ಸಾಹಿತ್ಯ, ಸಂಗೀತ, ನಟನೆ, ನಿರ್ದೇಶನ, ಸಂಘಟನೆ, ತಬಲಾ ವಾದನ, ನಿರೂಪಣೆ ಹಾಗೂ ವೇಷಭೂಷಣ ವಿನ್ಯಾಸದಲ್ಲಿ ನಿಪುಣರಾಗಿದ್ದ ಸೋಮಣ್ಣ, ವೀರಕೇಸರಿ, ಧ್ರುವಸಂಗಮ, ಶಿವನೊಲುಮೆಯ ಶಿಶು, ಅವ್ವಣ್ಣೆವ್ವ ಹಾಗೂ ವಿಶ್ವಬಂಧು ಬಸವಣ್ಣ ಸೇರಿದಂತೆ ನೂರಕ್ಕೂ ಹೆಚ್ಚು ನಾಟಕಗಳನ್ನು ರಚಿಸಿ, ನಿರ್ದೇಶಿಸಿ ಅಭಿನಯಿಸಿದ್ದರು. ಆಕಾಶವಾಣಿ ಹಾಗೂ ದೂರದರ್ಶನದಲ್ಲಿ ಇವರ ಸಾವಿರಕ್ಕೂ ಹೆಚ್ಚು ರಂಗಗೀತೆಗಳು ಪ್ರಸಾರಗೊಂಡಿವೆ. ಹಲವು ಸಣ್ಣಕಥೆಗಳನ್ನು ಬರೆದಿದ್ದ ಇವರು, ಅನೇಕ ರಂಗ ಶಿಬಿರಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದರು.