ ಭಗವಾನ್ ಬುದ್ಧ ಜಯಂತಿ ನಿಮಿತ್ತ ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ ಭಾವಚಿತ್ರಕ್ಕೆ ಪುಷ್ಪಾನಮನ ಸಲ್ಲಿಸಿದರು. ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ವೈ.ಎ.ಕಾಳೆ, ತಹಸೀಲ್ದಾರ್ ಶೃತಿ ಎಂ.ಮಲ್ಳಪ್ಪಗಭಡ್ರ್, ಜಿ.ಪಂ. ಮುಖ್ಯ ಯೋಜನಾಧಿಕಾರಿ ಅನ್ನದಾನಸ್ವಾಮಿ ಇತರರಿದ್ದರು
ಭಗವಾನ್ ಬುದ್ಧ ಜಯಂತಿಯಲ್ಲಿ ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ ಅಭಿಪ್ರಾಯ
ಹೊಸಪೇಟೆ: ಜಗತ್ತಿಗೆ ಶಾಂತಿ ಅಹಿಂಸೆ ಮತ್ತು ಕರುಣೆಯ ಸಂದೇಶ ಸಾರಿದ ಬುದ್ಧ ಜಯಂತಿಯ ಆಚರಣೆಯು ಕೇವಲ ಒಂದು ಸಂಪ್ರದಾಯವಾಗದೆ, ಬುದ್ಧರ ಬೋಧನೆ ಮತ್ತು ಆದರ್ಶಗಳನ್ನು ನಮ್ಮ ವೈಯಕ್ತಿಕ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ ಬಣ್ಣಿಸಿದರು.
ನಗರದ ಜಿ.ಪಂ. ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಶ್ರೀ ಭಗವಾನ್ ಬುದ್ಧ ಜಯಂತಿ ನಿಮಿತ್ತ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.
ಬುದ್ಧರ ವಿಚಾರಗಳು ಜಾಗತಿಕ ಸಂಘರ್ಷ, ಆಂತರಿಕ ಭಿನ್ನಾಭಿಪ್ರಾಯಗಳು ಮತ್ತು ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ನೀಡುವಲ್ಲಿ ಅತ್ಯಂತ ಪ್ರಸ್ತುತವಾಗಿವೆ. ರಾಜವಂಶದಲ್ಲಿ ಹುಟ್ಟಿ, ಸಕಲ ಸುಖ-ಸೌಲಭ್ಯಗಳಿದ್ದರೂ ಸಿದ್ಧಾರ್ಥನು ಅವೆಲ್ಲವನ್ನೂ ತ್ಯಜಿಸಿ ಬುದ್ಧನಾದದ್ದು ಸಮಾಜದ ಪರಿವರ್ತನೆಗಾಗಿ. ಅವರ ಈ ಚಿಂತನೆಗಳು ದೇಶ ವಿದೇಶಗಳಲ್ಲಿ ಪಸರಿಸಿವೆ. ಆರೋಗ್ಯ ಸಮಸ್ಯೆಗಳಿಗೆ ಅತಿಯಾದ ಆಸೆ ಮತ್ತು ದುರಾಸೆಯೇ ಮುಖ್ಯ ಕಾರಣ. ನೆರೆಹೊರೆಯವರೊಂದಿಗೆ ಜಗಳ ಅಥವಾ ಭೂಮಿಯ ಮೇಲಿನ ದುರಾಸೆ ಇವೆಲ್ಲವೂ ನಮ್ಮನ್ನು ನೆಮ್ಮದಿಯಿಂದ ದೂರ ಮಾಡುತ್ತಿವೆ. ಅಶೋಕ ಚಕ್ರವರ್ತಿಯು ಬುದ್ಧನ ಶಾಂತಿ ಸಂದೇಶದಿAದ ಪ್ರಭಾವಿತನಾಗಿ ಬೌದ್ಧ ಧರ್ಮ ಪ್ರಸಾರ ಮಾಡಿದನು. ಅದು ಈಗಲು ನಮ್ಮ ರಾಷ್ಟ್ರಧ್ವಜದಲ್ಲಿ ಗೌರವಿಸಲ್ಪಡುತ್ತಿದೆ. ಈ ನಿಟ್ಟಿನಲ್ಲಿ ಬುದ್ಧನ ವಿಚಾರಗಳನ್ನು ಕೇವಲ ಕೇಳುವುದಕ್ಕಿಂತ, ಜೀವನದಲ್ಲಿ ಅಳವಡಿಸಿಕೊಳ್ಳುವುದು ನಮ್ಮ ಬದುಕಿನ ಸಾರ್ಥಕತೆಗೆ ದಾರಿಯಾಗಲಿದೆ ಎಂದರು.
ಉಪನ್ಯಾಸಕಿ ಡಾ.ಉಮಾ ಉಪನ್ಯಾಸ ನೀಡಿದರು. ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ವೈ.ಎ.ಕಾಳೆ, ತಹಸೀಲ್ದಾರ್ ಶೃತಿ ಎಂ.ಮಲ್ಳಪ್ಪಗಭಡ್ರ್, ಜಿ.ಪಂ. ಮುಖ್ಯ ಯೋಜನಾಧಿಕಾರಿ ಅನ್ನದಾನಸ್ವಾಮಿ, ಪ್ರಮುಖರಾದ ಸೋಮಶೇಖರ್ ಬಣ್ಣದಮನಿ, ಎಂ.ಜAಬಯ್ಯನಾಯಕ, ಸಣ್ಣಮಾರೇಪ್ಪ ಇತರರಿದ್ದರು.