ಮೊಬೈಲ್ ಒಳ್ಳೆಯ ಕೆಲಸಕ್ಕೆ ಬಳಸಿ

ಹರಪನಹಳ್ಳಿ ತಾಲೂಕಿನ ಅರಸೀಕೆರೆಯಲ್ಲಿ ‘ಶನೇಶ್ವರ ಮಹಾತ್ಮೆ’ ನಾಟಕ ಪ್ರದರ್ಶನ ಕಾರ್ಯಕ್ರಮವನ್ನು ಸಿಪಿಐ ಮಹಾಂತೇಶ್ ಜಿ.ಸಜ್ಜನ್ ಉದ್ಘಾಟಿಸಿದರು.
ಹರಪನಹಳ್ಳಿ ತಾಲೂಕಿನ ಅರಸೀಕೆರೆಯಲ್ಲಿ ‘ಶನೇಶ್ವರ ಮಹಾತ್ಮೆ’ ನಾಟಕ ಪ್ರದರ್ಶನ ಕಾರ್ಯಕ್ರಮವನ್ನು ಸಿಪಿಐ ಮಹಾಂತೇಶ್ ಜಿ.ಸಜ್ಜನ್ ಉದ್ಘಾಟಿಸಿದರು.
Published on
ಹರಪನಹಳ್ಳಿ: ಮಕ್ಕಳು ವಯಸ್ಕರಾಗುವವರೆಗೆ ಅವರನ್ನು ಮೊಬೈಲ್‌ಗಳಿಂದ ದೂರವಿರಿಸಬೇಕು ಎಂದು ಸಿಪಿಐ ಮಹಾಂತೇಶ್ ಸಜ್ಜನ್ ಹೇಳಿದರು.
ಅರಸೀಕೆರೆ ಗ್ರಾಮದ ಕೋಲಶಾಂತೇಶ್ವರ ರಂಗಮಂದಿರದಲ್ಲಿ ‘ಶನೇಶ್ವರ ಮಹಾತ್ಮೆ’ ನಾಟಕ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಮೊಬೈಲ್ ಜೀವನವಾಗಿಬಿಟ್ಟಿದೆ, ಮೊಬೈಲ್ ಗಳಿಂದ ಯುವಕರು ಅಶ್ಲೀಲ ಚಿತ್ರಗಳನ್ನು ನೋಡಿ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಆಸ್ಟ್ರೇಲಿಯಾದಲ್ಲಿ 18 ವರ್ಷದೊಳಗಿನ ಮಕ್ಕಳಿಗೆ ಮೊಬೈಲ್ ನಿಷೇಧಿಸಲಾಗಿದೆ. ಮೊಬೈಲನ್ನು ಒಳ್ಳೆಯ ಕೆಲಸಕ್ಕೆ ಬಳಸಬೇಕು. ಪಾಲಕರು ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕು ಎಂದು ತಿಳಿಸಿದರು.
ಅರಸೀಕೆರೆ ಕೋಲಶಾಂತೇಶ್ವರ ಮಠದ ಶಾಂತಲಿಂಗ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಭಕ್ತರ ಬಹುದಿನಗಳ ಬೇಡಿಕೆಯಂತೆ ರಥೋತ್ಸವದ ಪ್ರಯುಕ್ತ ಶನೇಶ್ವರ ಮಹಾತ್ಮೆ ಪೌರಾಣಿಕ ನಾಟಕವನ್ನು ಪ್ರದರ್ಶನ ಏರ್ಪಡಿಸಲಾಗಿದೆ. ನಾಟಕಗಳು ಜೀವನದ ಸತ್ಯವನ್ನು ತಿಳಿಸುತ್ತವೆ ಎಂದು ತಿಳಿಸಿದರು.
ಪ್ರಮುಖರಾದ ವೈ.ಎ.ಚಂದನ, ಇಟ್ಟಿಗಿಹಳ್ಳಿ ಬಸವರಾಜ್, ಎ.ಬಿ.ಚಿದಾನಂದ ಗೌಡ, ವೃಷಭೇಂದ್ರಯ್ಯ, ಉಪನ್ಯಾಸಕರಾದ ಪ್ರಶಾಂತ್, ಬೆಟ್ಟಪ್ಪ, ಕೆ.ಮಹಾಂತೇಶ್, ಆಕಾಶ್, ಹದಡಿ ಅಜ್ಜಣ್ಣ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net