ಬೇಸಿಗೆಯಲ್ಲಿ ನೀರಿನ ಕೊರತೆ ಆಗದು

ಹೊಸಪೇಟೆಯಲ್ಲಿ ಮೇಲ್ಮಟ್ಟ ಜಲಸಂಗ್ರಹಗಾರ ನಿರ್ಮಾಣ ಹಾಗೂ ಏರು  ಕೊಳವೆ ಮಾರ್ಗ ಅಳವಡಿಕೆ ಕಾಮಗಾರಿಗಳಿಗೆ ಬುಧವಾರ ಶಾಸಕ ಎಚ್.ಆರ್.ಗವಿಯಪ್ಪ ಭೂಮಿ ಪೂಜೆ ನೆರವೇರಿಸಿದರು. ನಗರಸಭೆ ಪೌರಾಯುಕ್ತ ಶಿವಕುಮಾರ್ ಎರಗುಡಿ, ಅಧ್ಯಕ್ಷ ರೂಪೇಶ್ ಕುಮಾರ್, ನಗರಸಭೆ ಸದಸ್ಯರಾದ ರಮೇಶ್ ಗುಪ್ತ, ಮಂಜುನಾಥ ಪ್ರಮುಖರಾದ ಟಿ.ನಾಗರಾಜ,‌ ಮಧುರ ಚನ್ನಶಾಸ್ತ್ರಿ ಸೇರಿದಂತೆ ಇತರರಿದ್ದರು.
ಹೊಸಪೇಟೆಯಲ್ಲಿ ಮೇಲ್ಮಟ್ಟ ಜಲಸಂಗ್ರಹಗಾರ ನಿರ್ಮಾಣ ಹಾಗೂ ಏರು ಕೊಳವೆ ಮಾರ್ಗ ಅಳವಡಿಕೆ ಕಾಮಗಾರಿಗಳಿಗೆ ಬುಧವಾರ ಶಾಸಕ ಎಚ್.ಆರ್.ಗವಿಯಪ್ಪ ಭೂಮಿ ಪೂಜೆ ನೆರವೇರಿಸಿದರು. ನಗರಸಭೆ ಪೌರಾಯುಕ್ತ ಶಿವಕುಮಾರ್ ಎರಗುಡಿ, ಅಧ್ಯಕ್ಷ ರೂಪೇಶ್ ಕುಮಾರ್, ನಗರಸಭೆ ಸದಸ್ಯರಾದ ರಮೇಶ್ ಗುಪ್ತ, ಮಂಜುನಾಥ ಪ್ರಮುಖರಾದ ಟಿ.ನಾಗರಾಜ,‌ ಮಧುರ ಚನ್ನಶಾಸ್ತ್ರಿ ಸೇರಿದಂತೆ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಲಸಂಗ್ರಹಗಾರ ಕಾಮಗಾರಿಗೆ ಚಾಲನೆ ವೇಳೆ ಶಾಸಕ ಎಚ್ .ಆರ್ .ಗವಿಯಪ್ಪ ಹೇಳಿಕೆ
ಹೊಸಪೇಟೆ: ಸಮರ್ಪಕ ಕುಡಿವ ನೀರು ಪೂರೈಕೆಯು ಸಮಾಜದ ಮೂಲಾಧಾರವಾಗಿದ್ದು, ನಗರದಲ್ಲಿ ಸಮರ್ಪಕವಾಗಿ ಕುಡಿವ ನೀರು ಸರಬರಾಜು ಮಾಡಲಾಗುತ್ತದೆ ಎಂದು ಶಾಸಕ ಎಚ್.ಆರ್.ಗವಿಯಪ್ಪ ಹೇಳಿದರು.
ನಗರದ ಎಂ‌.ಪಿ.ಪ್ರಕಾಶ ನಗರ ಮತ್ತು ಎಸ್.ಆರ್.ನಗರ ಬಡವಾಣೆಗಳಿಗೆ ಅಮೃತ್ ನಗರೋತ್ತಾನ (ಮುನಿಸಿಪಾಲಿಟಿ-4) ಯೋಜನೆಯಡಿ ನೀರು ಸರಬರಾಜು ಮಾಡಲು 10 ಲಕ್ಷ ಲೀ ಸಾಮಥ್ಯ 9 ಮೇಲ್ಮಟ್ಟ ಜಲಸಂಗ್ರಹಗಾರ ನಿರ್ಮಾಣ ಹಾಗೂ ಏರು ಕೊಳವೆ ಮಾರ್ಗ ಅಳವಡಿಕೆ ಕಾಮಗಾರಿಗಳಿಗೆ ಬುಧವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಬೇಸಿಗೆಯಲ್ಲಿ ಶುದ್ದ ನೀರನ್ನು ಸಮಪರ್ಕವಾಗಿ ಸರಬರಾಜು ಮಾಡುವ ಸದುದ್ದೇಶದಿಂದ ನಗರದಲ್ಲಿ, 04 ಮೇಲ್ಮಟ್ಟದ ಜಲಸಂಗ್ರಹಗಾರ ( ಓಎಚ್ ಟಿ ಟ್ಯಾಂಕ್) ಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಇದರಲ್ಲಿ ಎಂ‌.ಪಿ.ಪ್ರಕಾಶ ನಗರ ಮತ್ತು ಎಸ್.ಆರ್.ನಗರ ಬಡವಾಣೆಗಳು ಹಾಗೂ ಎಂ.ಪಿ.ಪ್ರಕಾಶದಲ್ಲಿ 409.03 ಲಕ್ಷ ರೂ. ಗಳಲ್ಲಿ ಎರಡು ಓಎಚ್ ಟಿ ಟ್ಯಾಂಕ್ ಗಳ ನಿರ್ಮಾಣ ಕಾಮಗಾರಿಯನ್ನು ಪ್ರಾರಂಭಿಸಲಾಗಿದೆ. ಉಳಿದ 2 ಟ್ಯಾಂಕ್ ಗೆ ಟೆಂಡರ್ ಕರೆಯಲಾಗಿದ್ದು ಟೆಂಡರ್ ಪ್ರಕ್ರಿಯೆ ಮುಗಿದ ನಂತರ ಅವುಗಳನ್ನು ಪ್ರಾರಂಭಿಸಲಾಗುತ್ತದೆ. ನಗರದಾದ್ಯಂತ 38 ಮಿಲಿಯನ್ ಲೀಟರ್ (ಎಂಎಲ್ ಡಿ) ನೀರು ಸರಬರಾಜು ಆಗುತ್ತಿದೆ. ಹೊಸ ಯೋಜನೆಗಳ ಮ‌ೂಲಕ ಹೆಚ್ಚವರಿಯಾಗಿ 70 ಎಂಎಲ್ ಡಿ ನೀರು ಲಭ್ಯವಾಗಲಿದ್ದು, ಇದರಿಂದ ನಗರಕ್ಕೆ ಒಟ್ಟು 108 ಎಂಎಲ್ ಡಿ ನೀರು ದೊರೆಯುವ ಮೂಲಕ ನೀರಿನ ಅಭಾವ ಕಡಿಮೆಯಾಗಲಿದೆ‌. 70 ಎಂಎಲ್ ಡಿ ಜಲಸಂಗ್ರಹಗಾರಗಳನ್ನು ನಗರದ ಜೋಳದ ರಾಶಿ ಗುಡ್ಡ, ಜಂಬುನಾಥ ಗುಡ್ಡ ಮತ್ತು ಕಾರಿಗನೂರು ಗುಡ್ಡಗಳಲ್ಲಿ ಟ್ಯಾಂಕ್ ಗಳನ್ನು ನಿರ್ಮಾಣ ಮಾಡಲಾಗುತ್ತದೆ.
ಇದರಿಂದ ಮುಂದಿನ ದಿನಗಳಲ್ಲಿ 7 ರಿಂದ 8 ಲಕ್ಷ್ಯ ಜನಸಂಖ್ಯೆಗೆ ಸಾಕಾಗುವಷ್ಟು ನೀರನ್ನು ಸರಬರಾಜು ಮಾಡಲಾಗುತ್ತದೆ. ಮತ್ತು ನಗರದ ಎಲ್ಲ ವಾಡ್೯ಗಳಿಗೆ ರಸ್ತೆ ನಿಮಾರ್ಣ ಮಾಡಲು 38 ಗುತ್ತಿಗೆದಾರರಿಗೆ ರಸ್ತೆ ಕಾಮಗಾರಿಗಳನ್ನು ನೀಡಲಾಗಿದ್ದು, ನಗರಸಭೆ ಅಧ್ಯಕ್ಷರಿಗೆ ಮತ್ತು ಸದಸ್ಯರಿಗೆ ಅದರ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಅವರು ಕಾಮಗಾರಿಗಳ ಬಗ್ಗೆ ಮೇಲ್ವಿಚಾರಣೆ ಮಾಡಬೇಕು ಮತ್ತು ರಸ್ತೆ ಕೆಳಗೆ ಯಾವುದೆ ಪೈಪ್ ಅಳವಡಿಕೆ ಕಾರ್ಯವನ್ನು ರಸ್ತೆ ನಿರ್ಮಾಣವಾಗುವ ಮುಂಚೆಯೆ ಮಾಡಬೇಕು. ಇದರಿಂದ ರಸ್ತೆ ಅಗೆಯುವುದನ್ನು ತಪ್ಪಿಸಬಹುದು. ಮುಂದಿನ ದಿನಗಳಲ್ಲಿ ಪ್ರಮುಖ ವಾಡ್೯ ಗಳಲ್ಲಿ ಸಿಸಿ ಕ್ಯಾಮೆರಾಗಳ ಅಳವಡಿಕೆಯ ಬಗ್ಗೆ ಯೋಜನೆ ರೂಪಿಸಲಾಗುತ್ತದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net