ಶಿಶುವಿಗೆ ತಾಯಿಹಾಲೇ ಶ್ರೇಷ್ಠ ಆಹಾರ

ರಾರಾವಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮವನ್ನು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮಹಮ್ಮದ್ ಕಾಸಿಂ ಉದ್ಘಾಟಿಸಿದರು. ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಪಂಪಾಪತಿ, ಬಸಯ್ಯ, ಮಹಮದ್ ಆರೀಫ್, ಪ್ರಯೋಗಶಾಲ ತಂತ್ರಜ್ಞ ವೇಣುಗೋಪಾಲ್ ರೆಡ್ಡಿ ಇತರರಿದ್ದರು.

Published on

ಸಿರಗುಪ್ಪ: ಮಗುವಿನ ಸಮಗ್ರ ಬೆಳವಣಿಗೆಗೆ ತಾಯಿಹಾಲೇ ಶ್ರೇಷ್ಠ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮಹಮ್ಮದ್ ಕಾಸಿಂ ಹೇಳಿದರು.

ಜಿಲ್ಲಾ ಆಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆರ್‌ಸಿಎಚ್-ಟಿಎಚ್‌ಒ ಮತ್ತು ರಾರಾವಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ರಾರಾವಿ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಸ್ತನ್ಯಪಾನ ಸಪ್ತಾಹದಲ್ಲಿ ಮಾತನಾಡಿದರು.

ಸ್ತನ್ಯಪಾನ ತಾಯಿ, ಮಗು, ಕುಟುಂಬ, ಸಮಾಜ ಹಾಗೂ ದೇಶದ ಆರೋಗ್ಯ ಅಭಿವೃದ್ಧಿಗೆ ಅತ್ಯುತ್ತಮ ಆಹಾರವಾಗಿದೆ. ಮಗುವಿನ ಬೆಳವಣಿಗೆಯಲ್ಲಿ ತಂದೆ-ತಾಯಿ ಇಬ್ಬರ ಪಾತ್ರವೂ ಮುಖ್ಯವಾದದ್ದು. ಗರ್ಭಿಣಿಯಾಗಿರುವಾಗಲೇ ತಾಯಿಹಾಲುಣಿಸುವ ಬಗ್ಗೆ ತಿಳಿದುಕೊಳ್ಳಬೇಕು. ನೌಕರಿ ಹೊಂದಿರುವ ಮಹಿಳೆಯರಿಗೆ ಶಿಶು ಪಾಲನಾ ರಜೆಗಳಿದ್ದು ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ತಾಯಿಗೆ ಮನೆ ಹಾಗೂ ಕೆಲಸದ ಸ್ಥಳದಲ್ಲಿ ಸ್ನೇಹಪರ ವಾತಾವರಣ ಒದಗಿಸಿಕೊಡಬೇಕು. ಇದರಿಂದ ನಾವು ಜಾಗತಿಕ ಮಟ್ಟದಲ್ಲಿ ಉನ್ನತ ಮಟ್ಟಕ್ಕೇರಲು ಸಹಾಯವಾಗುತ್ತದೆ ಎಂದರು.

ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಪಂಪಾಪತಿ, ಬಸಯ್ಯ, ಮಹಮದ್ ಆರೀಫ್, ಪ್ರಯೋಗಶಾಲ ತಂತ್ರಜ್ಞ ವೇಣುಗೋಪಾಲ್ ರೆಡ್ಡಿ, ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ ನಿರ್ಮಲಾ, ಆಶಾ ಕಾರ್ಯಕರ್ತೆ ಗೌಸಿಯಾ, ಗರ್ಭಿಣಿ ಮತ್ತು ತಾಯಂದಿರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net