ಎರಡು ರೈಲುಗಳು ಮೇಲ್ದರ್ಜೆಗೆ

train
train
Published on

ಪ್ರಮುಖ ಮುಖ್ಯಾಂಶಗಳು

  • 16547-48 16545-46 ಸಂಖ್ಯೆಯ ಗಾಡಿಗಳಿಗೆ ಎಲ್‌ಎಚ್‌ಪಿ ಕೋಚ್‌ಗಳನ್ನು ಅಳವಡಿಕೆ
ಹೊಸಪೇಟೆ: ನೈರುತ್ಯ ರೈಲ್ವೆ ಇಲಾಖೆ ಯಶ್ವಂತಪುರ-ವಿಜಯಪುರ ಹಾಗೂ ಯಶ್ವಂತಪುರ - ಸಿಂಧನೂರು ಸಂಚರಿಸುವ ಎರಡು ರೈಲುಗಳನ್ನು ಎಲ್‌ಎಚ್‌ಪಿ ಕೋಚ್‌ಗಳನ್ನು ಅಳವಡಿಸಿ ಶನಿವಾರದಿಂದಲೇ ಅನ್ವಯವಾಗುವಂತೆ ಮೇಲ್ದರ್ಜೆಗೇರಿಸಿ ಆದೇಶ ಹೊರಡಿಸಿದೆ ಎಂದು ವಿಜಯನಗರ ರೈಲ್ವೆ ಬಳಕೆದಾರರ ಸಂಘದ ಅಧ್ಯಕ್ಷ ವೈ.ಯಮುನೇಶ್, ಕಾರ್ಯದರ್ಶಿ ಮಹೇಶ್‌ಕುಡುತಿನಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯನಗರ ರೈಲ್ವೆ ಬಳಕೆದಾರರ ಸಂಘ ಹಾಗೂ ವಿಶೇಷವಾಗಿ ವಲಯ ರೈಲು ಬಳಕೆದಾರರ ಸಲಹಾ ಸಮಿತಿ ಸದಸ್ಯ ಬಾಬುಲಾಲ್ ಜೈನ್ ನೇತೃತ್ವದಲ್ಲಿ ಹಲವು ಬಾರಿ ಸಲ್ಲಿಸಿದ ಮನವಿಗೆ ನೈರುತ್ಯ ರೈಲ್ವೆ ಇಲಾಖೆ ಸ್ಪಂಧಿಸಿದೆ. ಯಶ್ವಂತಪುರದಿAದ ವಿಜಯಪುರ ಸಂಚರಿಸುವ ಗಾಡಿ ಸಂಖ್ಯೆ 16547-48 ಹಾಗೂ ಯಶ್ವಂತಪುರದಿAದ ಸಿಂಧನೂರಿಗೆ ಸಂಚರಿಸುವ ಗಾಡಿ ಸಂಖ್ಯೆ 16545-46 ಈ ಎರಡು ರೈಲುಗಳ ಹಳೇಯ ಐಸಿಎಫ್ ಬೋಗಿಗಳನ್ನು ಬದಲಿಸಿ ಆಧುನಿಕ ತಂತ್ರಜ್ಞಾನದ ಎಲ್‌ಎಚ್‌ಪಿ ಕೋಚ್‌ಗಳನ್ನು ಅಳವಡಿಸಿ ಮೇಲ್ದರ್ಜೆಗೇರಿಸಿ ಆದೇಶ ಹೊರಡಿಸಿದೆ.
ಈಗಾಗಲೇ ಇರುವ ಹಂಪಿ ಎಕ್ಸ್ಪ್ರೆಸ್ ರೈಲಿನ ಬೋಗಿಗಳ ಮಾದರಿಯಲ್ಲಿಯೇ ಈ ರೈಲಿನ ಬೋಗಿಗಳು ಇರುತ್ತವೆ. ಜರ್ಮನ್ ದೇಶದ ಯಂತ್ರಶಿಲ್ಪಿ ಲಿಂಕ್‌ಹೋಫ್‌ಮೆನ್ ಬೋಷ್ಚ್ ಅವರು ಸಂಶೋಧಿಸಿ ಅವಿಷ್ಕಾರಗೊಳಿಸಿದ ಎಲ್‌ಎಚ್‌ಪಿ ಕೋಚ್‌ಗಳು ಹೆಚ್ಚು ಸುರಕ್ಷತೆ, ಆರಾಮದಾಯಕ ಹಾಗೂ ವೇಗದ ಸಾಮರ್ಥ್ಯವನ್ನು ಹೊಂದಿವೆ. ಈ ಭೋಗಿಗಳ ವೈಶಿಷ್ಠತೆ ಎಂದರೆ ಅಪಘಾತದ ವೇಳೆ ಒಂದು ಭೋಗಿಯು ಮತ್ತೊಂದು ಭೋಗಿಯ ಮೇಲೆ ಏರುವ ಅಥವಾ ಬೀಳುವ ಸಾಧ್ಯತೆ ಕಡಿಮೆ. ಇದರಿಂದ ಜೀವಹಾನಿಯ ಪ್ರಮಾಣವು ಕಡಿಮೆ ಇರುತ್ತದೆ. ಈ ಭೋಗಿಗಳು ಹೆಚ್ಚು ಆರಾಮದಾಯಕವಾಗಿದ್ದು, ಕಂಪನ ಮತ್ತು ಜರ್ಕ್ ಕಡಿಮೆಯಾಗಿರುತ್ತದೆ. ಮೃದುವಾದ ಪ್ರಯಾಣದ ಅನುಭವವಾಗುತ್ತದೆ.
ಸಂಚಾರದ ವೇಳೆಯಲ್ಲಿ ಕಡಿಮೆ ಶಬ್ದ, ಬೋಗಿಯ ಒಳಗಡೆ ಉತ್ತಮ ಬೆಳಕು, ಒಳಾಂಗಣ ವಿನ್ಯಾಸ ಹೆಚ್ಚು ಸುಧಾರಿತವಾಗಿರುತ್ತದೆ. ಈ ಕೋಚುಗಳು ಗಂಟೆಗೆ 100 ಕಿ.ಮೀ.ಗಿಂತ ಹೆಚ್ಚಿನ ವೇಗ ಸಾಮರ್ಥ್ಯಕ್ಕೆ ತಕ್ಕಂತೆ ವಿನ್ಯಾಸಗೊಳಿಸಲಾಗಿದೆ. ರೈಲಿನ ವೇಗ ನಿಯಂತ್ರಣ ವ್ಯವಸ್ಥೆಯು ಅತ್ಯುತ್ತಮವಾಗಿದೆ. ಭೋಗಿಗಳ ತೂಕ ಕಡಿಮೆ ಇರುವುದರಿಂದ ಇಂಜಿನ್ ಮೇಲಿನ ಒತ್ತಡ ಕಡಿಮೆಯಾಗಿ ಇಲಾಖೆಯ ನಿರ್ವಹಣ ವೆಚ್ಚ ಕಡಿಮೆ ಇರುತ್ತದೆ ಎಂದು ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net