ವಿಜಯನಗರ ರಾಜ್ಯಕ್ಕೆ ಟಾಪ್ ಟೆನ್ ಸ್ಥಾನ

ಡಿಡಿಪಿಐ ಕಚೇರಿ
ಡಿಡಿಪಿಐ ಕಚೇರಿ
Published on

ಪ್ರಮುಖ ಮುಖ್ಯಾಂಶಗಳು

  • ಎಸ್ಸೆಸ್ಸೆಲ್ಸಿ ಶೇ.96.39 ಫಲಿತಾಂಶ, ಕಳೆದ ಬಾರಿ 18ನೇ ಸ್ಥಾನ
  • 8817 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರು, 18138 ವಿದ್ಯಾರ್ಥಿಗಳು ಪಾಸ್, 679 ವಿದ್ಯಾರ್ಥಿಗಳು ಫೇಲ್
ಹೊಸಪೇಟೆ: ರಾಜ್ಯದಲ್ಲಿ ಕಳೆದ ಎರಡು ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕುಸಿತ ಕಂಡಿದ ವಿಜಯನಗರ ಜಿಲ್ಲೆ ಈ ಬಾರಿ ಉತ್ತಮ ಸಾಧನೆ ಮಾಡಿದ್ದು, ಶೇ.96.39 ಫಲಿತಾಂಶ ಪಡೆದು ರಾಜ್ಯದಲ್ಲಿ 10ನೇ ಸ್ಥಾನಕ್ಕೆ ಜಿಗಿದಿದೆ.
ಕಳೆದ ವರ್ಷ ಜಿಲ್ಲೆಗೆ ಶೇ.67.62ರಷ್ಟು ಫಲಿತಾಂಶ ಬಂದಿತ್ತು. ಈ ಬಾರಿ ಶೇ.96.39ರಷ್ಟು ಫಲಿತಾಂಶ ಬಂದಿದ್ದು, ಕಳೆದ ಸಾಲಿನ ಫಲಿತಾಂಶ ಹೋಲಿಸಿದರೆ ಶೇ.9.64ರಷ್ಟು ಫಲಿತಾಂಶ ಏರಿಕೆ ಕಂಡಿದೆ. ಕಳೆದ ಮಾ.18ರಂದು ನಡೆದ ಪರೀಕ್ಷೆಯಲ್ಲಿ 18817 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇದರಲ್ಲಿ 18137 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. 679 ವಿದ್ಯಾರ್ಥಿಗಳು ಫೇಲ್ ಆಗಿದ್ದಾರೆ. ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಸುಧಾರಣೆ ಕಂಡಿರುವ ವಿಜಯನಗರ ಜಿಲ್ಲೆ 18ನೇ ಸ್ಥಾನದಿಂದ 10ನೇ ಸ್ಥಾನಕ್ಕೆ ಜಿಗಿತ ಕಂಡಿದೆ. ಫಲಿತಾಂಶ ಸುಧಾರಣೆಗೆ ಶಿಕ್ಷಣ ಇಲಾಖೆಯ ಪ್ರಯತ್ನ ಫಲಿಸಿದ್ದು, 2022-23ರ ಬಳಿಕ ಮತ್ತೊಮ್ಮೆ ಹತ್ತನೇ ಸ್ಥಾನ ಅಲಂಕರಿಸಿದೆ.

ಜಿಲ್ಲೆಗೆ ಹೂವಿನಹಡಗಲಿ ಫಸ್ಟ್

ವಿಜಯನಗರ ಜಿಲ್ಲೆ ತಾಲೂಕುವಾರ ಫಲಿತಾಂಶ ನೋಡುವುದಾದರೆ, ಹೂವಿನಹಡಗಲಿ ಶೇ.98.29 ಫಲಿತಾಂಶ ಪಡೆದು ಜಿಲ್ಲೆಗೆ ಮೊದಲ ಸ್ಥಾನ ಪಡೆದಿದೆ. ಹಗರಿಬೊಮ್ಮನಹಳ್ಳಿ ಶೇ.97.97 ಫಲಿತಾಂಶ ಪಡೆದು ಎರಡನೇ ಸ್ಥಾನ ಪಡೆದಿದೆ. ಹರಪನಹಳ್ಳಿ 96.33 ಫಲಿತಾಂಶ, ಹೊಸಪೇಟೆ ಶೇ.95.42 ಫಲಿತಾಂಶ ಹಾಗೂ ಕೂಡ್ಲಿಗಿ ತಾಲೂಕು ಶೇ.94.93 ಫಲಿತಾಂಶ ಪಡೆದು ಕೊನೆ ಸ್ಥಾನ ಪಡೆದಿದೆ.

ಕಲ್ಯಾಣ ಕರ್ನಾಟಕದ ಏಕೈಕ ಜಿಲ್ಲೆ

ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ವಿಜಯನಗರ ಜಿಲ್ಲೆ ಫಲಿತಾಂಶದಲ್ಲಿ ಉತ್ತಮ ಸಾಧನೆ ತೋರಿರುವುದು ವಿಶೇಷ. ಅತ್ಯುತ್ತಮ ಫಲಿತಾಂಶ ಪಡೆದ ಮೊದಲ ಹತ್ತು ಜಿಲ್ಲೆಗಳಲ್ಲಿ ಕಲ್ಯಾಣ ಕರ್ನಾಟಕದ ಏಕೈಕ ಜಿಲ್ಲೆಯಾಗಿದೆ. ಇನ್ನು ಕಲ್ಯಾಣ ಕರ್ನಾಟಕ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ವಿಜಯನಗರ ಜಿಲ್ಲೆ ಸತತವಾಗಿ ಮೊದಲ ಸ್ಥಾನ ಪಡೆಯುತ್ತಿದೆ. 2023-24ರಲ್ಲಿ ಸಾಲಿನಲ್ಲಿ 10ನೇ ಸ್ಥಾನದಿಂದ 27ನೇ ಸ್ಥಾನಕ್ಕೆ ಕುಸಿದಿದ್ದ ಜಿಲ್ಲೆ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಮೊದಲನೇ ಸ್ಥಾನ ಪಡೆದಿತ್ತು. 2025ರಲ್ಲಿ 18ನೇ ಸ್ಥಾನ ಮತ್ತು ಪ್ರಸಕ್ತ ಸಾಲಿನಲ್ಲಿ 10ನೇ ಸ್ಥಾನಗಳಿಸಿ ಉಳಿದ ಜಿಲ್ಲೆಗಳಿಗಿಂತ ಉತ್ತಮ ಫಲಿತಾಂಶ ಪಡೆಯುತ್ತಿದೆ. ನಂತರದ ಸ್ಥಾನಗಳಲ್ಲಿ ರಾಯಚೂರು ಶೇ.21, ಬಳ್ಳಾರಿ ಶೇ.24, ಕೊಪ್ಪಳ ಶೇ.25, ಬೀದರ್ ಶೇ.28 ಹಾಗೂ ಯಾದಗಿರಿ ಶೇ.31, ಕಲಬುರಗಿ ಶೇ.35 ನೇ ಸ್ಥಾನಗಳನ್ನು ಪಡೆದುಕೊಂಡಿವೆ.

ಫಲಿಸಿದ ತಂಡದ ಪರಿಶ್ರಮ

ಕಳೆದ ಎರಡು ವರ್ಷಗಳಿಂದ ಎಲ್ಲಾ ಪರೀಕ್ಷಾ ಕೊಠಡಿಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ವೆಬ್‌ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿತ್ತು. ಇದರಿಂದ ಫಲಿತಾಂಶದಲ್ಲಿ ಕುಸಿತ ಕಂಡಿತು ಎಂದು ಅಂದಾಜಿಸಿದ್ದರು. ಆದರೆ, ಪರೀಕ್ಷೆಗಳು ನಡೆಯ ಬೇಕು ಎಂದರೆ, ಸರ್ಕಾರದ ನಿಯಮಗಳನ್ನು ಪಾಲಿಸಬೇಕಿದೆ. ಜಿಲ್ಲಾಡಳಿತದ ಸೂಚನೆಯಂತೆ ಶಿಕ್ಷಣ ಇಲಾಖೆ ಈ ಬಾರಿ ವಿಶೇಷ ತರಗತಿಗಳ ಜತೆ ರಾಜ್ಯ ಸರ್ಕಾರ ನಾಲ್ಕು ಮಾದರಿ ಪ್ರಶ್ನೆ ಪತ್ರಿಗಳು ಬಿಡುಗಡೆ ಮಾಡಿ ಪೂರ್ವಭಾವಿ ಪರೀಕ್ಷೆ ನಡೆಸಿತು. ಇದರಲ್ಲಿನ ಬಹುತೇಕ ಪ್ರಶ್ನೆಗಳು ಮರುಕಳಿಸಿವೆ. ಗುಂಪುಗಳ ಅದ್ಯಾಯನ, ವಿದ್ಯಾರ್ಥಿಗಳ ಧತ್ತು ಕಾರ್ಯಕ್ರಮ ಹಾಗೂ ಶಿಕ್ಷಕರಿಗೆ ವಿಶೇಷ ತರಬೇತಿ ನೀಡಲಾಗಿತ್ತು. ಇದರಿಂದ ಶೇ.10ರ ಸ್ಥಾನ ಪಡೆಯುವ ಕನಸು ಕಂಡಿದ್ದ ಶಿಕ್ಷಣ ಇಲಾಖೆಯಪ್ರಯತ್ನ ಫಲಿಸಿದೆ.
"

ರಾಜ್ಯದಲ್ಲಿ 18ನೇ ಸ್ಥಾನದಿಂದ ಶೇ.10ರ ಸ್ಥಾನ ಬಂದಿದ್ದೆ. ತಂಡ ಪ್ರಯತ್ನದಿಂದ ಗುರಿ ತಲುಪುವಲ್ಲಿ ಯಶಸ್ವಿಯಾಗಿದ್ದೇವೆ. ಕಳೆದ ಎರಡು ವರ್ಷದಲ್ಲಿ ಈ ಬಾರಿ ಉತ್ತಮ ಫಲಿತಾಂಶ ಬಂದಿದ್ದು ಸಂತಸವಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಫಲಿತಾಂಶ ಪಡೆಯಲು ಪ್ರಯತ್ನಿಸಲಿದೆ.

"

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಈ ಬಾರಿ ರಾಜ್ಯದಲ್ಲಿ 10ನೇ ಸ್ಥಾನ ಬಂದಿದೆ. ಕಲ್ಯಾಣ ಕರ್ನಾಟಕದಲ್ಲಿ ವಿಜಯನಗರ ಮೊದಲ ಸ್ಥಾನದಲ್ಲಿದೆ. ಶಿಕ್ಷಣ ಅಭಿವೃದ್ಧಿಗೆ ಇನ್ನಷ್ಟು ಕ್ರಮಕೈಗೊಳ್ಳಲಾಗುತ್ತದೆ.

"

ಇಲಾಖೆಯಿಂದ ನೀಡಿದ ಮಾರ್ಗದರ್ಶನದಂತೆ ಪಾಠ ಪ್ರವಚನಗಳು ನಡೆದಿವೆ. ಕಳೆದ ಬಾರಿಗಿಂದ 8 ಅಂಕಿ ಹೆಚ್ಚಿದೆ. ಮುಂದಿನ ಸಾಲಿನಲ್ಲಿ ಇದೇ ಪ್ರಯತ್ನದಲ್ಲಿ ಫಲಿತಾಂಶ ಪಡೆಯುತ್ತೇವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net