ಎರಡೇ ತಾಸಿನಲ್ಲಿ ವಿಧವ ವೇತನ

ಹೊಸಪೇಟೆಯಲ್ಲಿ ರಾಷ್ಟ್ರೀಯ ಕುಟುಂಬ ನೆರವು ಯೋಜನೆ, ನಿರ್ಗತಿಕ ವಿಧವಾ ವೇತನ ಪಿಂಚಣಿ ಮಂಜೂರಾತಿ ಅದೇಶ ಪತ್ರ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಬುಧವಾರ ಮ್ಯಾಸಕೇರಿ ಫಲಾನುಭವಿ ಮರಡಿ ಶಾರದಮ್ಮ ಅವರಿಗೆ ವಿತರಿಸಿದರು.
ಹೊಸಪೇಟೆಯಲ್ಲಿ ರಾಷ್ಟ್ರೀಯ ಕುಟುಂಬ ನೆರವು ಯೋಜನೆ, ನಿರ್ಗತಿಕ ವಿಧವಾ ವೇತನ ಪಿಂಚಣಿ ಮಂಜೂರಾತಿ ಅದೇಶ ಪತ್ರ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಬುಧವಾರ ಮ್ಯಾಸಕೇರಿ ಫಲಾನುಭವಿ ಮರಡಿ ಶಾರದಮ್ಮ ಅವರಿಗೆ ವಿತರಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಧಿಕಾರಿಗಳಿಂದ ಫಲಾನುಭವಿಗೆ ಆದೇಶ ಪತ್ರ ವಿತರಣೆ
  • ವಿಧವಾ ವೇತನ ಪಿಂಚಣಿ ಯೋಜನೆಗೆ ಅರ್ಜಿ

ಹೊಸಪೇಟೆ: ರಾಷ್ಟ್ರೀಯ ಕುಟುಂಬ ನೆರವು ಯೋಜನೆ ಹಾಗೂ ನಿರ್ಗತಿಕ ವಿಧವಾ ವೇತನ ಪಿಂಚಣಿ ಯೋಜನೆಗೆ ಅರ್ಜಿ ಸಲ್ಲಿಸಿದ ಕೇವಲ ಎರಡು ತಾಸಿನಲ್ಲಿ ಮಂಜೂರಾತಿ ಅದೇಶ ಪತ್ರವನ್ನು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಬುಧವಾರ ನಗರದ ಮ್ಯಾಸಕೇರಿ ಫಲಾನುಭವಿ ಮರಡಿ ಶಾರದಮ್ಮ ಅವರಿಗೆ ವಿತರಿಸಿದರು. ತಹಸೀಲ್ ಕಚೇರಿ ತ್ವರಿತ ಸೇವೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಬಳಿಕ ಜಿಲ್ಲಾಧಿಕಾರಿ ಮಾತನಾಡಿ, ನಗರದ ಮ್ಯಾಸಕೇರಿ ನಿವಾಸಿ ಮರಡಿ ಶಾರದಮ್ಮ ಇವರ ಗಂಡ ಮರಡಿ ವೆಂಕಟೇಶ (45) ಅವರು .13 ರಂದು ವಯಸ್ಸಿನಲ್ಲಿ ಸ್ವಾಭಾವಿಕವಾಗಿ ಮೃತರಾಗಿದ್ದರು. ಇವರು ಅರ್ಜಿ ಸಲ್ಲಿಸಿದ ಎರಡೇ ತಾಸಿನಲ್ಲಿ ತಹಸೀಲ್ದಾರ್ ಶೃತಿ ಎಂ.ಮಳ್ಳನಗೌಡ್ರ್ ಮಂಜೂರಾತಿ ಆದೇಶ ಪತ್ರಗಳನ್ನು ಸಿದ್ದಪಡಿಸಿದ್ದಾರೆ. ನೆರವು ಯೋಜನೆಯಡಿ 20 ಸಾವಿರ ರೂ. ಹಾಗೂ ಪಿಂಚಣಿ ಯೋಜನೆಯಡಿ ಮಾಸಿಕ 800 ರೂ. ಗಳನ್ನು ನೀಡಲಾಗಿದೆ. ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ವಿಧವಾ ವೇತನ ಸೇರಿದಂತೆ ರಾಷ್ಟ್ರೀಯ ಕುಟುಂಬ ನೆರವು ಯೋಜನೆ ತ್ವರಿತವಾಗಿ ವಿಲೇವಾರಿ ಮಾಡಲು ಕ್ರಮ ವಹಿಸಬೇಕು. ಮಧ್ಯವರ್ತಿಗಳನ್ನು ಅವಲಂಬಿಸದೇ ನೇರವಾಗಿ ಫಲಾನುಭವಿಗಳು ಆಯಾ ತಾಲೂಕಿನ ತಾಲೂಕು ಕಚೇರಿ ಹಾಗೂ ತಹಸೀÃಲ್ದಾರರನ್ನು ಭೇಟಿ ಮಾಡಿದರೇ ಶೀಘ್ರ ಸೇವೆ ಸಿಗಲಿದೆ ಎಂದರು.

ಅಪರ ಜಿಲ್ಲಾಧಿಕಾರಿ .ಬಾಲಕೃಷ್ಣಪ್ಪ, ತಹಸೀಲ್ದಾರ್ ಶೃತಿ ಎಂ.ಮಳ್ಳನಗೌಡ್ರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net