ಸ್ನೇಹಕ್ಕೆ ಬೆಲೆ ಕೊಡುವವರು ಜೀವನದಲ್ಲಿ ಯಶಸ್ವಿ

ಹೊಸಪೇಟೆಯ ಚಿತ್ತವಾಡ್ಗಿ ಸರ್ಕಾರಿ ಪದವಿ ಪೂರ್ವ ಕಾಲೇಜಿನನಲ್ಲಿ ಭಾನುವಾತ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಜಿಲ್ಲಾ ಪಿಯು ಶಿಕ್ಷಣ ಇಲಾಖೆಯ ನೋಡಲ್ ಅಧಿಕಾರಿ ನಾಗರಾಜ್ ಹವಾಲ್ದಾರ್ ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿದರು. ನಿವೃತ್ತ ಪ್ರಾಚಾರ್ಯ ಸಿಕಂದರ್, ಜೀಲಾನ್, ನಿವೃತ್ತ ಉಪನ್ಯಾಸಕಿಯರಾದ ಪ್ರಭಾವತಿ, ಮಂಜುಳಾ, ಮಾಧುರಿ, ಉಪನ್ಯಾಸಕರಾದ ಶೀನಾ ನಾಡೋಳಿ, ರಮಾ, ಜೀಲಾನ್, ಅತಿಥಿ ಉಪನ್ಯಾಸಕರಾದ ನಾಗರಾಜ್, ಶೃತಿ, ಸುರೇಶ್ ಚೌವ್ಹಾಣ್, ಮಂಜುನಾಥ್ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಪದವಿಪೂರ್ವ ಶಿಕ್ಷಣ ಇಲಾಖೆಯ ನೋಡಲ್ ಅಧಿಕಾರಿ ನಾಗರಾಜ್ ಹವಾಲ್ದಾರ್ ಅಭಿಪ್ರಾಯ
ಹೊಸಪೇಟೆ: ವ್ಯಕ್ತಿ ಕಷ್ಟದಲ್ಲಿ ಕುಗ್ಗಿದಾಗ ಧೈರ್ಯ ತುಂಬುವ ಒಂದೇ ಒಂದು ಮಾತು ನರನಾಡಿಗಳಲ್ಲಿ ಹೊಸ ಚೈತನ್ಯ ಮೂಡಿಸಬಲ್ಲದು. ಹೀಗಾಗಿ ಜೀವನದಲ್ಲಿ ಸ್ನೇಹಕ್ಕೆ ಬೆಲೆ ಕೊಡುವವರು ಖಂಡಿತ ಯಶಸ್ಸು ಸಾಧಿಸುತ್ತಾರೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ನೋಡಲ್ ಅಧಿಕಾರಿ ನಾಗರಾಜ್ ಹವಾಲ್ದಾರ್ ಅಭಿಪ್ರಾಯಪಟ್ಟರು.
ನಗರದ ಚಿತ್ತವಾಡ್ಗಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ 2014-15ನೇ ಸಾಲಿನ ವಾಣಿಜ್ಯ ವಿಭಾಗದ ಹಳೆಯ ವಿದ್ಯಾರ್ಥಿಗಳ ಬಳಗ ಆಯೋಜಿಸಿದ್ದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜೀವನವನ್ನು ಅತಿಯಾದ ಗಂಭೀರವಾಗಿ ಪರಿಗಣಿಸದೆ, ಎದುರಾಗುವ ಸವಾಲುಗಳನ್ನು ಸಹಜವಾಗಿ ಸ್ವೀಕರಿಸಿ ನಗುನಗುತ್ತಲೇ ಮುನ್ನಡೆಯಬೇಕು. ಸರಳ ಜೀವನಶೈಲಿ ಹಾಗೂ ಸಕಾರಾತ್ಮಕ ಮನೋಭಾವ ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದರು.
ನಗರದ ಪಿಯು ಶಿಕ್ಷಣ ಕ್ಷೇತ್ರದ ಬೆಳವಣಿಗೆಗೆ ಭದ್ರ ಬುನಾದಿ ಹಾಕಿದ ಪ್ರಾಂಶುಪಾಲರಾದ ಹನುಮಂತಪ್ಪ, ಜಹೀರುದ್ದೀನ್, ಪುರುಷೋತ್ತಮ್ ಹಾಗೂ ಸಿಕಂದರ್ ಅವರ ಸೇವೆಯನ್ನು ಈ ಸಂದರ್ಭದಲ್ಲಿ ಸ್ಮರಿಸಿದ ಅವರು, ಸರ್ಕಾರಿ ಕಾಲೇಜುಗಳ ಉಪನ್ಯಾಸಕರು ವಿದ್ಯಾರ್ಥಿಗಳ ಬದುಕಿಗೆ ಗಟ್ಟಿಯಾದ ಅಡಿಪಾಯ ನಿರ್ಮಿಸಿದ್ದಾರೆ. ವಿದ್ಯಾರ್ಥಿಗಳು ಗುರುಗಳ ಮಾರ್ಗದರ್ಶನವನ್ನು ಜೀವನದಲ್ಲಿ ಅಳವಡಿಸಿಕೊಂಡು, ತಮ್ಮ ಕರ್ತವ್ಯಗಳನ್ನು ಶ್ರದ್ಧೆ-ಪ್ರೀತಿಯಿಂದ ನಿರ್ವಹಿಸಬೇಕೆಂದು ಕರೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net