

ಪ್ರಮುಖ ಮುಖ್ಯಾಂಶಗಳು
ಸದ್ಯ ಕುಡಿವ ನೀರಿನ ಸಮಸ್ಯೆಯಾಗಿಲ್ಲ. ಪುರಸಭೆ ವ್ಯಾಪ್ತಿಯಲ್ಲಿ 117ಬೋರ್‌ವೆಲ್‌ಗಳಿವೆ. ಆದರೆ, ನೀರಿನ ಸರಬರಾಜು ಮಾಡುವಲ್ಲಿ ನಿಧಾನವಾಗಿ ಸರಬರಾಜು ಆಗುತ್ತಿದೆ. ಜಾಕ್‌ವೆಲ್‌ಬಳಿ ಸ್ಯಾಂಡ್‌ಬ್ಯಾಗ್ ಬ್ಯಾರೇಜ್ ನಿರ್ಮಾಣಕ್ಕಾಗಿ ಟೆಂಡರ್ ಕರೆಯಲಾಗಿದೆ. ಅಲ್ಲದೆ ನೀರು ಸರಬರಾಜು ಮಂಡಲಿಯವರು ಹೆಚ್ಚಿನ ಕಾಳಜಿವಹಿಸಲಿದ್ದಾರೆ. ಜಿಲ್ಲಾ ಟಾಸ್ಕ್‌ಫೋರ್ಸ್ ಕೂಡ ಕಾಳಜಿ ವಹಿಸಿದೆ.
ಜಿಲ್ಲಾ ಟಾಸ್ಕ್‌ಪೋರ್ಸ್ ಗಮನಕ್ಕೂ ತರುವ ಜತೆಗೆ ಭದ್ರಾನದಿಯಿಂದ, ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಕನಿಷ್ಟ 1ಟಿ.ಎಂ.ಸಿ ನೀರು ನದಿಗೆ ಬಿಡುವಂತೆ ತಿಳಿಸಲಾಗಿದೆ. ಬೇಸಿಗೆ ನಿಮಿತ್ತ ಸಾರ್ವಜನಿಕರು ಕುಡಿಯುವ ನೀರನ್ನು ವ್ಯರ್ಥಮಾಡದೆ ಮಿತವಾಗಿ ಬಳಸಬೇಕು.