

ಪ್ರಮುಖ ಮುಖ್ಯಾಂಶಗಳು
ಹೊಸಪೇಟೆ: ಜಿಲ್ಲೆಯಲ್ಲಿ ಬೆಳೆ ಕಟಾವು ಪ್ರಯೋಗ ಮತ್ತು ಜನನ, ಮರಣಗಳ ನೋಂದಾಣಿಗಳನ್ನು ವಿಳಂಬವಾಗದAತೆ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಗುರುವಾರ ಮಾತನಾಡಿದರು.
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 3446 ಬೆಳೆ ಕಟಾವು ಪ್ರಯೋಗಗಳು ಮತ್ತು ಹಿಂಗಾರು ಹಂಗಾಮಿನಲ್ಲಿ 906 ಬೆಳೆ ಕಟಾವು ಪ್ರಯೋಗಗಳನ್ನು ಹಂಚಿಕೆ ಮಾಡಲಾಯಿತ್ತು. ಈಗಾಗಲೇ ಮುಂಗಾರು ಹಂಗಾಮಿನಲ್ಲಿ ಶೇ.86 ರಷ್ಟು ನಮೂನೆ 2 ಗಳನ್ನು ಸಲ್ಲಿಸಲಾಗಿದೆ. ಬಾಕಿ ಉಳಿದ ನಮೂನೆಗಳನ್ನು ತಕ್ಷಣ ನೊಂದಾಣಿ ಮಾಡಬೇಕು. ಹಿಂಗಾರು ಹಂಗಾಮಿನ ನಮೂನೆ-1 ಗಳನ್ನು ಡೌನ್ಲೋಡ್ ಮಾಡಿಕೊಂಡು ಬೆಳೆ ಸಮಿಕ್ಷೆ ಕೈಗೊಳ್ಳುವುದು. ಬೆಳೆ ಕಟಾವು ಪ್ರಯೋಗಗಳ ವ್ಯಪಗತವಾಗದಂತೆ ಜಾಗೃತ ವಹಿಸುವುದು. 7 ನೇ ಸಣ್ನ ನೀರಾವರಿ ಗಣತಿ 2 ನೇ ನೀರಿನ ಆಸರೆ ಗಣತಿ ತಕ್ಷಣವಾಗಿ ಪ್ರಾರಂಭಿಸಲು ಎಲ್ಲಾ ತಹಸೀಲ್ದಾರರಿಗೆ ಕ್ರಮ ವಹಿಸಲು ಸೂಚಿಸಿದರು.
ಜಿಲ್ಲೆಯಲ್ಲಿ ಜನನ ಮತ್ತು ಮರಣ ನೊಂದಾಣಿಗಳು ಕಳೆದ 4 ತಿಂಗಳಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ಜನನ 7870, ಮರಣ 3653 ಒಟ್ಟು 11523 ನೊಂದಾಣಿಯಾಗುತ್ತಿರುವ ಎಂದು ವರದಿಯಾಗಿದೆ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿನ ಜನನ-ಮರಣ ನೋಂದಣಿ ಪ್ರಕ್ರಿಯೆ ವಿಳಂಬವಾಗದAತೆ ನಿಗಧಿತ ಸಮಯದಲ್ಲಿ ನೋಂದಾಣಿ ಮಾಡಲು ಜನನ-ಮರಣ ಎಲ್ಲಾ ನೊಂದಾಣಿಧಿಕಾರಿ ಮತ್ತು ಉಪನೊಂದಾಣಿಧಿಕಾರಿಗಳಿಗೆ ಕ್ರಮವಹಿಸಲು ಸೂಚಿಸಿದರು.
ಇಲ್ಲಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಜನನ ನೋಂದಾಣಿಯನ್ನು ನಿಗಧಿತ ಸಮಯದಲ್ಲಿ ನೊಂದಾಣಿಯಾಗುತ್ತಿಲ್ಲ. ಎಲ್ಲಾ ನೊಂದಾಣಿಗಳನ್ನು ನಿಗಧಿತ ಸಮಯದಲ್ಲಿ ನೋಂದಾಣಿ ಮಾಡಲು ಸಂಬAಧಿಸಿದ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು. ಸರ್ಕಾರದ ಮಾರ್ಗಸೂಚಿಯಂತೆ 21 ದಿನಗಳ ಬದಲಾಗಿ 21 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಪ್ರಮಾಣ ಪತ್ರಗಳನ್ನು ಕುಟುಂಬಸ್ಥರಿಗೆ ನೀಡುವಲ್ಲಿ ಯಶ್ವಸಿಯಾಗಬೇಕು ಎಂದರು.
ಜಿಪA ಸಿಇಒ ನೋಂಗ್ಜಾಯ್ ಮೊಹಮ್ಮದ್ ಅಕ್ರಮ್ ಅಲಿ ಶಾ, ಅಪರ ಜಿಲ್ಲಾಧಿಕಾರಿ ಜಿ.ಬಾಲಕೃಷ್ಣಪ್ಪ, ಜಿಲ್ಲಾ ಸಾಂಖ್ಯಿಕ ಅಧಿಕಾರಿ ಎನ್.ಕೆ.ಪತ್ರಿಬಸಪ್ಪ, ಕೃಷಿ ಜಂಟಿ ನಿರ್ದೇಶಕ ಜಿ.ಟಿ.ಮಂಜುನಾಥ, ಉಪನಿರ್ದೇಶಕ ನಯೀಮ್ ಪಾಷಾ, ತೋಟಗಾರಿಕೆ ಜಂಟಿ ನಿರ್ದೇಶಕ ಪ್ರಭುರಾಜ್, ರೇಷ್ಮೆ ಉಪನಿರ್ದೇಶಕ ಹರ್ಷ, ವೈದ್ಯಾಧಿಕಾರಿ ಡಾ.ಹರಿಪ್ರಸಾದ ಇತರರಿದ್ದರು.