ಸನ್ಮಾರ್ಗದ ದಾರಿ ತೋರಿದ ಮಹನೀಯ

ಕೊಟ್ಟೂರು ತಾಲೂಕು ಕಚೇರಿಯಲ್ಲಿ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚಿನ ಅಂಕ ಪಡೆದ ರೆಡ್ಡಿ ಸಮುದಾಯದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕೊಟ್ಟೂರು ತಾಲೂಕು ಕಚೇರಿಯಲ್ಲಿ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚಿನ ಅಂಕ ಪಡೆದ ರೆಡ್ಡಿ ಸಮುದಾಯದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
Published on
ಕೊಟ್ಟೂರು: ಸ್ವೇಚ್ಛಾಚಾರಿಯಾಗಿ ಬದುಕುತ್ತಿದ್ದ ವೇಮನ ಅವರು ಬದುಕಿನಲ್ಲಿ ಬದಲಾವಣೆ ಕಂಡುಕೊಂಡು ಸಮಾಜಕ್ಕೆ ಸನ್ಮಾರ್ಗ ತೋರಿದ್ದಾರೆ ಎಂದು ಗ್ರೇಡ್-2 ತಹಸೀಲ್ದಾರ್ ಎಂ.ಪ್ರತಿಭಾ ಹೇಳಿದರು.
ತಾಲೂಕು ಕಚೇರಿಯಲ್ಲಿ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು. ವ್ಯಸನಗಳಿಗೆ ತುತ್ತಾಗಿ ಬದುಕನ್ನು ಹಾಳು ಮಾಡಿಕೊಳ್ಳುತ್ತಿರುವ ಯುವ ಪೀಳಿಗೆ, ವೇಮನ ಅವರ ಜೀವನಾನುಭವದ ನುಡಿಗಳನ್ನು ಪಾಲಿಸಿದಲ್ಲಿ ಬದುಕು ಸುಂದರವಾಗುತ್ತದೆ ಎಂದರು.
ನಿವೃತ್ತ ಶಿಕ್ಷಕ ರಾಮನಗೌಡ ಮಾತನಾಡಿ, ಅತ್ತಿಗೆ ಹೇಮರಡ್ಡಿ ಮಲ್ಲಮ್ಮ ನೀಡಿದ ಮುತ್ತಿನ ಮೂಗುತಿ ಮೂಲಕ ಮುಕ್ತಿಯ ಕಡೆಗೆ ಸಾಗಿ ಸಾಧನೆಯಿಂದ ಮಹಾನ್ ಯೋಗಿಯಾಗಿ ವೇಮನ ಪರಿವರ್ತನೆಯಾದರು. ಈ ಮೂಲಕ ತಪ್ಪು ದಾರಿಯಲ್ಲಿ ಸಾಗುತ್ತಿದ್ದ ಸಮಾಜವನ್ನು ಸರಿಯಾದ ದಾರಿಯಲ್ಲಿ ಮುನ್ನೆಡೆಸಲು ಯತ್ನಿಸಿದರು. 15 ಸಾವಿರ ವಚನಗಳನ್ನು ರಚಿಸಿ ಸಮಾಜದಲ್ಲಿನ ಜಾತಿ ಪದ್ಧತಿ, ದ್ವೇಷ, ಅಸೂಯೆ, ಕಂದಾಚಾರ ತೊಡೆದುಹಾಕಲು ಜೀವನ ಮುಡುಪಾಗಿಟ್ಟಿದ್ದರು. ಇಂತಹ ಮಹಾನ್ ಚೇತನ ಹಾಕಿಕೊಟ್ಟ ದಾರಿಯಲ್ಲಿ ನಾವೆಲ್ಲ ನಡೆಯಬೇಕು ಎಂದು ಸಲಹೆ ನೀಡಿದರು.
ಎಸ್ಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚಿನ ಅಂಕ ಪಡೆದ ರೆಡ್ಡಿ ಸಮುದಾಯದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ತಾಲೂಕು ರೆಡ್ಡಿ ಸಮಾಜದ ಗೌರವ ಅಧ್ಯಕ್ಷ ದೇವೇಂದ್ರಗೌಡ, ಉಪಾಧ್ಯಕ್ಷ ಜಿ.ಸುರೇಶ, ಪ್ರಮುಖರಾದ ಜಿ.ನಾಗರಾಜ, ರೆಡ್ಡಿ ರಾಜಣ್ಣ, ರೆಡ್ಡಿ ಸಕ್ರಪ್ಪ, ಅನಿಲ್ ರೆಡ್ಡಿ, ಎಸ್.ಕೊಟ್ರೇಶ್, ಶಿರಸ್ತೇದಾರ್ ಕೊಟ್ರಮ್ಮ, ಚಂದ್ರನಾಯ್ಕ, ಉಪತಹಸಿಲ್ದಾರ್ ಅನ್ನದಾನೇಶ ಬಿ.ಪತ್ತಾರ್, ಕಂದಾಯ ನಿರೀಕ್ಷಕ ಡಿ.ಶಿವಕುಮಾರ್, ಸಿಬ್ಬಂದಿ ನಾಗರಾಜ, ಮಂಜುನಾಥ, ಗುರುಬಸವರಾಜ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net