ಪ್ರತಿಯೊಂದು ವಸ್ತುವಿನ ಮೂಲವೇ ಭೂಮಿ

ತೋರಣಗಲ್ ಓಪಿಜೆ ಕೇಂದ್ರದಲ್ಲಿ ರೈತರಿಗೆ ಕೃಷಿ ಪರಿಕರಗಳ ಕಿಟ್ ವಿತರಿಸಲಾಯಿತು. ಜೆಎಸ್‌ಡಬ್ಲುೃ ಫೌಂಡೇಷನ್ ದಕ್ಷಿಣ ವಿಭಾಗದ ಮುಖ್ಯಸ್ಥ ಪೆದ್ದಣ್ಣ ಬೀಡಲಾ, ಜೆಎಸ್‌ಡಬ್ಲುೃ ಸ್ಟೀಲ್ ಲಿಮಿಟೆಡ್‌ನ ಹಿರಿಯ ಉಪಾಧ್ಯಕ್ಷ ಸುನಿಲ್ ರಾಲ್ಫ್, ಜೆಎಸ್‌ಡಬ್ಲುೃ ಫೌಂಡೇಷನ್ ಕೃಷಿ ಅಧಿಕಾರಿ ನಾಗನಗೌಡ ಇದ್ದರು.
ತೋರಣಗಲ್ ಓಪಿಜೆ ಕೇಂದ್ರದಲ್ಲಿ ರೈತರಿಗೆ ಕೃಷಿ ಪರಿಕರಗಳ ಕಿಟ್ ವಿತರಿಸಲಾಯಿತು. ಜೆಎಸ್‌ಡಬ್ಲುೃ ಫೌಂಡೇಷನ್ ದಕ್ಷಿಣ ವಿಭಾಗದ ಮುಖ್ಯಸ್ಥ ಪೆದ್ದಣ್ಣ ಬೀಡಲಾ, ಜೆಎಸ್‌ಡಬ್ಲುೃ ಸ್ಟೀಲ್ ಲಿಮಿಟೆಡ್‌ನ ಹಿರಿಯ ಉಪಾಧ್ಯಕ್ಷ ಸುನಿಲ್ ರಾಲ್ಫ್, ಜೆಎಸ್‌ಡಬ್ಲುೃ ಫೌಂಡೇಷನ್ ಕೃಷಿ ಅಧಿಕಾರಿ ನಾಗನಗೌಡ ಇದ್ದರು.
Published on
ಸಂಡೂರು: ಆಹಾರವಿಲ್ಲದೆ ಯಾರೂ ಜೀವನ ಮಾಡಲು ಸಾಧ್ಯವಿಲ್ಲ. ಆಹಾರದ ಜತೆಗೆ ನಾವು ಬಳಕೆ ಮಾಡುವ ಪ್ರತಿಯೊಂದು ವಸ್ತುವಿನ ಮೂಲ ಭೂಮಿ ಎಂದು ಜೆಎಸ್‌ಡಬ್ಲುೃ ಸ್ಟೀಲ್ ಲಿಮಿಟೆಡ್‌ನ ಹಿರಿಯ ಉಪಾಧ್ಯಕ್ಷ ಸುನಿಲ್ ರಾಲ್ಫ್ ಹೇಳಿದರು.
ತಾಲೂಕಿನ ತೋರಣಗಲ್ ಓಪಿಜೆ ಕೇಂದ್ರದಲ್ಲಿ ಕೃಷಿ ಪರಿಕರಗಳ ಕಿಟ್ ವಿತರಣೆಗೆ ಚಾಲನೆ ನೀಡಿ ಶನಿವಾರ ಮಾತನಾಡಿದರು. ಜೆಎಸ್‌ಡಬ್ಲುೃ ಫೌಂಡೇಶನ್‌ನಿಂದ ರೈತರಿಗೆ ನಿರಂತರ ಆದಾಯ ತರುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ರೂಪಿಸಲಾಗುತ್ತಿದೆ. ರೈತ ದೇಶದ ಬೆನ್ನೆಲುಬು. ಅವರನ್ನು ಆರ್ಥಿಕವಾಗಿ ಸದೃಢರನ್ನಾಗಿ ಮಾಡುವುದು ನಮ್ಮೆಲ್ಲರ ಆಶಯವಾಗಿದೆ ಎಂದರು.
ಜೆಎಸ್‌ಡಬ್ಲುೃ ಸ್ಟೀಲ್ ಲಿಮಿಟೆಡ್‌ನ ಪರಿಸರ ವಿಭಾಗದ ಮುಖ್ಯಸ್ಥ ಜಯಪ್ರಕಾಶ್ ಗೋದಾವರ್ತಿ ಮಾತನಾಡಿ, ಈ ವರ್ಷ 300 ರೈತರಿಗೆ ನೆರವು ನೀಡಲಾಗಿದೆ. ಮುಂದಿನ 2 ವಷರ್ಗಳಲ್ಲಿ ಒಟ್ಟು ಸಾವಿರ ಮಾದರಿ ರೈತರನ್ನು ರೂಪಿಸಲು ಯೋಜನೆ ರೂಪಿಸಲಾಗಿದೆ. ಕಾರ್ಯಕ್ರಮದಲ್ಲಿ ದರೋಜಿ ಮತ್ತು ಮಾದಾಪುರ ಗ್ರಾಮದ ಒಟ್ಟು 60 ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ ಎಂದು ಹೇಳಿದರು.
ಜೆಎಸ್‌ಡಬ್ಲ್ಯೂ ಫೌಂಡೇಷನ್ ದಕ್ಷಿಣ ವಿಭಾಗದ ಮುಖ್ಯಸ್ಥ ಪೆದ್ದಣ್ಣ ಬೀಡಲಾ ಮಾತನಾಡಿ, ಎರಡು ಗ್ರಾಮಗಳ 60 ರೈತರಿಗೆ ಕಿಟ್ ವಿತರಣೆ ಮಾಡಲಾಗುತ್ತಿದೆ. ಎಲ್ಲ 300 ರೈತರಿಗೆ ಈಗಾಗಲೇ ಪರಿಕರಗಳು ಬಂದಿವೆ. ಉಳಿದ ರೈತರಿಗೆ ಗ್ರಾಮ ಮಟ್ಟದಲ್ಲೇ ಶೀಘ್ರದಲ್ಲಿ ವಿತರಣೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಪ್ರತಿ ರೈತರಿಗೆ ತರಕಾರಿ ಬೀಜಗಳು, ಜೈವಿಕ ರಸಗೊಬ್ಬರ ತಯಾರಿಸಲು ಐಎಎಸ್‌ಒ ಬೆಡ್ ಮತ್ತು ಜೀವಂತ ಎರೆಹುಳುಗಳು, 20 ಗಿರಿರಾಜ ತಳಿಯ ಕೋಳಿ ಮರಿಗಳು, ಹೊಲದ ಬದುಗಳಲ್ಲಿ ನೆಡಲು ಅರಣ್ಯ ಮರಗಳು ಮತ್ತು 1ರಿಂದ2 ಎಕರೆಗೆ ರೈತರು ಕೇಳಿದ ಸಸಿಗಳನ್ನು ನೀಡಲಾಗುವುದು. ಕೃಷಿ ಉಪಕರಣಗಳು ಮತ್ತು ಮಣ್ಣು ಪರೀಕ್ಷೆ ಕಾರ್ಡ್ ಎಲ್ಲ ರೈತರಿಗೆ ಶೀಘ್ರದಲ್ಲೇ ವಿತರಿಸಲಾಗುವುದು. ರೈತರು ಕಾರ್ಯಕ್ರಮದ ಅನುಕೂಲಗಳನ್ನು ಬಳಸಿಕೊಂಡು ಆದಾಯಗಳಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ 60 ರೈತರಿಗೆ ತರಕಾರಿ ಬೀಜಗಳು, ಗೊಬ್ಬರ ಬೆಡ್, 2ಎಕರೆಗೆ ಆಗುವಷ್ಟು ಜೈವಿಕ ರಸಗೊಬ್ಬರ ವಿತರಿಸಲಾಯಿತು. ಜೆಎಸ್‌ಡಬ್ಲುೃ ಫೌಂಡೇಷನ್ ಕೃಷಿ ಅಧಿಕಾರಿ ನಾಗನಗೌಡ, ಅನುಷ್ಠಾನ ಸಂಸ್ಥೆ ಸ್ಕೋಡ್ ವೇಸ್‌ನ ಎನ್.ಪಿ.ರಾಜ, ಗಂಗಾಧರ ಮತ್ತು ಸಿಎಸ್‌ಆರ್ ಸಿಬ್ಬಂದಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net