ಹಜ್ಜ್ ಯಾತ್ರೆಯಿಂದ ಏಕತೆ-ಸಮಾನತೆ

ಹೊಸಪೇಟೆ ಶಾದಿಮಹಲ್ ನಲ್ಲಿ ಶನಿವಾರ  ಹಜ್ ಹೋಗುವ ಯಾತ್ರಿಗಳಿಗೆ ಬೀಳ್ಕೊಡುಗೆ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಹುಡಾ ಅಧ್ಯಕ್ಷ ಎಚ್.ಎನ್.ಮೊಹಮ್ಮದ್ ಇಮಾಮ್ ನಿಯಾಜಿ ಮಾತನಾಡಿದರು. ಅಂಜುಮನ್ ಕಮಿಟಿಯ ಪದಾಧಿಕಾರಿಗಳಾದ ಅನ್ಸರ್ ಭಾಷಾ, ಪೈರೋಜ್ ಖಾನ್ ಇತರರಿದ್ದರು.
ಹೊಸಪೇಟೆ ಶಾದಿಮಹಲ್ ನಲ್ಲಿ ಶನಿವಾರ ಹಜ್ ಹೋಗುವ ಯಾತ್ರಿಗಳಿಗೆ ಬೀಳ್ಕೊಡುಗೆ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಹುಡಾ ಅಧ್ಯಕ್ಷ ಎಚ್.ಎನ್.ಮೊಹಮ್ಮದ್ ಇಮಾಮ್ ನಿಯಾಜಿ ಮಾತನಾಡಿದರು. ಅಂಜುಮನ್ ಕಮಿಟಿಯ ಪದಾಧಿಕಾರಿಗಳಾದ ಅನ್ಸರ್ ಭಾಷಾ, ಪೈರೋಜ್ ಖಾನ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಯಾತ್ರಿಗಳಿಗೆ ಬೀಳ್ಕೊಡುಗೆ, ಅಭಿನಂದನಾ ಕಾರ್ಯಕ್ರಮದಲ್ಲಿ ಹುಡಾ ಅಧ್ಯಕ್ಷ ಅಭಿಪ್ರಾಯ
ಹೊಸಪೇಟೆ: ಪವಿತ್ರ ಹಜ್ ಯಾತ್ರೆಯು ಯಾತ್ರಾರ್ಥಿಗಳಲ್ಲಿ ಏಕತೆ ಮತ್ತು ಸಮಾನತೆ ಭಾವನೆ ಮೂಡಿಸುತ್ತದೆ ಎಂದು ಹುಡಾ ಅಧ್ಯಕ್ಷ ಎಚ್.ಎನ್.ಮೊಹಮ್ಮದ್ ಇಮಾಮ್ ನಿಯಾಜಿ ಹೇಳಿದರು.
ಅಂಜುಮನ್ ಕಮಿಟಿಯ ನೇತೃತ್ವದಲ್ಲಿ ನಗರದ ಶಾದಿಮಹಲ್ ನಲ್ಲಿ ಶನಿವಾರ ಮೆಕ್ಕಾ‌ ಮದೀನಾ ಉಮ್ರಾಗೆ (ಹಜ್) ಹೋಗುವ ಯಾತ್ರಿಗಳಿಗೆ ಬೀಳ್ಕೊಡುಗೆ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾತನಾಡಿ, ಸಚಿವ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಅವರು ರಾಜ್ಯದಾದ್ಯಂತ ಒಟ್ಟು 470 ಆರ್ಥಿಕವಾಗಿ ಹಿಂದುಳಿದ ಹಾಗೂ ಹಜ್‌ ಯಾತ್ರಿಗಳ‌ ಸೇವೆ ಸಲ್ಲಿಸಿದ ಸ್ವಯಂಸೇವಕರನ್ನು ಗುರುತಿಸಿದ್ದಾರೆ. ಪವಿತ್ರ ಸ್ಥಳ ಮಕ್ಕಾ ಮದೀನಾ ಉಮ್ರಾ ಯಾತ್ರೆಗೆ ಕಳುಹಿಸಲು ಆರ್ಥಿಕ ಸಹಾಯ ಮಾಡಿದ್ದಾರೆ. ಜಿಲ್ಲೆಯ 15 ಯಾತ್ರಿಗಳು ಸೇರಿದ್ದಾರೆ, ಉಮ್ರಾ ಯಾತ್ರೆಗೆ ಹೋಗುತ್ತಾರೆ. ರಾಜ್ಯದ ಅನೇಕ ಬಡ ಮುಸ್ಲಿಂರಿಗೆ ಹಣಕಾಸಿನ ಮುಗ್ಗಟ್ಟಿನಿಂದ ಉಮ್ರಾ ಯಾತ್ರೆ ಕನಸಿನ ಮಾತಾಗಿತ್ತು. ಈಗ ಕನಸು ನನಸಾಗಿದೆ. ಆಧ್ಯಾತ್ಮಿಕ ಉತ್ಕರ್ಷ, ಸಮಾನತೆ, ಸಹೋದರತೆಗಳನ್ನು ಬೆಳೆಸಿ ಮುಂದಿನ ಕೆಡುಕು ರಹಿತ ಬದುಕು ಮತ್ತು ಆತ್ಮಪರಿಶುದ್ಧತೆಯನ್ನು ಏಕೀಕರಿಸುವುದರಲ್ಲಿ ಹಜ್ ಬಹು ದೊಡ್ಡ ಪಾತ್ರ ವಹಿಸುತ್ತದೆ ಎಂದರು.
ಅಂಜುಮನ್ ಕಮಿಟಿಯ ಪದಾಧಿಕಾರಿಗಳಾದ ಅನ್ಸರ್ ಭಾಷಾ, ಪೈರೋಜ್ ಖಾನ್, ಎಂ.ಡಿ.ಅಭುಬ್ ಖರ್, ಡಾ.ದರ್ವೇಶ, ಎಮ್.ಡಿ. ಮೋಸಿನ್ ಕೊತ್ವಲ್, ಸದ್ದಾಂ ಹುಸೇನ್ ಪ್ರಮುಖರಾದ ಮುಷೀರ್ ಅಹಮದ್, ಗಫೂರ ಸಾಬ್, ಶೇಖ್ ಅಹಮ್ಮದ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net