ನಬಾರ್ಡ್ ಕಾರ್ಯ ಪರಿಶೀಲನೆಗೆ ವಿಶ್ವಬ್ಯಾಂಕ್ ತಂಡ

ಕೂಡ್ಲಿಗಿ ತಾಲೂಕಿನ ಕಸಾಪುರದ ಹುಣಸೆ ಮತ್ತು ಶೇಂಗಾ ಸಂಸ್ಕರಣ ಘಟಕ
ಕೂಡ್ಲಿಗಿ ತಾಲೂಕಿನ ಕಸಾಪುರದ ಹುಣಸೆ ಮತ್ತು ಶೇಂಗಾ ಸಂಸ್ಕರಣ ಘಟಕ
Published on

ಪ್ರಮುಖ ಮುಖ್ಯಾಂಶಗಳು

  • ಮಾ.09ರಂದು ವಿಜಯನಗರ, ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರವಾಸ
ಹೊಸಪೇಟೆ: ಕೂಡ್ಲಿಗಿ ತಾಲೂಕಿನ ಕಸಾಪುರದಲ್ಲಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್ (ನಬಾರ್ಡ್) ನಿಂದ 3.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಹುಣಸೆ ಮತ್ತು ಶೇಂಗಾ ಸಂಸ್ಕರಣ ಘಟಕಕ್ಕೆ ವಿಶ್ವಬ್ಯಾಂಕ್‌ನ ತಂಡ ಮಾ.09ಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಲಿದೆ.
ಕಳೆದ ಅಕ್ಟೋಬರ್ ತಿಂಗಳಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ದೇಶದ ಮೊದಲ ಹುಣಸೆ ಮತ್ತು ಶೇಂಗಾ ಸಂಸ್ಕರಣ ಘಟಕವನ್ನು ಉದ್ಘಾಟಿಸಿದರು. ಐದು ತಿಂಗಳ ನಂತರ ವಿಶ್ವಬ್ಯಾಂಕ್ ತಂಡದ ನಾಯಕಿ ನೋರಾ ಕೌಸ್, ಸದಸ್ಯರಾದ ಕುಲರಂಜನ್ ಕುಜುರ್ ಮತ್ತು ಅಮಿತ್ ಅರೋರಾ ಅವರನ್ನೊಳಗೊಂಡ ಈ ತಂಡ ಘಟಕ್ಕೆ ಬೇಟಿ ನೀಡಿ ಕಾರ್ಯವೈಖರಿ ವೀಕ್ಷಿಸಲಿದೆ. ಈ ಭೇಟಿಯು ಕೇವಲ ತಾಂತ್ರಿಕ ಪರಿಶೀಲನೆಗೆ ಸೀಮಿತವಾಗದೆ, ಭವಿಷ್ಯದಲ್ಲಿ ಮೂಲಸೌಕರ್ಯ ವೃದ್ಧಿ ಮತ್ತು ಹೆಚ್ಚಿನ ಬಂಡವಾಳ ಹೂಡಿಕೆ ಮಾಡುವ ಸಾಧ್ಯತೆಗಳಿವೆ.
ಈ ಭೇಟಿಯು ಕೇವಲ ಒಂದು ಘಟಕಕ್ಕೆ ಸೀಮಿತವಾಗದೆ, ಮಣ್ಣು ಮತ್ತು ನೀರಿನ ಸಂರಕ್ಷಣೆಗಾಗಿ ನಡೆಯುತ್ತಿರುವ ಜಲಾನಯನ ಕಾಮಗಾರಿಗಳ ಮೇಲೆಯೂ ಬೆಳಕು ಚೆಲ್ಲಲಿದೆ. ಅಲ್ಲದೆ, ಸಿಎಸ್‌ಆರ್ ನಿಧಿಯಡಿ ಒಂದು ಲಕ್ಷ ಹುಣಸೆ ಸಸಿಗಳನ್ನು ಬೆಳೆಸಿ ರೈತರಿಗೆ ವಿತರಿಸುವ ನರ್ಸರಿ ಸ್ಥಾಪನೆಯಂತಹ ಯೋಜನೆಗಳಿಗೆ, ಈ ಭೇಟಿ ಬಲ ತಂದAತಾಗಲಿದೆ ಎಂದು ಹೇಳಲಾಗುತ್ತಿದೆ. ಮಾ.9ರ ಭೇಟಿಯ ನಂತರ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಭಾಗದ ವಿವಿಧ ಕಾಮಗಾರಿಗಳನ್ನು ತಂಡವು ವೀಕ್ಷಿಸಲಿದ್ದು, ಒಟ್ಟಾರೆ ಈ ಪ್ರವಾಸವು ಈ ಭಾಗದ ಕೃಷಿ-ಉದ್ಯಮ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಹೂಡಿಕೆ ಮತ್ತು ಅಭಿವೃದ್ಧಿಯ ಭರವಸೆಯನ್ನು ಹುಟ್ಟುಹಾಕಿದೆ.
"

ಕೂಡ್ಲಿಗಿ ತಾಲೂಕಿನ ಕಸಾಪುರದಲ್ಲಿನ ಹುಣಸೆ ಮತ್ತು ಶೇಂಗಾ ಸಂಸ್ಕರಣ ಘಟಕಕ್ಕೆ ವಿಶ್ವಬ್ಯಾಂಕ್‌ನ ತಂಡ ಬೇಟಿ ನೀಡಲಿದೆ. ಕಾರಣ ಸ್ಪಷ್ಟವಾಗಿ ಗೊತ್ತಿಲ್ಲ. ಆದರೆ, ನಬಾರ್ಡ್ ನಿಂದ ಘಟಕ ಆರಂಭವಾಗಿರುವುದರಿAದ ಅದರ ಸ್ಥಿತಿಗತಿ ಪರಿಶೀಲನೆ ಮಾಡಬಹುದು. ಇದರಿಂದ ಘಟಕ ಅಭಿವೃದ್ಧಿಗೆ ಅನುಕೂಲ ಆಗುವ ಸಾದ್ಯತೆಗಳಿವೆ.

"

ಹುಣಸೆ ಮತ್ತು ಶೇಂಗಾ ಸಂಸ್ಕರಣ ಘಟಕಕ್ಕೆ ವಿಶ್ವಬ್ಯಾಂಕ್‌ನ ತಂಡ ಮಾ.09ಕ್ಕೆ ಭೇಟಿ ನೀಡಲಿದೆ. ನಂತರ ಚಳ್ಳಕೆರೆ ಭಾಗದಲ್ಲಿ ವಿವಿಧ ಕಾಮಗಾರಿಯನ್ನು ಪರಿಶೀಲನೆ ಮಾಡಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net