ಮಹಿಳೆಯರು ಸ್ಟ್ರಾಂಗ್ ಎಂದು ತೋರಿಸಿ

ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅವರಿಗೆ ವಿಜಯ ಮಹಿಳಾ ಪಡೆಗೆ ಚಾಲನೆ ನೀಡಿದರು
ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅವರಿಗೆ ವಿಜಯ ಮಹಿಳಾ ಪಡೆಗೆ ಚಾಲನೆ ನೀಡಿದರು
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಸಲಹೆ
ಹೊಸಪೇಟೆ: ಮಹಿಳೆಯರ ರಕ್ಷಣೆಗೆಂದೇ ಈ ವಿಶೇಷ ಪಡೆ ರಚಿಸಲಾಗಿದ್ದು, ಪುಂಡರಿಗೆ ಸಿಂಹಸ್ವಪ್ನವಾಗಲಿದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಹೇಳಿದರು.
ವಿಜಯನಗರ ಪೊಲೀಸ್ ಇಲಾಖೆಯಿಂದ ನಗರದ ಪುನೀತ್ ವೃತ್ತದಲ್ಲಿ ವಿಜಯ ಮಹಿಳಾ ಮತ್ತು ಮಕ್ಕಳ ಸುರಕ್ಷಾ ಪಡೆಗೆ ಚಾಲನೆ ನೀಡಿ ಮಾತನಾಡಿದರು.
ಯುವತಿಯರನ್ನು ಚುಡಾಯಿಸುವುದು, ಕಾಡಿಸುವುದು, ಕೀಟಲೆ ಮಾಡಿದರೆ ಹುಷಾರ್!.... ರೋಡ್ ರೋಮಿಯೋಗಳಿಗೆ ಲಗಾಮು ಹಾಕಲೆಂದೇ ಮಹಿಳಾ ಮತ್ತು ಮಕ್ಕಳ ಸುರಕ್ಷಾ ಪಡೆ ಬಂದಿದೆ. ಅತ್ಯಾಚಾರ, ದೌಜರ್ನ್ಯ, ಕಿರುಕುಳ ಸೇರಿದಂತೆ ಇತರೆ ಪ್ರಕರಣಗಳು ಹೆಚ್ಚಾಗುತ್ತಿದೆ. ಯುವತಿಯರ ರಕ್ಷಣೆಗೆ ಪೊಲೀಸರು ಮುಂದಾಗಿದ್ದಾರೆ. ಕಾನೂನು ಸುವ್ಯವಸ್ಥೆ ಹಾಳು ಮಾಡುವ ಪರೋಡಿಗಳ ಹೆಡೆಮುರಿ ಕಟ್ಟಲು ವಿಜಯ ಮಹಿಳಾ ಮತ್ತು ಮಕ್ಕಳ ಸುರಕ್ಷಾ ಪಡೆಗೆ ಸಜ್ಜಾಗಿದೆ ಎಂದರು.
ಶಾಲಾ, ಕಾಲೇಜು ಪಾರ್ಕ್ ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ಈ ತಂಡ ಯುವತಿಯರಲ್ಲಿ ಜಾಗೃತಿ ಮೂಡಿಸುತ್ತದೆ. ಮಹಿಳೆಯರು ಹೆದರುವ ಅವಶ್ಯಕತೆ ಇಲ್ಲ. ಸಮಾಜದಲ್ಲಿ ಹೆಣ್ಣುಮಕ್ಕಳೇ ಸ್ಟಾಂಗು ಗುರು ಎನ್ಜುವ ಮಾತು ನಿಜಗೊಳಿಸಬೇಕು ಎಂದು ನೆರೆದಿದ್ದ ವಿದ್ಯಾರ್ಥಿನಿಯರಿಗೆ ಕರೆ ನೀಡಿದರು.
ಎಸ್ಪಿ ಎಸ್.ಜಾಹ್ನವಿ ಮಾತನಾಡಿ, ಮಹಿಳೆಯರ ಮತ್ತು ಮಕ್ಕಳ ಸುರಕ್ಷತೆಯ ಹಿತದೃಷ್ಟಿಯಿಂದ ವಿಜಯ ಮಹಿಳಾ ಸುರಕ್ಷಾ ಪಡೆಯನ್ನು ರಚಿಸಲಾಗಿದೆ. ಜಿಲ್ಲೆಯಾದ್ಯಂತ ಇರುವ ಶಾಲಾ-ಕಾಲೇಜುಗಳಿಗೆ, ವಸತಿ ನಿಲಯಗಳಿಗೆ, ಸರ್ಕಾರಿ ಕಚೇರಿಗಳಿಗೆ, ಕೈಗಾರಿಕಾ ಪ್ರದೇಶಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಿ ಕಾನೂನುಗಳ ಕುರಿತು ಮಾಹಿತಿಯನ್ನು ನೀಡಿ ಮಹಿಳೆಯರು ಮತ್ತು ಮಕ್ಕಳಲ್ಲಿ ಜಾಗೃತಿಯನ್ನು ಮೂಡಿಸಲಿದೆ. ಸಾರ್ವಜನಿಕ ಸ್ಥಳಗಳಲ್ಲಿ ಆಗಬಹುದಾದ ಸಮಸ್ಯೆಗಳನ್ನು ನಿಗಾವಹಿಸಿ, ಸೂಕ್ತ ಕಾನೂನು ಕ್ರಮಗಳನ್ನು ಜರುಗಿಸುತ್ತದೆ. ಕಾನೂನಿನ ಅಡಿಯಲ್ಲಿ ಇಲಾಖೆಗಳ ಲಭ್ಯವಿರುವ ಸೌಲಭ್ಯಗಳನ್ನು ಕುರಿತು ಮಾಹಿತಿ ನೀಡುವುದು. ಶಾಲಾ, ಕಾಲೇಜು ವಸತಿ ನಿಲಯಗಳಿಗೆ ಭೇಟಿ ನೀಡಿ ಅಲ್ಲಿನ ವಿದ್ಯಾರ್ಥಿನಿಯರೊಂದಿಗೆ ಸಂವಹಿಸಲಾಗುತ್ತದೆ. ಪೋಕ್ಸ್, ಬಾಲ್ಯವಿವಾಹ ನಿಷೇಧ ಕಾಯ್ದೆ, ಬಾಲ ಕಾರ್ಮಿಕ ನಿಷೇಧ ಕಾಯ್ದೆ, ಮಕ್ಕಳ ನ್ಯಾಯ ಕಾಯ್ದೆ, ಕೌಟುಂಬಿಕ ಹಿಂಸೆ ಕಾಯ್ದೆ, ವರದಕ್ಷಿಣೆ ನಿಷೇಧ ಕಾಯ್ದೆ, ಉದ್ಯೋಗ ಸ್ಥಳದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ, ಸೈಬರ್ ವಂಚನೆ, ಮಾದಕ ವಸ್ತುಗಳ ಸೇವೆನೆಯಿಂದಾಗುವ ದುಷ್ಪರಿಣಾಮಗಳು ಸೇರಿದಂತೆ ವಿವಿಧ ಕಾಯ್ದೆಗಳ ಕುರಿತಾಗಿ ಅರಿವು ಮೂಡಿಸಲಾಗುವುದು ಎಂದು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net