ವರ್ಷಾರಂಭದ ಯುಗಾದಿ ಸಂಭ್ರಮ

ಹಂಪಿ ವಿರೂಪಾಕ್ಷೇಶ್ವರ ಸ್ವಾಮಿಗೆ ಶುಕ್ರವಾರ ಯುಗಾದಿ ನಿಮಿತ್ತ ಮೊಸರನ್ನದಿಂದ ವಿಶೇಷಾ ಅಲಂಕಾರ ಮಾಡಿರುವುದು.
ಹಂಪಿ ವಿರೂಪಾಕ್ಷೇಶ್ವರ ಸ್ವಾಮಿಗೆ ಶುಕ್ರವಾರ ಯುಗಾದಿ ನಿಮಿತ್ತ ಮೊಸರನ್ನದಿಂದ ವಿಶೇಷಾ ಅಲಂಕಾರ ಮಾಡಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ರೈತರಿಂದ ಬೇವು ಬೆಲ್ಲ ಕೊಟ್ಟು ಸಂಭ್ರಮ/ವಿವಿದೇಡೆ ರಥೋತ್ಸವ
ಹೊಸಪೇಟೆ: ಹಳೆಯದನ್ನೆಲ್ಲ ಅಳಿಸಿ ಹೊಸತನ್ನು ತರುವ ವರ್ಷಾರಂಭದ ಸಂಕೇತ ಯುಗಾದಿ ಹಬ್ಬವನ್ನು ಗುರುವಾರ ಜಿಲ್ಲಾದ್ಯಂತ ವಿಶೇಷವಾಗಿ ಆಚರಿಸಲಾಯಿತು.
ಯುಗಾದಿಯು ವರ್ಷದ ಮೊದಲ ಹಬ್ಬ. ವಸಂತದ ಆಗಮನದೊಂದಿಗೆ ಸಂಭ್ರಮಿಸುವ ಹಬ್ಬ. ಭಾರತೀಯ ಸಂಸ್ಕೃತಿಯ ಪ್ರಮುಖ ಹಬ್ಬಗಳಲ್ಲಿ ಒಂದಾದ ಯುಗಾದಿ ಹಬ್ಬ ಬೇವು ಬೆಲ್ಲದೊಂದಿಗೆ ಬಂದು, ಸಿಹಿ ಕಹಿ ಒಟ್ಟಿಗೆ ಸ್ವೀಕರಿಸಿ ಜೀವನ ಸಾಗಿಸು ಎಂದು ಸಾರುವ ಹೊಸ ವರ್ಷ ಎಂದೇ ಆಚರಿಸಲಾಗುತ್ತದೆ. ಯುಗಾದಿ ಹಬ್ಬದಂದು ಸಂಪ್ರದಾಯದAತೆ ರೈತರು ಹೊಲಕ್ಕೆ ಹೋಗಿ ಎತ್ತು, ಟ್ರ‍್ಯಾಕ್ಟರ್ ವಿಶೇ ಪೂಜೆ ಮಾಡಿ, ಮಳೆ, ಬೆಳೆ ಚನ್ನಾಗಿ ಕೊಡು ತಾಯಿ ಎಂದು ಬೇಡಿಕೊಳ್ಳುವ ದೃಶ್ಯ ಸಾಮಾನ್ಯವಾಗಿತ್ತು.
ಹಂಪಿ ವಿರೂಪಾಕ್ಷೇಶ್ವರ ದೇಗುಲ ಸೇರಿದಂತೆ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಸಾವಿರಾರು ಭಕ್ತರು ವಿಶೇಷ ಪೂಜೆ ಸಲ್ಲಿಸಿದರು. ಮನೆಗಳಲ್ಲಿ ಶಾವಿಗೆ ಪಾಯಸ, ಹೋಳಿಗೆ, ಜತೆಗೆ ಬೇವು-ಬೆಲ್ಲದ ರುಚಿ ಸವಿದು ವರ್ಷಪೂರ್ತಿ ಬರುವ ಸಂಕಷ್ಟ-ಸುಖಗಳನ್ನು ಸಮಾನವಾಗಿ ಸ್ವೀಕರಿಸುವ ಸಂಕಲ್ಪ ಮಾಡಿದರು. ಯುಗಾದಿ ಪ್ರಯುಕ್ತ ಕೆಲವು ಗ್ರಾಮಗಳಲ್ಲಿ ರಥೋತ್ಸವ, ನಗರ ಪ್ರದೇಶಗಳಲ್ಲಿ ಸಂಘ-ಸAಸ್ಥೆಗಳು, ರೈತರು ಹೊಲಗಳಲ್ಲಿ ವಿಶಿಷ್ಟವಾಗಿ ಯುಗಾದಿ ಆಚರಿಸುವುದು ಕಂಡುಬAದಿತು. ಕೆಲಕಡೆ ಹೊಲಗಳಲ್ಲಿ ಭೂಮಿಪೂಜೆ ಮಾಡುವುದರ ಮೂಲಕ ಬೇವು ಬೆಲ್ಲ ಕೊಟ್ಟು ಆಚರಿಸಿದರು.
ನಗರದ ಅನಂತಶಯನಗುಡಿಯ ಆಂಜನೇಯ ಸ್ವಾಮಿ ರಥೋತ್ಸವ, ಕಮಲಾಪುರದ ಗಾರೆಬಾವಿ ಆಂಜನೇಯ ರಥೋತ್ಸವ ಸೇರಿದಂತೆ ಇತರೆ ಕಡೆ ಸಂಭ್ರಮದಿAದ ರಥೋತ್ಸವ ನಡೆಯಿತು. ಶುಕ್ರವಾರ ನಗರದ ಸಣ್ಣಕ್ಕಿ ವೀರಭದ್ರೇಶ್ವರ ನಡೆಯಿತು. ಬೆಳಗ್ಗೆಯಿಂದ ದೇಗುಲದಲ್ಲಿ ವಿಶೇಷ ಹಾಗೂ ಧಾರ್ಮಿಕ ಪೂಜಾಕೈಂಕರ್ಯ ನಡೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net