ಅಂತರರಾಜ್ಯ ಇಬ್ಬರ ಕಳ್ಳರ ಬಂಧನ

ಹರಪನಹಳ್ಳಿ ಶಾಸಕರ ಕಚೇರಿಯಲ್ಲಿ ಕಳ್ಳತನ ಪ್ರಕರಣ ಬಂಧಿತರಿAದ 11.65 ಲಕ್ಷ ರೂ. ಮೌಲ್ಯದ ಬಂಗಾರ, ಬೆಳ್ಳಿ ಆಭರಣಗಳ ವಶ ಪಡೆದ ಪೊಲೀಸರು.
ಹರಪನಹಳ್ಳಿ ಶಾಸಕರ ಕಚೇರಿಯಲ್ಲಿ ಕಳ್ಳತನ ಪ್ರಕರಣ ಬಂಧಿತರಿAದ 11.65 ಲಕ್ಷ ರೂ. ಮೌಲ್ಯದ ಬಂಗಾರ, ಬೆಳ್ಳಿ ಆಭರಣಗಳ ವಶ ಪಡೆದ ಪೊಲೀಸರು.
Published on

ಪ್ರಮುಖ ಮುಖ್ಯಾಂಶಗಳು

  • ಹರಪನಹಳ್ಳಿ ಶಾಸಕರ ಕಚೇರಿಯಲ್ಲಿ ಕಳ್ಳತನ ಪ್ರಕರಣ
  • ಬಂಧಿತರಿಂದ 11.65 ಲಕ್ಷ ರೂ. ಮೌಲ್ಯದ ಬಂಗಾರ, ಬೆಳ್ಳಿ ಆಭರಣಗಳ ವಶ

ಹೊಸಪೇಟೆ: ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ ಅವರ ಕಚೇರಿಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಂತರರಾಜ್ಯದ ಇಬ್ಬರು ಕಳ್ಳರನ್ನು ಬಂಧಿಸಿ, 11.65 ಲಕ್ಷ ರೂ. ಮೌಲ್ಯದ ಬಂಗಾರ ಹಾಗೂ ಬೆಳ್ಳಿ ಆಭರಣಗಳನ್ನು ವಶಪಡೆಯಲಾಗಿದೆ ಎಂದು ಎಸ್ಪಿ ಎಸ್.ಜಾಹ್ನವಿ ತಿಳಿಸಿದರು.

ನಗರದ ಎಸ್ಪಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಳೆದ ಜು.17 ರ ತಡರಾತ್ರಿ ಹರಪನಹಳ್ಳಿ ಪಟ್ಟಣದಲ್ಲಿ ನಡೆದ ಘಟನೆಯಲ್ಲಿ ಶಾಸಕಿ ಲತಾ ಮಲ್ಲಿಕಾರ್ಜುನ ಅವರ ಕಚೇರಿಯ ಬಾಗಿಲಿನ ಚಿಲಕ ಮುರಿದ ಕಳ್ಳರು, ಬೀರುವಿನ ಬೀಗ ಒಡೆದು ಬಂಗಾರ ಹಾಗೂ ಬೆಳ್ಳಿ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರು. ಈ ಕುರಿತು ಮಲ್ಲಿಕಾರ್ಜುನ ಮಾಗನಹಳ್ಳಿ ಎಂಬುವವರು ನೀಡಿದ ದೂರಿನ ಮೇರೆಗೆ ಹರಪನಹಳ್ಳಿ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮಧ್ಯಪ್ರದೇಶ ಮತ್ತು ಮಹಾ ರಾಷ್ಟçಗಳಲ್ಲಿ ಕಾರ್ಯಾಚರಣೆ ನಡೆಸಿ, ಮಧ್ಯ ಪ್ರದೇಶ ಮೂಲದ ಜಿಲ್ಯ (26) ಹಾಗೂ ರಾಕೇಶ್ ಪವಾರ್ (22) ಬಂಧಿತ ಆರೋಪಿಗಳು. ಎರಡು ತಂಡಗಳನ್ನು ರಚನೆ ಮಾಡಿ ಹರಪನಹಳ್ಳಿ ಪಿಐ ಮಹಾಂತೇಶ ಜಿ.ಸಜ್ಜನ್ ಹಾಗೂ ಪಿಎಸ್‌ಐ ಶಂಭುಲಿಂಗ ಹಿರೇಮಠ ನೇತೃತ್ವದಲ್ಲಿ ಕಾರ್ಯಚರಣೆ ನಡೆದಿದೆ. ಅಂತರರಾಜ್ಯ ಕಳ್ಳರನ್ನು ಬಂಧಿಸಿದ್ದು. ಬಂಧಿತರಿAದ ಶಾಸಕರ ಮನೆಯಿಂದ ಕಳ್ಳತನವಾಗಿದ್ದ ಅಂದಾಜು 11.65 ಲಕ್ಷ ರೂ. ಮೌಲ್ಯದ ಬಂಗಾರ ಹಾಗೂ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಪಿಎಎಸ್‌ಐ ಬಿ.ಮೀನಾಕ್ಷಿ, ಸಿಬ್ಬಂದಿಗಳಾದ ರವಿ ದಾದಾಪುರ, ಆನಂದ, ಮಾಲತೇಶ, ಗುರುರಾಜ, ನಾಗರಾಜ, ಮುಬಾರಕ್, ರ‍್ರಿಸ್ವಾಮಿ, ನಾಗನಗೌಡ ಬಿ.,ಜಗದೀಶ್, ಇಮಾಮ್ ಸಾಹೇಬ್, ಎಲ್.ನಾಗರಾಜ, ಕುಮಾರ ನಾಯ್ಕ್ ಭಾಗವಹಿಸಿದ್ದರು. ಪ್ರಕರಣ ಬೇಧಿಸಿ ತಂಡಗಳಿಗೆ ಬಹುಮಾನ ಘೋಷಿಸಿದ್ದಾರೆ.

ಎಎಸ್ಪಿ ಜಿ.ಮಂಜುನಾಥ, ಹರಪನಹಳ್ಳಿ ಸಿಪಿಐ ಮಹಾಂತೇಶ ಬಿ.ಸಜ್ಜನ್, ಪಿಎಸೈ ಶಂಭುಲಿಂಗ ಹಿರೇಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net