ಪರಿಸರ ರಕ್ಷಣೆಗೆ ಮುಂದಾಗಿ

ಹೊಸಪೇಟೆ ಹೊರಲವಲಯದ ಜಂಬುನಾತೇಶ್ವರ ದೇಗುಲದಲದಲಿ ಭಾನುವಾರ ಬೀಜ ಸಿಂಪರಣೋತ್ಸವಕ್ಕೆ ಪತಂಜಲಿ ಯೋಗ ಸಮಿತಿಯ ರಾಜ್ಯ ಪ್ರಭಾರಿ ಭವರ್‌ಲಾಲ್ ಆರ್ಯ ಚಾಲನೆ ನೀಡಿದರು. ಕನ್ನಡ ವಿವಿ ಪ್ರಾಧ್ಯಪಾಕ ಡಾ.ಎಫ್ ಟಿ ಹಳ್ಳಿಕೇರಿ, ಪ್ರಮುಖರಾದ ಪ್ರಭಾಕರ್, ಪಿ.ಸತ್ಯನಾರಾಯಣ, ಶ್ರೀನಿವಾಸ್ ಮಂಚಿಕಟ್ಟಿ ಇತರರಿದ್ದರು.
ಹೊಸಪೇಟೆ ಹೊರಲವಲಯದ ಜಂಬುನಾತೇಶ್ವರ ದೇಗುಲದಲದಲಿ ಭಾನುವಾರ ಬೀಜ ಸಿಂಪರಣೋತ್ಸವಕ್ಕೆ ಪತಂಜಲಿ ಯೋಗ ಸಮಿತಿಯ ರಾಜ್ಯ ಪ್ರಭಾರಿ ಭವರ್‌ಲಾಲ್ ಆರ್ಯ ಚಾಲನೆ ನೀಡಿದರು. ಕನ್ನಡ ವಿವಿ ಪ್ರಾಧ್ಯಪಾಕ ಡಾ.ಎಫ್ ಟಿ ಹಳ್ಳಿಕೇರಿ, ಪ್ರಮುಖರಾದ ಪ್ರಭಾಕರ್, ಪಿ.ಸತ್ಯನಾರಾಯಣ, ಶ್ರೀನಿವಾಸ್ ಮಂಚಿಕಟ್ಟಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪತಂಜಲಿ ಯೋಗ ಸಮಿತಿಯ ರಾಜ್ಯ ಪ್ರಭಾರಿ ಭವರ್‌ಲಾಲ್ ಆರ್ಯ ಕರೆ
ಹೊಸಪೇಟೆ: ಪರಿಸರ ನಾಶವನ್ನು ತಡೆಗಟ್ಟದಿದ್ದರೆ ಮುಂದಿನ ದಿನಗಳಲ್ಲಿ ಆಕ್ಸಿಜನ್ ಸಿಲಿಂಡರ್‌ಗಳನ್ನು ಬೆನ್ನಿಗೇ ಕಟ್ಟಿಕೊಂಡು ತಿರುಗಾಡುವ ಆತಂಕಕಾರಿ ಸ್ಥಿತಿ ಎದುರಾಗಬಹುದು ಎಂದು ಪತಂಜಲಿ ಯೋಗ ಸಮಿತಿಯ ರಾಜ್ಯ ಪ್ರಭಾರಿ ಭವರ್‌ಲಾಲ್ ಆರ್ಯ ಎಚ್ಚರಿಕೆ ನೀಡಿದ್ದಾರೆ.
ಪತಂಜಲಿ ಯೋಗ ಸಮಿತಿ, ಹನುಮಾನ್ ಮಿತ್ರ ಮಂಡಳಿ ಹಾಗೂ ಭಾವಸಾರ ಕ್ಷತ್ರಿಯ ಸಂಘದ ಸಹಯೋಗದಲ್ಲಿ ನಗರದ ಹೊರಲವಲಯದ ಜಂಬುನಾತೇಶ್ವರ ದೇಗುಲದಲದಲಿ ಬೀಜ ಸಿಂಪರಣೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಕೋವಿಡ್ ಸಂದರ್ಭದಲ್ಲಿ ಆಮ್ಲಜನಕಕ್ಕಾಗಿ ಜನರು ಅನುಭವಿಸಿದ ನರಕಯಾತನೆಯನ್ನು ಸ್ಮರಿಸಿದ ಅವರು, ಇಂತಹ ಸ್ಥಿತಿ ಮರುಕಳಿಸದಂತೆ ನೋಡಿಕೊಳ್ಳಲು ಪ್ರತಿಯೊಬ್ಬರೂ ಪರಿಸರ ಕಾಳಜಿ ವಹಿಸಬೇಕು. ಪತಂಜಲಿ ಕಾರ್ಯಕರ್ತರು ಜನ್ಮದಿನ ಹಾಗೂ ಸಭೆ-ಸಮಾರಂಭಗಳಲ್ಲಿ ಹೂಗುಚ್ಛಗಳಿಗೆ ಬದಲಾಗಿ ಸಸಿಗಳನ್ನು ಉಡುಗೊರೆಯಾಗಿ ನೀಡುವ ಪದ್ಧತಿಯನ್ನು ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಇದೇ ವೇಳೆ 12ನೇ ವಿಶ್ವ ಯೋಗ ದಿನಾಚರಣೆ ಯಶಸ್ವಿಗೊಳಿಸಿದ ಯೋಗ ಶಿಕ್ಷಕರನ್ನು ಗೌರವಿಸಲಾಯಿತು. ಕಾರ್ಯಕ್ರಮದ ನಂತರ ಜಂಬುನಾಥ ದೇಗುಲದ ಸಮೀಪದ ಗುಡ್ಡಗಾಡು ಪ್ರದೇಶದಲ್ಲಿ ಸಾವಿರಾರು ಬೀಜದ ಉಂಡೆಗಳನ್ನು ಹಾಕಲಾಯಿತು. ಆರಂಭದಲ್ಲಿ ಭವರ್‌ಲಾಲ್ ಆರ್ಯ ಅವರಿಂದ ಯೋಗ ಮತ್ತು ಪ್ರಾಣಾಯಾಮ ಮಾರ್ಗದರ್ಶನ ನಡೆಯಿತು.
ಕನ್ನಡ ವಿವಿ ಪ್ರಾಧ್ಯಪಾಕ ಡಾ.ಎಫ್ ಟಿ ಹಳ್ಳಿಕೇರಿ, ಪ್ರಮುಖರಾದ ಪ್ರಭಾಕರ್, ಪಿ.ಸತ್ಯನಾರಾಯಣ, ಶ್ರೀನಿವಾಸ್ ಮಂಚಿಕಟ್ಟಿ, ರಜನಿಕಾಂತ್, ಉಮಾ ವಿಶ್ವನಾಥ್, ಮಂಗಳಮ್ಮ, ಡಾ.ಪಿ.ಡಿ.ವಿನಾಯಕ, ಶಿವಮೂರ್ತಿ, ಅಶೋಕ ಚಿತ್ರಗಾರ, ವೀರೇಶ್ ಕನಕೇರಿ ಮಠ, ಶ್ರೀರಾಮ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net