ಮಹಿಳಾ ಮೀಸಲಾತಿ ಬಿಜೆಪಿಯ ನಾಟಕ

ಕಮಲಾಕ್ಷಿ ರಾಜಣ್ಣ
ಕಮಲಾಕ್ಷಿ ರಾಜಣ್ಣ
Published on
ಹೊಸಪೇಟೆ: ಕಾಂಗ್ರೆಸ್ ಮಹಿಳಾ ಮೀಸಲಾತಿಯನ್ನು ಮಾಜಿ ಪ್ರಧಾನಿ ರಾಜೀವ್‌ಗಾಂಧಿ 1989ರಲ್ಲಿ ಸಂವಿಧಾನದ 64ನೇ ತಿದ್ದುಪಡಿ ಮಸೂದೆ ಮೂಲಕ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲು ಕಲ್ಪಿಸುವ ದೂರದೃಷ್ಟಿ ಹೊಂದಿದ್ದರು ಎಂದು ರಾಷ್ಟಿçÃಯ ಮಹಿಳಾ ಕಾಂಗ್ರೆಸ್ ಘಟಕದ ಪ್ರಧಾನ ಕಾರ್ಯದರ್ಶಿ ಕಮಲಾಕ್ಷಿ ರಾಜಣ್ಣ ಪ್ರಶ್ನಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ನಾರಿಶಕ್ತಿ ವಂದನಾ ಕಾಯಿದೆ ಜತೆ ಸೇರಿಸಿದರೆ ಲಾಭವಾಗಬಹುದೆಂಬ ಲೆಕ್ಕಾಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇಂಥದ್ದೊAದು ಹುನ್ನಾರ ನಡೆಸಿದ್ದರಿಂದ ಕಾಂಗ್ರೆಸ್ ಸೇರಿ ವಿಪಕ್ಷಗಳು ಬೆಂಬಲ ಸೂಚಿಸಿಲ್ಲ. ವಿಶೇಷ ಅಧಿವೇಶನ ಕರೆದು 543 ಸ್ಥಾನಗಳಲ್ಲೇ ಶೇ.33ರಷ್ಟು ಮೀಸಲು ನಾರಿ ಶಕ್ತಿ ವಂದನಾ ಕಾಯಿದೆ ತಿದ್ದುಪಡಿ ತರಲು ಮೋದಿ ಸರಕಾರ ಸಿದ್ಧವಿಲ್ಲವೇಕೆ? ಎಂದು ಪ್ರಶ್ನಿಸಿದರು.
ವಿರೋಧ ಪಕ್ಷಗಳು ಮಹಿಳಾ ಮೀಸಲಾತಿ ವಿರೋಧಿಗಳೆಂದು ಸುಳ್ಳು ಹರಡುವುದಕ್ಕಾಗಿ ಕೇವಲ ನಾಟಕೀಯ ಬೆಳವಣಿಗೆಗೆ ಮುಂದಾಗಿರುವುದು ದುರದೃಷ್ಟಕರ. ಇದಲ್ಲದೆ, ನಾರಿ ರಕ್ಷಕರೆಂದು ಹೇಳುವ ಪ್ರಧಾನಿ ನರೇಂದ್ರ ಮೋದಿಯವರು ಯೋಚಿಸಬೇಕಿದೆ. ಕಳೆದ 11 ವರ್ಷಗಳಲ್ಲಿ ಮಣಿಪುರ ಸೇರಿದಂತೆ ನಾನಾ ಕಡೆ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ಕಿರುಕುಳ, ಅತ್ಯಾಚಾರ ನಡೆಸಿದ ಅಪರಾಧಿಗಳಿಗೆ ಬಿಜೆಪಿ ನಾಯಕರ ಸನ್ಮಾನ ಮಾಡಿದ್ದಲ್ಲದೆ, ಬಿಜೆಪಿ ನಾಯಕರೇ ಮಹಿಳಾ ಪೀಡಕರು, ಅತ್ಯಾಚಾರಿಗಳಾಗಿದ್ದರೂ ಅಂಥವರಿಗೆ ಮೋದಿ ರಕ್ಷರಾಗಿದ್ದಾರೆಂದು ವ್ಯಂಗ್ಯವಾಡಿದರು.
ಕೆಪಿಸಿಸಿ ವಕ್ತಾರೆ ವೀಣಾ ಮಹಾಂತೇಶ್, ಕೆಪಿಸಿಸಿ ಮಹಿಳಾ ವಿಭಾಗದ ರಾಜ್ಯ ಕಾರ್ಯದರ್ಶಿ ಕವಿತಾ ಈಶ್ವರಸಿಂಗ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಿಂಬಗಲ್ ರಾಮಕೃಷ್ಣ, ನಗರಸಭೆ ಸದಸ್ಯರಾದ ಮುನ್ನಿ ಕಾಸೀಂ, ಕನಕಮ್ಮ, ಮುಮ್ತಾಜ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net