ಹೆಲ್ಮೆಟ್ ಧರಿಸಿ ಅಮೂಲ್ಯ ಜೀವ ಉಳಿಸಿಕೊಳ್ಳಿ

ಹರಪನಹಳ್ಳಿಯಲ್ಲಿ ಹೆಲ್ಮೆಟ್ ಕುರಿತು ಜಾಗೃತಿ ಅಭಿಯಾನ ನಡೆಸಲಾಯಿತು. ಪಿಎಸ್‌ಐ ಶಂಭುಲಿಂಗಯ್ಯ ಎಸ್.ಹಿರೇಮಠ, ಎಎಸ್‌ಐ ಮಂಜಪ್ಪ, ಸಿಬ್ಬಂದಿ ಅಂಜಿನಪ್ಪ, ಅಂಬರೀಶ, ಫಯಾಜ್, ಕೊಟ್ರೇಶ್, ವೀರೇಂದ್ರ, ಸುಮಾ ಇತರರಿದ್ದರು.
ಹರಪನಹಳ್ಳಿಯಲ್ಲಿ ಹೆಲ್ಮೆಟ್ ಕುರಿತು ಜಾಗೃತಿ ಅಭಿಯಾನ ನಡೆಸಲಾಯಿತು. ಪಿಎಸ್‌ಐ ಶಂಭುಲಿಂಗಯ್ಯ ಎಸ್.ಹಿರೇಮಠ, ಎಎಸ್‌ಐ ಮಂಜಪ್ಪ, ಸಿಬ್ಬಂದಿ ಅಂಜಿನಪ್ಪ, ಅಂಬರೀಶ, ಫಯಾಜ್, ಕೊಟ್ರೇಶ್, ವೀರೇಂದ್ರ, ಸುಮಾ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜೀವ ಉಳಿಸಿಕೊಳ್ಳಿ

ಹೆಲ್ಮೆಟ್ ಧರಿಸಿ ಅಮೂಲ್ಯ ಜೀವ ಉಳಿಸಿಕೊಳ್ಳಿ

ಹರಪನಹಳ್ಳಿ: ಹೆಲ್ಮೆಟ್ ಧರಿಸದೆ ವಾಹನ ಚಲಿಸಿದರೆ ಅಪಘಾತವಾದಾಗ ತಲೆಗೆ ಪೆಟ್ಟಾಗಿ ಸಾವು, ನೋವು ಸಂಭವಿಸುತ್ತಿವೆ ಎಂದು ಪಿಎಸ್‌ಐ ಶಂಭುಲಿಂಗಯ್ಯ ಎಸ್.ಹಿರೇಮಠ ಹೇಳಿದರು.
ನಗರದ ಹಳೇ ತಾಲೂಕು ಆಫೀಸ್ ಎದುರುಗಡೆ ಶನಿವಾರ ಹೆಲ್ಮೆಟ್ ಕುರಿತು ವಾಹನ ಸವಾರರಿಗೆ ಜಾಗೃತಿ ಮೂಡಿಸಿ ಮಾತನಾಡಿದರು. ತಲೆ ಭಾಗ ಸೂಕ್ಷ್ಮವಾಗಿರುತ್ತದೆ. ಬೈಕ್‌ನಲ್ಲಿ ಚಲಿಸುವಾಗ ಅಪಘಾತವಾದರೆ ತಲೆಗೆ ಗಾಯವಾಗುವ ಸಾಧ್ಯತೆ ಇರುತ್ತದೆ.
ಆದ್ದರಿಂದ ಹೆಲ್ಮೆಟ್ ಧರಿಸಿ ಅಮೂಲ್ಯ ಜೀವ ಉಳಿಸಿಕೊಳ್ಳಬೇಕು. ನಿಮ್ಮ ಬರುವಿಕೆಗಾಗಿ ಕುಟುಂಬ ಕಾಯುತ್ತಿರುವುದು ಗಮನದಲ್ಲಿ ಇರಬೇಕು ಎಂದರು. ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸಿದವರಿಗೆ ದಂಡ ವಿಧಿಸಲಾಯಿತು. ತಾಲೂಕಿನ ಚಿಗಟೇರಿ, ಅರಸೀಕೆರೆ, ಹಲುವಾಗಲು, ತೆಲಿಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹೆಲ್ಮೆಟ್ ಜಾಗೃತಿ ಅಭಿಯಾನ ನಡೆಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net