ಹೂವಿನಹಡಗಲಿ : ಪಟ್ಟಣದ ವಿಜಯನಗರ ಬಡಾವಣೆಯ ಮಾಜಿ ಸೈನಿಕ ಕೆ.ದೇವೇಂದ್ರಪ್ಪ ಅವರು ಮನೆ ಹಿಂಬದಿಯ ಬಾಗಿಲು ಮುರಿದು 10 ಲಕ್ಷ ನಗದು ಕಳ್ಳತನವಾದ ಘಟನೆ ಶನಿವಾರ ನಡೆದಿದೆ.
ಕೆ.ದೇವೆಂದ್ರಪ್ಪ ಅವರು ತಮ್ಮ ನೂತನ ಮನೆ ನಿರ್ಮಾಣಕ್ಕೆ ಕಟ್ಟಿಗೆಗಳನ್ನು ತರಲು 10 ಲಕ್ಷ ರೂ. ಮನೆಯಲ್ಲಿಟ್ಟಿದ್ದರು. ಶನಿವಾರ ಬೆಳಿಗ್ಗೆ ಹುಲಿಗುಡ್ಡದ ಸಮೀಪ ತಮ್ಮ ಜಮೀನಿಗೆ ತೆರಳಿದ್ದಾರೆ.
ಮಧ್ಯಾಹ್ನ ಎಂದಿನಂತೆ ಮನೆಗೆ ಬಂದಿದ್ದಾರೆ. ಮುಂಬದಿಯ ಬಾಗಿಲು ತೆಗೆದು ಮನೆಯೊಳಗೆ ತೆರಳಿದಾಗ ಮನೆಯಲ್ಲಿನ ತಿಜುರಿಯ ಬಾಗಿಲು ತೆಗೆದಿರುವುದು ಕಂಡು ಬಂದಿದೆ. ತಿಜುರಿಯನ್ನು ನೋಡಿದಾಗ 10 ಲಕ್ಷ ರೂ. ನಗದು ಕಾಣೆಯಾಗಿತ್ತು.
ಗಾಬರಿಗೊಂಡು ಮನೆಯನ್ನು ಹುಡುಕಿದಾಗ ಹಿಂಬದಿಯ ಬಾಗಿಲು ಮುರಿದಿರುವುದು ಕಂಡು ಬಂದಿದೆ. ಸ್ಥಳಕ್ಕೆ ಪಟ್ಟಣ ಪೊಲೀಸರು ಭೇಟಿ ನೀಡಿ ಸಿಸಿ ಕ್ಯಾಮಾರಗಳನ್ನು ಪರಿಶೀಲಿಸಿದಾಗ ಕಳ್ಳರು ಕಾರಿನಲ್ಲಿ ಬಂದು ಹೋಗಿರುವ ಸುಳಿವು ದೊರೆತಿದೆ.
ಈ ಕುರಿತು ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಪೊಲೀಸ್ ತನಿಖೆ ಚುರುಕುಗೊಳಿಸಿದ್ದಾರೆ.