ಹೂವಿನಹಡಗಲಿ: ಸೋಗಿ ಕಲ್ಲೇಶ್ವರ ದೇವಸ್ಥಾನದಲ್ಲಿ ಮಳೆಗಾಗಿ ಪ್ರಾರ್ಥಿಸಿ ಗ್ರಾಮಸ್ಥರು ಐದು ದಿನದಿಂದ ಕೈಗೊಂಡಿದ್ದ ಜಲಾಭಿಷೇ ಸಂಪನ್ನಗೊಂಡಿತು. ಬೆಳಗ್ಗೆ ಪಲ್ಲಕ್ಕಿ ಉತ್ಸವ ಜರುಗಿತು. ಬಳಿಕ ಅಲ್ಲಿಂದ ಗ್ರಾಮದ ಹೊರ ವಲಯದಲ್ಲಿರುವ ಮಳೆ ಮಲ್ಲಪ್ಪ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಲಾಯಿತು. ರೈತರು ಸಾಮೂಹಿಕವಾಗಿ ನೈವೇದ್ಯ ಸಲ್ಲಿಸಿದರು. ಸೋಮವಾರ ಬೆಳಗ್ಗೆಯಿಂದ ಮಂಗಳವಾರದವರೆಗೆ ಮಳೆ ಸುರಿದ ಕಾರಣ ಗ್ರಾಮಸ್ಥರು ಮಳೆ ಮಲ್ಲೇಶ್ವರ ಸ್ವಾಮಿಯೇ ಮಳೆ ಕರುಣಿಸಿದ ಎಂದು ಸಂತಸ ವ್ಯಕ್ತ ಪಡಿಸಿಸರು. ಹೊಳಗುಂದಿಯಲ್ಲಿ ಮಳೆಗಾಗಿ ಪ್ರಾರ್ಥಿಸಿ ಹಾಲಸ್ವಾಮಿಯ ಉತ್ಸವ ಜರುಗಿಸಲಾಯಿತು. ನಿರಂತರ ಸುರಿದ ಮಳೆಯಲ್ಲೇ ಭಕ್ತರು ಉತ್ಸವ ನಡೆಸಿ ಸಂಭ್ರಮಿಸಿದರು.