ಈ ಸಮ್ಮೇಳನದಲ್ಲಿ ಜಮ್ಮು-ಕಾಶ್ಮೀರ, ಕಾರ್ಗಿಲ್, ಛತ್ತೀಸ್‌ಗಢ, ಒಡಿಶಾ ಸೇರಿದಂತೆ ದೇಶದ ವಿವಿಧ ರಾಜ್ಯಗಳ ಖ್ಯಾತ ಸಾಹಿತಿಗಳು ಹಾಗೂ ಭಾರತೀಯ ಸೈನಿಕರು ಭಾಗವಹಿಸಲಿದ್ದಾರೆ ಎಂದು ಪರಾಕ್ರಮ ಜನಸೇವಾ ಸಂಸ್ಥಾನದ ಶರದ್ ಸಿಂಗ್ ಕುಮ್ರಿ ತಿಳಿಸಿದ್ದಾರೆ. ವಿಜಯನಗರದ ಲೇಖಕಿ ಅಂತರರಾಷ್ಟ್ರೀಯ ಮಟ್ಟದಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿರುವುದು ಕರ್ನಾಟಕಕ್ಕೆ ಹೆಮ್ಮೆಯ ಸಂಗತಿಯಾಗಿದೆ.