ತುಂಗಾ ನದಿಯಲ್ಲಿ ಹೆಚ್ಚಿದ ಒಳಹರಿವು ಶಿವಮೊಗ್ಗದ ಗಾಜನೂರಿನ ತುಂಗಾ ಜಲಾಶಯ ಇದೀಗ ಭರ್ತಿಯಾಗಿದೆ.ಸದ್ಯ ತುಂಗಾ ಜಲಾಶಯಕ್ಕೆ 4 ಸಾವಿರ ಕ್ಯೂಸೆಕ್ ಒಳಹರಿವು ಇದ್ದು, ಅಷ್ಟೇ ಪ್ರಮಾಣದಲ್ಲಿ ಸುಮಾರು 3.9 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಇದೇ ರೀತಿ, ಭದ್ರಾ ಜಲಾಶಯಕ್ಕೆ 3,369 ಕ್ಯೂಸೆಕ್ ನೀರು ಹರಿದುಬರುತ್ತಿದ್ದು, ಈ ಎರಡೂ ನದಿಗಳ ನೀರು ಸೇರಿ ತುಂಗಭದ್ರಾ ಜಲಾಶಯದತ್ತ ಧಾವಿಸುತ್ತಿದೆ. ಇದೇ ರೀತಿಯಲ್ಲಿ ನದಿಗೆ ನೀರು ಬಂದರೆ, ತುಂಗಭದ್ರಾ ಜಲಾಶಯ ತುಂಬುವುದರಲ್ಲಿ ಅನುಮಾನವಿಲ್ಲ.