ವಿಜಯನಗರ ಕೃಷಿ ಇಲಾಖೆ ಕಂಗಾಲು

ಎಐ
ಎಐ
Published on

ಪ್ರಮುಖ ಮುಖ್ಯಾಂಶಗಳು

  • 171 ಹುದ್ದೆಗಳಲ್ಲಿ 105 ಖಾಲಿ, ರೈತರಿಗ್ಯಾರು ದಿಕ್ಕು?
  • ಸಿಬ್ಬಂದಿ ಕೊರತೆಯಿಂದ ಕಂಗಾಲು
ಹೊಸಪೇಟೆ: ಕೃಷಿಕರ ಕೈ ಹಿಡಿದು ಮುನ್ನಡೆಸಬೇಕಾದ ಜಿಲ್ಲೆಯ ಕೃಷಿ ಇಲಾಖೆಯೇ ಈಗ ಸಿಬ್ಬಂದಿ ಕೊರತೆಯಿಂದಾಗಿ ತೀವ್ರವಾಗಿ ಬಳಲುತ್ತಿದೆ. ವಿಜಯನಗರ ಜಿಲ್ಲೆಯ ಕೃಷಿ ಇಲಾಖೆಯಲ್ಲಿ ಮಂಜೂರಾದ ಹುದ್ದೆಗಳಿಗಿಂತ ಖಾಲಿ ಇರುವ ಹುದ್ದೆಗಳ ಸಂಖ್ಯೆಯೇ ಹೆಚ್ಚಾಗಿದ್ದು, ರೈತರಿಗೆ ಸಕಾಲದಲ್ಲಿ ಸೇವೆ ತಲುಪಿಸಲು ಇಲಾಖೆ ಹರಸಾಹಸ ಪಡುತ್ತಿದೆ.
ಜಿಲ್ಲೆಯ ಕೃಷಿ ಇಲಾಖೆಯ ಅಧಿಕೃತ ಮಾಹಿತಿಯ ಪ್ರಕಾರ, ಇಲಾಖೆಗೆ ಒಟ್ಟು 171 ಹುದ್ದೆಗಳು ಮಂಜೂರಾಗಿದ್ದು, ಕೇವಲ 66 ಹುದ್ದೆಗಳು ಮಾತ್ರ ಭರ್ತಿಯಾಗಿವೆ. ಬರೋಬ್ಬರಿ 105 ಹುದ್ದೆಗಳು ಖಾಲಿ ಉಳಿದುಕೊಂಡಿವೆ. ಇಲಾಖೆಯ ಜಂಟಿ ನಿರ್ದೇಶಕರು ಹಾಗೂ ಉಪ ನಿರ್ದೇಶಕರ ತಲಾ ಒಂದೊAದು ಹುದ್ದೆಗಳು ಭರ್ತಿಯಾಗಿದ್ದರೂ, ಕೆಳಹಂತದ ಸಿಬ್ಬಂದಿ ಕೊರತೆ ಇಲಾಖೆಯನ್ನು ಕಾಡುತ್ತಿದೆ. ಒಟ್ಟು 39 ಕೃಷಿ ಅಧಿಕಾರಿಗಳ ಹುದ್ದೆಗಳಲ್ಲಿ 31 ಭರ್ತಿಯಾಗಿದ್ದು, 8 ಖಾಲಿ ಇವೆ.
ಸಿಬ್ಬಂದಿ ಕೊರತೆಯ ನಡುವೆಯೂ ಇಲಾಖೆಯ ಮೂಲಸೌಕರ್ಯ ತಕ್ಕಮಟ್ಟಿಗೆ ಉತ್ತಮವಾಗಿದೆ. ಜಿಲ್ಲೆಯ ಬಹುತೇಕ ತಾಲೂಕುಗಳಿಗೆ ಸ್ವಂತ ಕಟ್ಟಡಗಳಿವೆ. ಹಡಗಲಿಯಲ್ಲಿ 3, ಹಗರಿಬೊಮ್ಮನಹಳ್ಳಿಯಲ್ಲಿ 3, ಹರಪನಹಳ್ಳಿಯಲ್ಲಿ 4 ಹಾಗೂ ಹೊಸಪೇಟೆಯಲ್ಲಿ 3 ರೈತ ಸಂಪರ್ಕ ಕೇಂದ್ರಗಳಿದ್ದು, ಇವೆಲ್ಲವೂ ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ಕಮಲಾಪುರ ರೈತ ಸಂಪರ್ಕ ಕೇಂದ್ರಕ್ಕೆ ಮಾತ್ರ ಸದ್ಯಕ್ಕೆ ಕಟ್ಟಡವಿಲ್ಲ. ಕೊಟ್ಟೂರು ತಾಲೂಕಿನ ರೈತ ಸಂಪರ್ಕ ಕೇಂದ್ರಕ್ಕೆ ಸೈಟ್ ಇದ್ದು, ಸ್ವಂತ ಕಟ್ಟಡ ನಿರ್ಮಾಣವಾಗಬೇಕಿದೆ. ಕೂಡ್ಲಿಗಿಯ 3 ಕೇಂದ್ರಗಳಲ್ಲಿ 2 ಸ್ವಂತ ಕಟ್ಟಡ ಹೊಂದಿದ್ದು, ಗುಡೆಕೋಟೆಯಲ್ಲಿ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ. ವಿಶೇಷವೆಂದರೆ, ಕೂಡ್ಲಿಗಿಯಲ್ಲಿ ಕೃಷಿ ವಿಜ್ಞಾನ ಕೇಂದ್ರ ಹಾಗೂ ಒಂದು ತರಬೇತಿ ಕೇಂದ್ರ ತಲೆಯೆತ್ತುತ್ತಿದೆ.

ಸಹಾಯಕ ಕೃಷಿ ಅಧಿಕಾರಿಗಳೇ ಇಲ್ಲ

ಅತ್ಯಂತ ಆಘಾತಕಾರಿ ಸಂಗತಿಯೆAದರೆ, ಜಿಲ್ಲೆಯಲ್ಲಿ 53 ಸಹಾಯಕ ಕೃಷಿ ಅಧಿಕಾರಿಗಳ (ಎಎಒ) ಹುದ್ದೆಗಳಿದ್ದು, ಎಲ್ಲ ಹುದ್ದೆಗಳೂ ಖಾಲಿ ಇವೆ. ಅಂದರೆ ಈ ವಿಭಾಗ ಶೂನ್ಯ ಸಿಬ್ಬಂದಿಯೊAದಿಗೆ ನಡೆಯುತ್ತಿದೆ. ಇದರೊಂದಿಗೆ ಇರುವ ಒಂದೇ ಒಂದು ಆಡಳಿತ ಅಧಿಕಾರಿ (ಎಒ) ಹುದ್ದೆಯೂ ಖಾಲಿ ಬಿದ್ದಿದೆ. ಎಫ್‌ಡಿಎ 9 ಹುದ್ದೆಗಳಲ್ಲಿ 5 ಭರ್ತಿ, 4 ಖಾಲಿ ಇವೆ. ಎಸ್ ಡಿ 14 ಹುದ್ದೆಗಳಲ್ಲಿ ಕೇವಲ 3 ಭರ್ತಿ, 11 ಖಾಲಿ ಇವೆ. ಟೈಪಿಸ್ಟ್ 8 ಹುದ್ದೆಗಳಲ್ಲಿ ಒಂದು ಮಾತ್ರ ಭರ್ತಿ, 7 ಖಾಲಿ. ಡ್ರೈವರ್‌ಗಳು ಮಂಜೂರಾದ 7 ಹುದ್ದೆಗಳೂ ಖಾಲಿ ಇವೆ. ಗ್ರೂಪ್-ಡಿ 22 ಹುದ್ದೆಗಳಲ್ಲಿ 4 ಭರ್ತಿ, 18 ಖಾಲಿ ಇವೆ. ಮೇಲ್ವಿಚಾರಕರು 7 ಹುದ್ದೆಗಳಲ್ಲಿ 3 ಭರ್ತಿ, 4 ಖಾಲಿ ಇವೆ.

ಕೊಟ್ಟೂರಿಗೆ ಸಿಗದ ಕೃಷಿ ಅಧಿಕಾರಿ ಭಾಗ್ಯ

ಜಿಲ್ಲೆಯ 6 ತಾಲೂಕುಗಳ ಪೈಕಿ 5 ತಾಲೂಕುಗಳಿಗೆ ಸಹಾಯಕ ಕೃಷಿ ನಿರ್ದೇಶಕರಿದ್ದರೂ (ಎಡಿಎ), ನೂತನ ಕೊಟ್ಟೂರು ತಾಲೂಕಿಗೆ ಇನ್ನೂ ಸಹಾಯಕ ಕೃಷಿ ಇಲಾಖೆ ಅಧಿಕಾರಿಯ ಹುದ್ದೆಯೇ ಸೃಜನೆಯಾಗಿಲ್ಲ. ಪ್ರಸ್ತುತ ಕೂಡ್ಲಿಗಿ ತಾಲೂಕಿನ ಸಹಾಯಕ ಅಧಿಕಾರಿಯೇ ಕೊಟ್ಟೂರು ತಾಲೂಕಿನ ಉಸ್ತುವಾರಿಯನ್ನೂ ನೋಡಿಕೊಳ್ಳುತ್ತಿದ್ದಾರೆ.
"

ಕೃಷಿ ಅಧಿಕಾರಿಗಳಿಂದ ಮಾಹಿತಿ ಪಡೆದು ಸರ್ಕಾರಕ್ಕೆ ವರದಿ ಸಲ್ಲಿಸಲಾಗುತ್ತದೆ. ಸರ್ಕಾರದಿಂದ ಹುದ್ದೆಗಳು ಭರ್ತಿ ಆಗುತ್ತಿವೆ. ರೈತರಿಗೆ ಯಾವುದೇ ಸಮಸ್ಯೆ ಆಗದಂತೆ ಕ್ರಮ ವಹಿಸಲು ಸೂಚನೆ ನೀಡಲಾಗುತ್ತದೆ.

— ಕವಿತಾ ಎಸ್.ಮನ್ನಿಕೇರಿ, ಜಿಲ್ಲಾಧಿಕಾರಿ, ವಿಜಯನಗರ


==ಕೊಟ್==
"

ಜಿಲ್ಲೆಯಲ್ಲಿ ಒಟ್ಟು 18 ರೈತ ಸಂಪರ್ಕ ಕೇಂದ್ರಗಳಿದ್ದು, ಅಧಿಕಾರಿಗಳ ಉಸ್ತುವಾರಿಯಲ್ಲಿದ್ದರೂ, ಸಿಬ್ಬಂದಿ ಕೊರತೆಯಿಂದಾಗಿ ರೈತರಿಗೆ ಅಗತ್ಯ ಮಾಹಿತಿ, ಸೌಲಭ್ಯಗಳು ಹಾಗೂ ಯೋಜನೆಗಳ ಲಾಭ ಪಡೆಯಲು ವಿಳಂಬವಾಗುತ್ತಿದೆ. ಸರ್ಕಾರ ಇನ್ನಾದರೂ ಎಚ್ಚೆತ್ತು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿ ಜಿಲ್ಲೆಯ ರೈತರಿಗೆ ಆಸರೆಯಾಗಬೇಕಿದೆ.

— ಸಣ್ಣಕ್ಕಿ ರುದ್ರಪ್ಪ, ರೈತ ಮುಖಂಡ, ಹೊಸಪೇಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net