ಹಂಪಿಯಲ್ಲಿ ಶ್ರೀಪುರಂದರ ದಾಸರ ಮಧ್ಯಾರಾಧನೆ ನಿಮಿತ್ತ ಶೋಭಯಾತ್ರೆ ನಡೆಯಿತು. ತಹಸೀಲ್ದಾರ್ ಶೃತಿ ಎಂ.ಮಳ್ಳಪ್ಪಗೌಡ್ರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿದೇರ್ಶಕ ಸಿದ್ಧಣ್ಣನ ರಂಗನವರ್, ಮುಖ್ಯಾಧಿಕಾರಿ ಈರಣ್ಣ, ರಾಯರ ಮಠದ ಮಠಾಧಿಕಾರಿ ಪವಾನಾಚಾರ್ಯ ಇತರರಿದ್ದರು.
ಹಂಪಿಯಲ್ಲಿ ಮಧ್ಯಾರಾಧನೆ ವೇಳೆ ಬೆಂಗಳೂರಿನ ಪಂಡಿತ್ ಶ್ರೀನಿಧಿ ಆಚಾರ್ಯ ಅಭಿಪ್ರಾಯ
ಹೊಸಪೇಟೆ: ಪುರಂದರ ದಾಸರ ಪದ, ಪದ್ಯ, ಸುಳಾದಿಗಳು ಸರ್ವಕಾಲಿಕಕ್ಕು ಮಾನ್ಯವಾಗಿದೆ ಎಂದು ಬೆಂಗಳೂರಿನ ಪಂಡಿತ್ ಶ್ರೀನಿಧಿ ಆಚಾರ್ಯ ತಿಳಿಸಿದರು.
ಶ್ರೀಪುರಂದರ ದಾಸರ ಮಧ್ಯಾರಾಧನೆ ನಿಮಿತ್ತ ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿ ಮಠ ಶ್ರೀಗುರುಸಾರ್ವಭೌಮರ ದಾಸ ಸಾಹಿತ್ಯ ಪ್ರಾಜೆಕ್ಟ್ ವತಿಯಿಂದ ಹಂಪಿ ಪುರಂದರ ದಾಸರ ಮಂಟಪದಲ್ಲಿ ಪುರಂದರ ಪದ, ಪದ್ಯ ಸುಳಾದಿಗಳಲ್ಲಿ ಮಾನವೀಯ ಮೌಲ್ಯಗಳು ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.
ಮಂತ್ರಾಲಯ ಗುರುಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್ ರಾಜ್ಯ ಸಂಚಾಲಕ ಸುಳಾದಿ ಹನುಮೇಶಾಚಾರ್ಯ ಮಾತನಾಡಿ, ಪರಮಪೂಜ್ಯ ಶ್ರೀಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಆದೇಶದಂತೆ ಪ್ರತಿ ವರ್ಷದಂತೆ ಶ್ರೀಪುರಂದರ ದಾಸರ ಆರಾಧನೋತ್ಸವದಲ್ಲಿ ನಾಡಿನ ವಿವಿಧ ಭಾಗಗಳಿಂದ ಹಲವಾರು ಭಜನಾ ಸದಸ್ಯರು ಭಾಗವಹಿಸಿ ವಿಶೇಷ ಭಜನೆ, ಕೀರ್ತನೆಗಳನ್ನು ಸಮರ್ಪಿಸುವ ಮೂಲಕ ದಾಸರ ಆರಾಧನೆ ವಿಶಿಷ್ಟವಾಗಿ ನೆರವೇರಿಸಲಾಗುತ್ತಿದೆ. ಮಂತ್ರಾ ಕನ್ನಡ ಸಾರಸ್ವತ ಲೋಕಕ್ಕೆ ದಾಸಶ್ರೇಷ್ಠ ಶ್ರೀಪುರಂದರ ದಾಸರ ಕೊಡುಗೆ ಅನನ್ಯ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿದೇರ್ಶಕ ಸಿದ್ಧಣ್ಣನ ರಂಗನವರ್ ಮಾತನಾಡಿ, ಪುರಂದರ ದಾಸರು ನವಕೋಟಿ ನಾರಾಯಣರಾಗಿದ್ದರು. ಎಲ್ಲಾ ಸಂಪತ್ತು ಪರಿತ್ಯಾಗಿ ಮಾಡಿ ದಾಸತ್ವವನ್ನು ಸ್ವೀಕರಿಸಿದ ಮಹಾನ್ ಜ್ಞಾನಿಗಳಾಗಿದ್ದಾರೆ ಎಂದು ಹೇಳಿದರು.
ತಹಸೀಲ್ದಾರ್ ಶೃತಿ ಎಂ.ಮಳ್ಳಪ್ಪಗೌಡ್ರ್, ಕಮಲಾಪುರ ಪುರಸಭೆ ಮುಖ್ಯಾಧಿಕಾರಿ ಈರಣ್ಣ, ರಾಯರ ಮಠದ ಮಠಾಧಿಕಾರಿ ಪವಾನಾಚಾರ್ಯ, ಮಂತ್ರಾಲಯ ದಾಸ ಸಾಹಿತ್ಯ ಪ್ರಾಜೆಕ್ಟ್ ಜಿಲ್ಲಾ ಸಂಚಾಲಕ ಅನಂತ ಪದ್ಮನಾಭ, ಪ್ರಮುಖರಾದ ಗುರುರಾಜ್ ಕುಲಕರ್ಣಿ, ನರಸಿಂಹ ಆಚಾರ್ಯ, ಟೀಕಾಚಾರ್ಯ ಇತರರಿದ್ದರು.
ಮಧ್ಯಾರಾಧನೆ ನಿಮಿತ್ತ ಬೆಳಿಗ್ಗೆ ಫಲ ಪಂಚಾಮೃತಾಭಿಷೇಕ, ಪುಷ್ಪ, ವಸ್ತ್ರ ಅಲಂಕಾರ, ಅರ್ಚನೆ, ನೇವೈದ್ಯ ನೆರವೇರಿಸಿ ಮಹಾಮಂಗಳರಾತಿ ನಡೆಸಲಾಯಿತು. ವಿವಿಧ ಭಾಗಗಳಿಂದ ಆಗಮಿಸಿದ ಭಜನಾ ಮಂಡಳಿ ಸದಸ್ಯರಿಂದ ಭಜನೆ ಕಾರ್ಯಕ್ರಮ ನಡೆಯಿತು. ಸ್ವಸ್ತಿವಾಚನ, ಮಹಾಮಂಗಳರಾತಿ, ಭಜನೆ ನಡೆಯಿತು.