ಹೊಸೂರಿನಲ್ಲಿ ತಾಯಮ್ಮ ಶಕ್ತಿ ಸಂಸ್ಥೆಯಿAದ ಮಗ್ಗಂವರ್ಕ್ ಕೇಂದ್ರವನ್ನು ಸೋಮವಾರ ತಾಯಮ್ಮ ಶಕ್ತಿ ಸಂಸ್ಥೆಯ ಅಧ್ಯಕ್ಷೆ ಕವಿತಾ ಈಶ್ವರ್ ಸಿಂಗ್ ಉದ್ಘಾಟಿಸಿದರು. ಹೊಸೂರು ಗ್ರಾ.ಪಂ. ಪಿಡಿಒ ಗಂಗಾಧರ್, ಅಧ್ಯಕ್ಷೆ ಜಯಪದ್ಮಾ, ಮಾಜಿ ಉಪಾಧ್ಯಕ್ಷೆ ಶ್ರುತಿ, ಪ್ರಮುಖರಾದ ಲಲಿತ ನಾಯಕ್ ಶೋಭಾ ಗಾಯಕ್ವಾಡ್, ವಿಜಯ ಕುಮಾರಿ, ಪ್ರಮೀಳ ಇತರರಿದ್ದರು.
ಹೊಸಪೇಟೆ: ತಾಲೂಕಿ ಹೊಸೂರಿನಲ್ಲಿ ತಾಯಮ್ಮ ಶಕ್ತಿ ಸಂಸ್ಥೆಯಿAದ ಮಗ್ಗಂವರ್ಕ್ ಕೇಂದ್ರವನ್ನು ಸೋಮವಾರ ಉದ್ಘಾಟಿಸಲಾಯಿತು.
ತಾಯಮ್ಮ ಶಕ್ತಿ ಸಂಸ್ಥೆಯ ಅಧ್ಯಕ್ಷೆ ಕವಿತಾ ಈಶ್ವರ್ ಸಿಂಗ್ ಮಾತನಾಡಿ, ಮನಸ್ಸಿನಲ್ಲಿ ಸಂಕಲ್ಪವಿದ್ದರೆ ಮಹಿಳೆಯರು ಏನು ಬೇಕಾದರೂ ಸಾಧಿಸಬಹುದು. ಕಾನೂನಿನ ದೃಷ್ಟಿಯಲ್ಲಿ ಗಂಡು-ಹೆಣ್ಣು ಎನ್ನದೇ ಎಲ್ಲರೂ ಸಮಾನರು. ಕುಟುಂಬ ಜೀವನದಲ್ಲಿ ಪರಸ್ಪರ ಗೌರವ ಅಗತ್ಯವಾಗಿದ್ದು, ಮಹಿಳೆಯರ ಮೇಲೆ ಅನ್ಯಾಯ ಮಾಡುವುದು ತಪ್ಪು. ಸರ್ಕಾರ ಮಹಿಳೆಯರಿಗೆ ಸೌಲಭ್ಯಗಳನ್ನು ನೀಡುವುದು ತನ್ನ ಕರ್ತವ್ಯವಾಗಿದ್ದು, ಮಹಿಳೆಯರು ಸ್ವಾವಲಂಬಿಗಳಾಗಿ ತಮ್ಮ ಗುರಿ ಸಾಧನೆಗೆ ಶ್ರಮಿಸಬೇಕು. ಯಾರಾದರೂ ಸಹಾಯ ಕೇಳಿ ಬಂದರೆ ಸಾಧ್ಯವಾದಷ್ಟು ಸಹಾಯ ಮಾಡಬೇಕು ಎಂದರು.