ಸ್ತ್ರೀಯರಿಗೆ ಸ್ವಾತಂತ್ರೃ ನೀಡಿದ್ದ ಶರಣರು

ಕಂಪ್ಲಿಯಲ್ಲಿ ಗೊಗ್ಗ ಮಹಾದೇವಮ್ಮ ಸ್ಮರಣಾರ್ಥ ಆಯೋಜಿಸಿದ್ದ ಹುಣ್ಣಿಮೆ ಕಾರ್ಯಕ್ರಮದಲ್ಲಿ ಶಿಕ್ಷಕಿ ಜ್ಯೋತಿ ಇಟಗಿ ಮಾತನಾಡಿದರು. ಪ್ರಮುಖರಾದ ಡಾ.ಮೃತ್ಯುಂಜಯ ರುಮಾಲೆ, ಕಲ್ಗುಡಿ ನಾಗರತ್ನ, ಗೊಗ್ಗ ಚನ್ನಬಸವರಾಜ ಇದ್ದರು.
ಕಂಪ್ಲಿಯಲ್ಲಿ ಗೊಗ್ಗ ಮಹಾದೇವಮ್ಮ ಸ್ಮರಣಾರ್ಥ ಆಯೋಜಿಸಿದ್ದ ಹುಣ್ಣಿಮೆ ಕಾರ್ಯಕ್ರಮದಲ್ಲಿ ಶಿಕ್ಷಕಿ ಜ್ಯೋತಿ ಇಟಗಿ ಮಾತನಾಡಿದರು. ಪ್ರಮುಖರಾದ ಡಾ.ಮೃತ್ಯುಂಜಯ ರುಮಾಲೆ, ಕಲ್ಗುಡಿ ನಾಗರತ್ನ, ಗೊಗ್ಗ ಚನ್ನಬಸವರಾಜ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಿಕ್ಷಕಿ ಜ್ಯೋತಿ ಇಟಗಿ ಹೇಳಿಕೆ
  • ಹುಣ್ಣಿಮೆ ಕಾರ್ಯಕ್ರಮ
ಕಂಪ್ಲಿ: ವೇದ, ಪುರಾಣ, ಉಪನಿಷತ್ತುಗಳಲ್ಲಿ ಸ್ತ್ರೀಯರನ್ನು ನಿಕೃಷ್ಟವಾಗಿ ಪರಿಗಣಿಸಿದ್ದು, 12ನೇ ಶತಮಾನದಲ್ಲಿ ಶಿವಶರಣರು ಸ್ತ್ರೀಯರಿಗೆ ಸ್ವಾತಂತ್ರ್ಯ ನೀಡುವ ಮೂಲಕ ಸ್ತ್ರೀ ಧರ್ಮವನ್ನು ಎತ್ತಿ ಹಿಡಿದಿದ್ದಾರೆ ಎಂದು ಶಿಕ್ಷಕಿ ಜ್ಯೋತಿ ಇಟಗಿ ಹೇಳಿದರು.
ಗುರುಮಠದಲ್ಲಿ ಓದ್ಸೋ ಕರಿಬಸಯ್ಯನವರ ಶಿವಾನಂದಾಶ್ರಮದಿಂದ ಗೊಗ್ಗ ಮಹಾದೇವಮ್ಮ ಸ್ಮರಣಾರ್ಥ ಸೋಮವಾರ ಹಮ್ಮಿಕೊಂಡಿದ್ದ 263ನೇ ಹುಣ್ಣಿಮೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಜೈನ, ಬೌದ್ಧ ಧರ್ಮಗಳಲ್ಲೂ ಸ್ತ್ರೀಯರ ಸ್ಥಾನಮಾನ ಆಶಾದಾಯಕವಾಗಿರಲಿಲ್ಲ. ಅನುಭವ ಮಂಟಪದಲ್ಲಿ ಸ್ತ್ರೀಯರು ಮನಬಿಚ್ಚಿ ಮಾತಾಡುವ ಸ್ವಾತಂತ್ರ್ಯ ದೊರಕಿತು ಎಂದರು.
ಶಿವಶರಣರ ಪ್ರತಿಪಾದನೆಯಿಂದ ಸ್ತ್ರೀಯರು ಸಮಾಜದಲ್ಲಿ ಭವಿ ಬದಲಿಗೆ ಭಕ್ತೆಯಾಗಿ, ದಾಸಿಯ ಬದಲಿಗೆ ಸಂಗಾತಿಯಾಗಿ, ಗುಲಾಮಳ ಬದಲಿಗೆ ಮಾರ್ಗದರ್ಶಕಳಾಗಿ ಪರಿವರ್ತನೆಗೊಳ್ಳಲು ಸಾಧ್ಯವಾಯಿತು. ಅಕ್ಕಮಹಾದೇವಿಯಿಂದ ಹೆಳವನಕಟ್ಟೆ ಗಿರಿಯಮ್ಮನ ವರೆಗೂ ಸ್ತ್ರೀಯರ ಧ್ವನಿ ಮೌನವಾಗಿತ್ತು. ಕನ್ನಡಕ್ಕೆ 8 ಜ್ಞಾನಪೀಠ ಪ್ರಶಸ್ತಿಗಳು ದೊರಕಿದ್ದರೂ ಮಹಿಳೆಗೆ ದೊರಕದಿರುವುದು ವಿಪರ್ಯಾಸ ಎಂದರು.
ನಿವೃತ್ತ ಪ್ರಾಧ್ಯಾಪಕ ಡಾ.ಮೃತ್ಯುಂಜಯ ರುಮಾಲೆ, ಪ್ರಮುಖರಾದ ಕಲ್ಗುಡಿ ನಾಗರತ್ನಾ, ಗೊಗ್ಗ ಚನ್ನಬಸವರಾಜ, ಗೊಗ್ಗ ಶಾಂತಮ್ಮ, ಗೊಗ್ಗ ಕಾರ್ತಿಕ್, ಶಾರದಾ ಬಸವಲಿಂಗಯ್ಯ, ಗೊಗ್ಗ ಶೋಭಾ, ಎಸ್.ಡಿ.ಬಸವರಾಜ, ಎಚ್.ಎಂ.ಜಗದೀಶ, ಕೆ.ಎಂ.ಚಂದ್ರಶೇಖರಸ್ವಾಮಿ, ಎಂ.ಯೋಗಾಚಾರ್, ವಿಶ್ವನಾಥಶಾಸ್ತ್ರಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net