ಅಮೃತಬಳ್ಳಿ, ಕರಿಬೇವು, ನಿರ್ಗುಂಡಿ, ಎಕ್ಕೆ, ಅತಿಬಲ–ಮಹಾಬಲ, ಚದುರಂಗ, ಬ್ರಾಹ್ಮಿ, ಶಂಖಪುಷ್ಪ, ಮುಟ್ಟಿದರೆ ಮುನಿ, ಬಜೆ, ತೊಂಡೆ ಸೊಪ್ಪು, ಗರಿಕೆ, ಭೃಂಗರಾಜ, ಲೆಮನ್ ಗ್ರಾಸ್, ಪತ್ತರ್‌ಛಟ್, ಉತ್ತರಾಣಿ, ಅಲೋವೆರಾ, ದೊಡ್ಡಪತ್ರೆ, ಇನ್ಸುಲಿನ್ ಸೇರಿದಂತೆ ವಿವಿಧ ಗಿಡಮೂಲಿಕೆ ಹಾಗೂ ಬಳ್ಳಿಗಳ ಮಹತ್ವವನ್ನು ಅವರು ವಿವರಿಸಿದರು. ಆಯುರ್ವೇದ ತಜ್ಞರ ಸಲಹೆ ಇಲ್ಲದೆ ಯಾವುದೇ ಗಿಡಮೂಲಿಕೆಯನ್ನು ನೇರವಾಗಿ ಬಳಸಬಾರದು. ಕೆಲವು ಗಿಡಗಳಲ್ಲಿ ವಿಷಕಾರಕ ಅಂಶಗಳೂ ಇರುತ್ತವೆ. ಅಂತಹ ಅಂಶಗಳನ್ನು ಸಂಸ್ಕರಿಸಿ ಬಳಸುವ ವಿಧಾನ ತಜ್ಞರಿಗೆ ಮಾತ್ರ ತಿಳಿದಿರುತ್ತದೆ ಎಂದು ಎಚ್ಚರಿಸಿದರು.