ಟಿಬಿಡ್ಯಾಂ ನೀರನ್ನು ಕುಡಿವಲು ಮಾತ್ರ ಬಳಸಿ

ಹೊಸಪೇಟೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ ಅವರಿಗೆ ಮನವಿ ಸಲ್ಲಿಸಿದರು. ಪ್ರಮುಖರಾದ ಕೆ.ಯಮನುರ, ಇಬ್ರಾಹಿಂ, ಆರ್.ಹುಚ್ಚಸಾಬ್, ಹುಸೇನ್ ಬಾಷಾ, ದೇವರಮನಿ ಶಿವರಾಮ ಇತರರಿದ್ದರು.
ಹೊಸಪೇಟೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ ಅವರಿಗೆ ಮನವಿ ಸಲ್ಲಿಸಿದರು. ಪ್ರಮುಖರಾದ ಕೆ.ಯಮನುರ, ಇಬ್ರಾಹಿಂ, ಆರ್.ಹುಚ್ಚಸಾಬ್, ಹುಸೇನ್ ಬಾಷಾ, ದೇವರಮನಿ ಶಿವರಾಮ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ರಾಜ್ಯ ರೈತ ಸಂಘದಿAದ ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪಗೆ ಮನವಿ
ಹೊಸಪೇಟೆ: ತುಂಗಭದ್ರಾ ಜಲಾಶಯದ ಉಳಿದ ನೀರನ್ನು ಕೇವಲ ಕುಡಿವ ಉದ್ದೇಶಕ್ಕೆ ಮಾತ್ರ ಮೀಸಲಿಡಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ರಾಜ್ಯ ರೈತ ಸಂಘದಿAದ ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.
ತುಂಗಭದ್ರಾ ಜಲಾಶಯದಲ್ಲಿ ನೀರಿನ ಮಟ್ಟ ಗಣನೀಯವಾಗಿ ಕುಸಿದಿದೆ. ಆದ್ದರಿಂದ, ಜಲಾಶಯದಲ್ಲಿ ಲಭ್ಯವಿರುವ ಉಳಿದನೀರನ್ನು ಕೇವಲ ಸಾರ್ವಜನಿಕರ ಮತ್ತು ಜಾನುವಾರುಗಳ ಕುಡಿಯುವ ಉದ್ದೇಶಕ್ಕಾಗಿ ಮಾತ್ರ ಸಂಪೂರ್ಣವಾಗಿ ಮೀಸಲಿಡಬೇಕು ಮತ್ತು ಬೆಳೆ ಇರುವ ರೈತರ ಜಮೀನುಗಳಿಗೆ ರಾಯ, ಬಸವ ಕಾಲುವೆಗಳ ಮೂಲಕ ನೀರನ್ನು ಪೂರೈಸಬೇಕು.
ಜಿಲ್ಲೆಯ ಪ್ರಮುಖ ಖಾಸಗಿ ಹಾಗೂ ಭಾರಿ ಕಾರ್ಖಾನೆಗಳಿಗೆ ಜಲಾಶಯದಿಂದ ನೀರು ಪೂರೈಕೆಯಾಗುತ್ತಿರುವುದನ್ನು ತಕ್ಷಣವೇ ತಡೆಹಿಡಿಯಬೇಕು. ಕೈಗಾರಿಕಾ ಬಳಕೆಗಿಂತಲೂ ಸಾರ್ವಜನಿಕರ ದೈನಂದಿನ ಬದುಕು ಮತ್ತು ಜೀವದ ರಕ್ಷಣೆ ಅತ್ಯಂತ ಮುಖ್ಯವಾಗಿದೆ. ಬೇಸಿಗೆಯ ಸಮಯವಿದ್ದು ಕುಡಿಯುವ ನೀರಿನ ಅಭಾವ ಸಂಭವಿಸುವ ಸಾಧ್ಯತೆ ಇದ್ದು ಮುಂಜಾಗ್ರತೆಯಾಗಿ ಉಳಿಸ ನೀರಿನ್ನು ಕುಡಿಯುವ ಉದ್ದೇಶಕ್ಕೆ ಮಾತ್ರ ಸಿಮೀತಗೊಳಿಸಬೇಕು ಎಂದು ಒತ್ತಾಯಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net