ಯುಜಿಸಿ ಸುಧಾರಣೆ ಕಾಯಿದೆ ತಡೆ ತಕ್ಷಣ ತೆರವಾಗಲಿ

ರಾಮಚಂದ್ರ
ರಾಮಚಂದ್ರ
Published on

ಪ್ರಮುಖ ಮುಖ್ಯಾಂಶಗಳು

  • ಎಸ್ಸಿ, ಎಸ್ಟಿ, ಒಬಿಸಿ ಸಮನ್ವಯ ಸಮಿತಿ ಸಂಚಾಲಕ ಸ್ಲಂ ರಾಮಚಂದ್ರ ಒತ್ತಾಯ

ಹೊಸಪೇಟೆ: ನ್ಯಾಯಾಲಯದ ಸೂಚನೆಯಂತೆ ಯುಜಿಸಿ ಸುಧಾರಣೆಗಳು ಮತ್ತು ಸಮಾನತೆ ಕಾಯ್ದೆ ಜಾರಿಗೆ ತರಲು ಮುಂದಾಗಿರುವ ಕೇಂದ್ರ ಸರ್ಕಾರ ನಿರ್ಧರ ಸ್ವಾಗತಾರ್ಹ ಎಂದು ಎಸ್‌ಸಿ, ಎಸ್‌ಟಿ, ಒಬಿಸಿ ಸಮನ್ವಯ ಸಮಿತಿ ಸಂಚಾಲಕ ಸ್ಲಂ ರಾಮಚಂದ್ರ ಒತ್ತಾಯಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಕಾಯ್ದೆಯಿಂದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ಸ್ವಲ್ಪಮಟ್ಟಿಗಾದರೂ ತಡೆಗಟ್ಟುವುದು ಸಾಧ್ಯವಿದೆ. ಈ ಕಾಯ್ದೆಗೆ ಸುಪ್ರೀಂ ಕೋರ್ಟ್ನಲ್ಲಿ ಇರುವ ತಡೆಯನ್ನು ತಕ್ಷಣ ತೆರವುಗೊಳಿಸುವ ಕೆಲಸ ಆಗಬೇಕು. ಕಾಯ್ದೆಯನ್ನು ಜಾರಿಗೆ ತರಬೇಕು ಎಂದು ಅನೇಕ ಸಂಘ ಸಂಸ್ಥೆಗಳು ಹೋರಾಟ ಮಾಡಿದ್ದರ ಫಲವಾಗಿ ಯುಜಿಸಿ ಸಮಾನತೆ ಕಾಯ್ದೆ ರೂಪಿಸಲಾಗಿದೆ. ಇದನ್ನು ತಡೆಗಟ್ಟುವ ಯಾವ ಪ್ರಯತ್ನಕ್ಕೂ ಸರ್ಕಾರ ಕುಮ್ಮಕ್ಕು ಕೊಡಬಾರದು. ಹಾಗೇನಾದರೂ ಆದರೆ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.

ಪ್ರಮುಖರಾದ ಜೆ.ಶಿವಕುಮಾರ್, ಎಚ್.ವೀರೇಶ್, ವೆಂಕಮ್ಮ, ರಾಘವೇಂದ್ರ ಕನ್ನೇರಿ, ಖಾಲಿದ್, ಇರ್ಫಾನ್ ಇದ್ದರು.

31 ಮಂಜು 09

ರಾಮಚಂದ್ರ

=======

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net