ಹೊಸಪೇಟೆ ತಾಲೂಕಿನಲ್ಲಿರುವ 88 ಶುದ್ಧ ಕುಡಿಯುವ ನೀರಿನ ಘಟಕಗಳ ಪೈಕಿ ಕಲ್ಲಹಳ್ಳಿ, ಶಂಕರ ನಗರ, ಇಂಗಳಗಿ ಸೇರಿದಂತೆ 14 ಘಟಕಗಳು ದುಸ್ಥಿತಿಯಲ್ಲಿವೆ. ಜೀವನಾಡಿಯ ನೆರಳಲ್ಲಿದ್ದರೂ ನಗರಕ್ಕೂ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ, ಎಂ.ಪಿ. ಪ್ರಕಾಶ್ ನಗರ, ಧೂಳಪೇಟೆ, ಕಾರಿಗನೂರು, ಎಸ್.ಎಲ್. ಚೌಕಿ ಸೇರಿದಂತೆ ಮತ್ತಿತರ ಬಡಾವಣೆಗಳಲ್ಲಿ ನೀರಿನ ಸಮಸ್ಯೆ ಇದೆ. ಆದರೆ, ನಗರಸಭೆಯಿಂದ ಮಾತ್ರ ಯಾವುದೇ ಸಮಸ್ಯೆ ಇಲ್ಲ ಎನ್ನುವ ಸಿದ್ಧ ಉತ್ತರ ಬರುತ್ತಿದೆ. ಒಟ್ಟಾರೆ ಬೇಸಿಗೆ ಬಂತೆಂದರೆ ಜನ ಟ್ಯಾಂಕರ್‌ಗೆ ಕಾಯುವ ಕಷ್ಟ ತಪ್ಪಿದ್ದಲ್ಲ.