ಜಿಲ್ಲೆಯ ಎಲ್ಲ ಅಗ್ನಿಶಾಮಕ ಠಾಣೆಗಳಲ್ಲಿ ನಾಲ್ಕು ಸಾವಿರ ಲೀಟರ್ ಸಾಮರ್ಥ್ಯದ ವಾಹನಗಳಿವೆ. ಶುಕ್ರವಾರ ಬಂದ ವಾಹನಗಳು ಆರು ಸಾವಿರ ಲೀಟರ್ ಸಾಮರ್ಥ್ಯ ಹೊಂದಿವೆ. ನಗರ ಹಾಗೂ ಹೂವಿನಹಡಗಲಿ ಅಗ್ನಿಶಾಮಕ ಠಾಣೆಗೆ ತಲ ಒಂದು ವಾಹನಗಳಿದ್ದು, ವಾಹನದ ಕೊರತೆ ನೀಗಿದಂತಾಗಿದೆ. ಕಳೆದ ಮಾ.21ರಂದು ವಿಜಯವಾಣಿ ಪತ್ರಿಕೆಯಲ್ಲಿ ಸೌಕರ್ಯಗಳಿಲ್ಲದ ಅಗ್ನಿಶಾಮಕದಳ ಎಂಬ ಶೀರ್ಷಿಕೆಯಲ್ಲಿ ಪ್ರಕಟಿಸಿದ ವಿಶೇಷ ವರದಿ ಪರಿಣಾಮ ರಾಜ್ಯ ಸರ್ಕಾರ ಸದ್ಯ ಎರಡು ವಾಹನಗಳನ್ನು ನೀಡಿದೆ. ಇನ್ನು ಹಂತ ಹಂತವಾಗಿ ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಹರಪನಹಳ್ಳಿ ತಾಲೂಕಿಗಳಿಗೂ ವಾಹನ ಬರಲಿದೆ ಎಂದು ಅಧಿಕಾರಿಗಳು ತಿಳಿಸಿದರು.