ಸಮಯ ಕಡಿತಕ್ಕೆ ಕಾರ್ಮಿಕರ ಒತ್ತಾಯ

ವ್ಯಾಸನಕೆರೆಯಲ್ಲಿ ಶುಕ್ರವಾರ ನರೇಗಾ ಕೂಲಿ ಕೆಲಸ ಕಡಿತಕ್ಕೆ ಒತ್ತಾಯಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ನೇತೃತ್ವದಲ್ಲಿ ಕೂಲಿ ಕಾರ್ಮಿಕರು ಶುಕ್ರವಾರ ಪ್ರತಿಭಟನೆ ನಡೆಸಿದರು. ಪ್ರಮುಖರಾದ ಕೆ.ಕುಶಣ್ಣ, ತಿಂದಪ್ಪ, ರಾಮಲಿ, ಭೀಮಪ್ಪ, ರಮೇಶ್, ವೆಂಕಟೇಶ್, ಲಕ್ಷಿö್ಮÃ, ನಬೀಸಾಬ್, ಯಲ್ಲಮ್ಮ, ಗಂಗಮ್ಮ, ಸುವರ್ಣ, ದೇವಕ್ಕ, ಕಾಳಮ್ಮ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ನರೇಗಾಕೂಲಿ ಕಾರ್ಮಿಕರಿಂದ ಬಿಸಿಲಿನ ತಾಪ ಹಿನ್ನಲೆ ಶೇ.30 ರಷ್ಟು ಕೆಲಸ ಕಡಿಮೆಗೆ ಆಗ್ರಹ
ಹೊಸಪೇಟೆ: ಸಮಯ ಕಡಿತಕ್ಕೆ ಕಾರ್ಮಿಕರ ಒತ್ತಾಯಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ನೇತೃತ್ವದಲ್ಲಿ ತಾಲೂಕಿನ ಡಣಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವ್ಯಾಸನಕೆರೆಯಲ್ಲಿ ಶುಕ್ರವಾರ ನರೇಗಾ ಕೂಲಿ ಕಾರ್ಮಿಕರು ಆಗ್ರಹಿಸಿದರು.
ಅದಕ್ಕೂ ಮೊದಲು ಸ್ಥಳೀಯ ನರೇಗಾ ಕಾರ್ಮಿಕರು ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ನೇತೃತ್ವದಲ್ಲಿ ಕಾರ್ಮಿಕರು ಕೇಕ್ ಕತ್ತರಿಸುವ ಮೂಲಕ ವಿಶ್ವ ಕಾರ್ಮಿಕ ದಿನ ಆಚರಿಸಿದರು.
ಸಂಘಟನೆಯ ಜಿಲ್ಲಾ ಸಂಚಾಲಕಿ ಶೈನಾಜ್ ಮಾತನಾಡಿ, ಜಿಲ್ಲೆಯಲ್ಲಿ ಅಧಿಕ ಬಿಸಿಲಿನ ತಾಪ ಇರುವುದರಿಂದ ಸರ್ಕಾರ ಕೆಲಸದಲ್ಲಿ ಶೇ.30 ರಷ್ಟು ಕೆಲಸ ಕಡಿತ ಮಾಡಬೇಕು, ಸರ್ಕಾರವನ್ನು ಒತ್ತಾಯಿಸಿದರು.
ನರೇಗಾ ಕೂಲಿ ಕಾರ್ಮಿಕರು ಕಲ್ಯಾಣï ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಪ್ರತಿ ವರ್ಷ ಬಿಸಿಲಿನ ತಾಪ ಅಧಿಕ ಇರುವುದರಿಂದ ಕೆಲಸದಲ್ಲಿ ಶೇ.30 ರಷ್ಟು ಕಡಿತ ಮಾಡಲಾಗುತ್ತಿತ್ತು. ಆದರೆ ಈ ವರ್ಷ ಕೆಲಸ ಕಡಿತ ಮಾಡಿದ ಆದೇಶ ಈ ವರೆಗೆ ಬಂದಿಲ್ಲ. ಅಲ್ಲದೆ ಈ ವರ್ಷದ ಕ್ರಿಯಾ ಯೋಜನೆ ಈ ವರೆಗೆ ಅನುಮೋದನೆ ಆಗದ ಹಿನ್ನಲೆಯಲ್ಲಿ ಕಾರ್ಮಿಕರಿಗೆ ಕೆಲಸ ಸಿಗುತ್ತಿಲ್ಲ. ಈ ಹಿನ್ನಲೆಯಲ್ಲಿ ಕೂಡಲೇ ಕ್ರೀಯಾ ಯೋಜನೆಗೆ ಅನುಮೋದನೆ ನೀಡುವಂತೆ ಗ್ರಾಮೀಣಾಭಿವೃದ್ದಿ ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಒತ್ತಾಯಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net