ಕೂಡಿ ಬಾಳುವ ಪರಿಕಲ್ಪನೆ ಸಾರಿದ ಸಂತ

ಹೂವಿನಹಡಗಲಿ ತಹಸಿಲ್ ಕಚೇರಿಯಲ್ಲಿ ಮಹಾಯೋಗಿ ವೇಮನ ಜಯಂತಿ ಆಚರಿಸಲಾಯಿತು.
ಹೂವಿನಹಡಗಲಿ ತಹಸಿಲ್ ಕಚೇರಿಯಲ್ಲಿ ಮಹಾಯೋಗಿ ವೇಮನ ಜಯಂತಿ ಆಚರಿಸಲಾಯಿತು.
Published on
ಹೂವಿನಹಡಗಲಿ: ಮಹಾಯೋಗಿ ವೇಮನ ಅವರು ಈ ಜಗವ ಬಟ್ಟಲು ಮಾಡಿ ಎಲ್ಲರೂ ಕೂಡಿ ಬಾಳುವ ಮತ್ತು ಉಣ್ಣುವ ಪರಿಕಲ್ಪನೆಯನ್ನು ಸಾರಿದ ಸಂತರಾಗಿದ್ದಾರೆ ಎಂದು ತಹಸೀಲ್ದಾರ್ ಕೆ.ಎಂ.ಗುರುಬಸವರಾಜ ಹೇಳಿದರು.
ಪಟ್ಟಣದ ತಹಸಿಲ್ ಕಚೇರಿಯಲ್ಲಿ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಎಲ್ಲರಲ್ಲಿ ಶಕ್ತಿ ಇದ್ದು ಅದನ್ನು ಬಳಸಿಕೊಳ್ಳುವ ಮೂಲಕ ನಾವೆಲ್ಲ ಒಂದಾಗಬೇಕು ಎಂಬುದು ವೇಮನ ಅವರ ಉದ್ದೇಶವಾಗಿತ್ತು. ಬಡವರು ಶಿಕ್ಷಣವನ್ನು ಪಡೆದಾಗ ಸುತ್ತಲಿನ ಪರಿಸರ ಬದಲಾಗುತ್ತದೆ. ಶಿಕ್ಷಣದಿಂದ ಎಲ್ಲವನ್ನೂ ಪಡೆಯುವ ಶಕ್ತಿ ದೊರಕುತ್ತದೆ ಎಂದರು.
ರೆಡ್ಡಿ ಸಮಾಜ ಸೇವಾ ಟ್ರಸ್ಟ್ ತಾಲೂಕು ಅಧ್ಯಕ್ಷ ಮೋಹನ್ ರೆಡ್ಡಿ, ಗೌರವಾಧ್ಯಕ್ಷ ಕೆ.ಸತ್ಯನಾರಾಯಣ ರೆಡ್ಡಿ, ಸದಸ್ಯರಾದ ಬಸವ ರೆಡ್ಡಿ, ದ್ವಾರಕೀಶ ರೆಡ್ಡಿ, ಜಿ.ಮಲ್ಲಪ್ಪ, ಸುಭಾಷ್, ಕಂದಾಯ ಇಲಾಖೆ ಅಧಿಕಾರಿ, ಸಿಬ್ಬಂದಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net