ಹೊಸಪೇಟೆ: ನಿತ್ಯ ಕಾಯಕದೊಂದೊAದಿಗೆ ದೇವರನ್ನು ದರ್ಶಿಸಿಕೊಂಡ ದೇವರದಾಸಿಮಯ್ಯ ಅವರು ವಚನ ಸಾಹಿತ್ಯಕ್ಕೆ ಸಲ್ಲಿಸಿದ ಕೊಡುಗೆ ಅಪಾರವಾದುದು ಎಂದು ಶಿಕ್ಷಕ ಡಾ.ದಿವಾಕರ ನಾರಾಯಣ ಅಭಿಪ್ರಾಯಪಟ್ಟರು.
ಇಲ್ಲಿನ ತಾಲೂಕು ನೇಕಾರ ಸಂಘದಿAದ ನಗರದ ನೀಲಕಂಟೇಶ್ವರ ಕಲ್ಯಾಣ ಮಂಟಪದಲ್ಲಿ ಸೋಮವಾರ ರಾತ್ರಿ ದೇವರದಾಸಿಮಯ್ಯನವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಸವಣ್ಣರವರು ತಮ್ಮ ವಚನಗಳಲ್ಲಿ ದೇವರ ದಾಸಿಮಯ್ಯ ಅವರನ್ನು ಆದ್ಯ ವಚನಕಾರರೆಂದು ಸ್ತುತಿಸಿದ್ದಾರೆ. ಅಲ್ಲದೇ ಸ್ತ್ರೀ ಪುರುಷ ಬೇಧ ಭಾವ ಇಲ್ಲದಂತೆ ಎಲ್ಲರೂ ಸಮಾನರು ಎಂಬ ಭಾವವನ್ನು ಹೊಂದಿರಬೇಕು ಎಂದು ಪ್ರತಿಪಾದಿಸಿದರು. ಇಂತಹ ಮಹಾನ್ ಶರಣರ ವಿಚಾರಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದರು.
ಕನ್ನಡ ವಿಶ್ವವಿದ್ಯಾಲಯದ ದಾಸಿಮಯ್ಯ ಅಧ್ಯಯನ ಪೀಠದ ಸಂಚಾಲಕ ಡಾ.ಗೋವಿಂದ ಅವರು ಮಾತನಾಡಿ, ದಾಸಿಮಯ್ಯ ಅವರ ವಚನಗಳಲ್ಲಿ ಸಮಾಜ ಪರಿವರ್ತನೆ ಮಾಡುವ ಶಕ್ತಿ ಅಡಗಿದೆ. ದೇವರ ದಾಸಿಮಯ್ಯರವರ ಕುರಿತು ಪ್ರಕಟವಾದ ಪುಸ್ತಕಗಳನ್ನು ಕೊಂಡು ತಂದು ಓದುವ ಮನೋಭಾವವನ್ನು ಸಮಾಜದ ಪ್ರತಿಯೊಬ್ಬರೂ ಅಳವಡಿಸಿಕೊಂಡಾಗ ಮಾತ್ರ ಸಮಾಜದ ಬೆಳವಣಿಗೆಯಲ್ಲಿ ದಾಸಿಮಯ್ಯ ಅವರ ಪಾತ್ರ ಏನೆಂದು ತಿಳಿಯುತ್ತದೆ ಎಂದರು.
ತಾಲೂಕು ನೇಕಾರರ ಸಂಘದ ಅಧ್ಯಕ್ಷ ಕೆಂಜೆ ಮಹೇಶ್ ಕುಮಾರ ಅಧ್ಯಕ್ಷತೆ ವಹಿಸಿದರು. ಪ್ರಮುಖರಾದ ವಗ್ಗಾ ಜಯರಾಮ್, ಕಾಶಿ ವಿಶ್ವನಾಥ, ಕೊಳಗದ ಗಣಪತಿ, ಶರಣಾರ್ಥಿ ಶಿವಶಂಕ್ರಪ್ಪ, ಪಟ್ಟಸಾಲಿ ವಿರೂಪಾಕ್ಷ, ಸಜ್ಯೋಜಾತಪ್ಪ, ಶ್ರೀನಿವಾಸರಾವ್, ಕೇತ ಯರ್ರಿಸ್ವಾಮಿ, ಸತೀಶಗೋಸಿ, ಬುದ್ದಿ ರಾಮಕೃಷ್ಣ ಇತರರಿದ್ದರು.