ಟಿಬಿಡ್ಯಾಂ ಆಸ್ತಿಯನ್ನು ಕರ್ನಾಟಕ, ಆಂದ್ರ, ತೆಲಂಗಾಣ ರಾಜ್ಯಗಳಿಗೆ ಸಂಬAಧಿಸಿದೆ. ಟಿಬಿಬಿ ನೌಕರರಿಗೆ ಹಾಗೂ ನಿವೃತ್ತ ನೌಕರರಿಗೆ ಷರತ್ತಿನ ಮೇಲೆ ಲೀಸ್ ಮಾತ್ರ ನೀಡಲಾಗುತ್ತದೆ. ಅದನ್ನು ಹೊರತು ಪಡಿಸಿ ವ್ಯಕ್ತಿಯ ಹೆಸರಿಗೆ ಆಸ್ತಿ ಮಾರಾಟ ಮಾಡಲ್ಲ. ಆದರೆ, ನಗರದ ನಿಶಾನಿ ಕ್ಯಾಂಪ್, ಪಿಎಲ್ಸಿ, ಅಮರಾವತಿ ಕಾಲೋನಿ, ಇವಿ ಕ್ಯಾಂಪ್, ಮಾರುತಿ ನಗರ್ ಸೇರಿ ಇತರೆ ಕಡೆಯ ಟಿಬಿಡ್ಯಾಂ ಆಸ್ತಿಯನ್ನು ಒತ್ತುವರಿ ಹಾಗೂ ಕಬಳಿಕೆ ಮಾಡುತ್ತೀರುವವರ ವಿರುದ್ಧ ನ್ಯಾಯಾಲಯದಲ್ಲಿ 23 ಪ್ರಕರಣಗಳನ್ನು ಹಾಕಲಾಗಿದೆ. ಇದರಲ್ಲಿ ಒಂದು ಪ್ರಕರಣ ಟಿಬಿಬಿ ಪರವಾಗಿ ತೀರ್ಪು ಬಂದಿದೆ ಎಂದರು.