ದೋಷ ಮುಕ್ತವಾಗಿ ಮುಗಿಲೆತ್ತರಕ್ಕೆ ಏರಿದ ತಿರಂಗಾ

ಹೊಸಪೇಟೆ ಜಿಲ್ಲಾಕ್ರೀಡಾಂಗಣದ 405 ಅಡಿ ಎತ್ತರದ ಧ್ವಜಸ್ತಂಭದಲ್ಲಿ ಶನಿವಾರ ಬಾನಂಗಳದಲ್ಲಿ ಮತ್ತೆ ಗರ್ವದಿಂದ ರಾರಾಜಿಸಿದ ರಾಷ್ಟ್ರಧ್ವಜ.
ಹೊಸಪೇಟೆ ಜಿಲ್ಲಾಕ್ರೀಡಾಂಗಣದ 405 ಅಡಿ ಎತ್ತರದ ಧ್ವಜಸ್ತಂಭದಲ್ಲಿ ಶನಿವಾರ ಬಾನಂಗಳದಲ್ಲಿ ಮತ್ತೆ ಗರ್ವದಿಂದ ರಾರಾಜಿಸಿದ ರಾಷ್ಟ್ರಧ್ವಜ.
Published on

ಪ್ರಮುಖ ಮುಖ್ಯಾಂಶಗಳು

  • ಹೊಸಪೇಟೆಯ 405 ಅಡಿ ಎತ್ತರದ ಧ್ವಜಸ್ತಂಭದಲ್ಲಿ ಸಚಿವ ಕೆ.ಎಸ್.ಬಸವಂತಪ್ಪರಿAದ ಧ್ವಜಾರೋಹಣ
ಹೊಸಪೇಟೆ: ಐತಿಹಾಸಿಕ ನಗರಿ ಹೊಸಪೇಟೆಯ ಬಾನಂಗಳದಲ್ಲಿ ರಾಷ್ಟ್ರಧ್ವಜ ಮತ್ತೆ ಗರ್ವದಿಂದ ರಾರಾಜಿಸಿದೆ. ಇಲ್ಲಿನ ಪ್ರತಿಷ್ಠಿತ 405 ಅಡಿ ಎತ್ತರದ ಬೃಹತ್ ಧ್ವಜಸ್ತಂಭದಲ್ಲಿ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಬಸವಂತಪ್ಪ ಅವರು ವಿಧ್ಯುಕ್ತವಾಗಿ ಧ್ವಜಾರೋಹಣ ನೆರವೇರಿಸಿದರು.
ಕಳೆದ 2025ರ ಜನವರಿ 26ರ ಗಣರಾಜ್ಯೋತ್ಸವದಂದು ಧ್ವಜಾರೋಹಣದ ವೇಳೆ ರೋಪ್‌ವೇ ಹರಿದು ದುರಂತ ಸಂಭವಿಸಿತ್ತು. ಈ ಅನಿರೀಕ್ಷಿತ ಘಟನೆಯಿಂದಾಗಿ ಧ್ವಜಸ್ತಂಭದಲ್ಲಿ ತ್ರಿವರ್ಣ ಧ್ವಜ ಹಾರಾಟ ಸ್ಥಗಿತಗೊಂಡು ಸ್ಥಳೀಯರಲ್ಲಿ ಬೇಸರ ಮೂಡಿಸಿತ್ತು. ಘಟನೆಯ ಬೆನ್ನಲ್ಲೇ ಎಚ್ಚೆತ್ತುಕೊಂಡ ಜಿಲ್ಲಾಡಳಿತ, ತಾಂತ್ರಿಕ ತಜ್ಞರ ಮಾರ್ಗದರ್ಶನದಲ್ಲಿ ಸಂಪೂರ್ಣ ಸುರಕ್ಷತಾ ಕ್ರಮಗಳನ್ನು ಕೈಗೊಂಡು ರೋಪ್‌ವೇ ವ್ಯವಸ್ಥೆಯನ್ನು ಮರುಸ್ಥಾಪಿಸಿ ಸಜ್ಜುಗೊಳಿಸಿತ್ತು.
ಇದೀಗ ಎಲ್ಲಾ ತಾಂತ್ರಿಕ ದೋಷಗಳನ್ನು ಯಶಸ್ವಿಯಾಗಿ ನಿವಾರಿಸಿ, ಮುಗಿಲೆತ್ತರಕ್ಕೆ ರಾಷ್ಟ್ರಧ್ವಜವನ್ನು ಹಾರಿಸಲಾಗಿದೆ. 405 ಅಡಿ ಎತ್ತರದಲ್ಲಿ ಗಂಭೀರವಾಗಿ ಹಾರಾಡುತ್ತಿರುವ ತ್ರಿವರ್ಣ ಧ್ವಜವನ್ನು ಕಂಡು ಜನತೆ ಹರ್ಷ ವ್ಯಕ್ತಪಡಿಸಿದ್ದು, ನಗರದಲ್ಲಿ ದೇಶಭಕ್ತಿಯ ವಾತಾವರಣ ಮನೆಮಾಡಿದೆ.
ಪಂಚ ಗ್ಯಾರಂಟಿ ಯೋಜನೆಗಳ ರಾಜ್ಯ ಉಪಾಧ್ಯಕ್ಷ ಪಿ.ಟಿ.ಪರಮೇಶ್ವರ ನಾಯ್ಕ, ಶಾಸಕ ಎಚ್.ಆರ್.ಗವಿಯಪ್ಪ, ಹುಡಾ ಅಧ್ಯಕ್ಷ ಇಮಾಮ್ ನಿಯಾಜಿ, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಎಸ್ಪಿ ಎಸ್.ಜಾಹ್ನಾವಿ, ಜಿಪಂ ಸಿಇಒ ನೊಂಗ್ಜಾಯ್ ಮಹ್ಮದ್ ಅಲಿ ಅಕ್ರಮ್ ಷಾ, ಅರಣ್ಯ ಉಪ ಸಂರಕ್ಷಣಾಧಿಕಾರಿ ಅನುಪಮಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net