ಉದ್ಯಾನ ಸ್ವಚ್ಛಗೊಳಿಸಿದ ಮಹಿಳೆಯರು-ಮಕ್ಕಳು

ಕೊಟ್ಟೂರಿನ ಬಸವೇಶ್ವರ ನಗರದ ಉದ್ಯಾನವನ್ನು ಬಡಾವಣೆಯ ಮಹಿಳೆಯರು ಮತ್ತು ಮಕ್ಕಳು ಸ್ವಚ್ಛಗೊಳಿಸುತ್ತಿರುವುದು.
ಕೊಟ್ಟೂರಿನ ಬಸವೇಶ್ವರ ನಗರದ ಉದ್ಯಾನವನ್ನು ಬಡಾವಣೆಯ ಮಹಿಳೆಯರು ಮತ್ತು ಮಕ್ಕಳು ಸ್ವಚ್ಛಗೊಳಿಸುತ್ತಿರುವುದು.
Published on
ಕೊಟ್ಟೂರು: ಪಟ್ಟಣ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತ ಮಹಿಳೆಯರು ಭಾನುವಾರ ತಾವೇ ಪೊರಕೆ ಹಿಡಿದು ಮಕ್ಕಳೊಂದಿಗೆ ಪಟ್ಟಣದ ಬಸವೇಶ್ವರ ನಗರದ ಉದ್ಯಾನದಲ್ಲಿ ಸ್ವಚ್ಛತೆ ಕೈಗೊಂಡರು.
ಉದ್ಯಾನದಲ್ಲಿ ಮರಗಳು ಸಮೃದ್ಧವಾಗಿ ಬೆಳೆದಿದ್ದು, ಇಲ್ಲಿನ ಪರಿಸರ ಬಡಾವಣೆಯ ಜನರು ವಾಯುವಿಹಾರ ಮಾಡಲು ಮತ್ತು ಮಕ್ಕಳು ಆಟ ಆಡಲು ಉಪಯುಕ್ತವಾಗಿದೆ. ಆದರೆ, ಗಿಡಮರಗಳಿಂದ ಬಿದ್ದ ಎಲೆಗಳ ತ್ಯಾಜ್ಯ ವಿಲೇವಾರಿಯಾಗದ ಹಿನ್ನೆಲೆಯಲ್ಲಿ ಉದ್ಯಾನ ವಿಷಜಂತುಗಳು ಆವಾಸಸ್ಥಾನವಾಗಿದೆ. ಇದರಿಂದಾಗಿ ಉದ್ಯಾನ ಸ್ವಚ್ಛಗೊಳಿಸುವಂತೆ ಬಡಾವಣೆ ನಿವಾಸಿಗಳು ಪಟ್ಟಣ ಪಂಚಾಯಿತಿಗೆ ಹಲವು ಬಾರಿ ವಿನಂತಿಸಿದ್ದರೂ ಪ್ರಯೋಜನವಾಗಿರಲಿಲ್ಲ. ಈ ಕಾರಣಕ್ಕೆ ಮಹಿಳೆಯರು ಮಕ್ಕಳೊಂದಿಗೆ ಸ್ವಚ್ಛತೆ ಕೈಗೊಂಡರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net