ಸಂಭ್ರಮದಿಂದ ಜರುಗಿದ ಸರ್ವಧರ್ಮ ರಥೋತ್ಸವ

ಹೊಸಪೇಟೆ ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದಿಂದ ಶುಕ್ರವಾರ ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸರ್ವಧರ್ಮ ಸಮನ್ವಯ ಮಹಾರಥೋತ್ಸವ ಸಂಭ್ರಮದಿಂದ ನೆರವೇರಿತು. ರಥೋತ್ಸವದಲ್ಲಿ ಕಲಾತಂಡಗಳು ಮೆರಗು ನೀಡಿದವು.
ಹೊಸಪೇಟೆ ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದಿಂದ ಶುಕ್ರವಾರ ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸರ್ವಧರ್ಮ ಸಮನ್ವಯ ಮಹಾರಥೋತ್ಸವ ಸಂಭ್ರಮದಿಂದ ನೆರವೇರಿತು. ರಥೋತ್ಸವದಲ್ಲಿ ಕಲಾತಂಡಗಳು ಮೆರಗು ನೀಡಿದವು.
Published on

ಹೊಸಪೇಟೆ: ಇಲ್ಲಿನ ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಸಂಸ್ಥಾನಮಠದ ಜಾತ್ರ ಮಹೋತ್ಸವದ ನಿಮಿತ್ತ ಸರ್ವಧರ್ಮ ಸಮನ್ವಯರ 9ನೇ ವರ್ಷದ ಮಹಾ ರಥೋತ್ಸವವು ಶುಕ್ರವಾರ ಸಂಜೆ ಅದ್ದೂರಿಯಾಗಿ ಜರುಗಿತು.

ಸರ್ವಧರ್ಮಗಳ ಮುಖಂಡರು ತಮ್ಮ ತಮ್ಮ ಧರ್ಮದ ಗ್ರಂಥಗಳನ್ನು ಮೆರವಣಿಗೆಯಲ್ಲಿ ತಂದು, ರಥದಲ್ಲಿ ಇರಿಸಿದನಂತರ ವಳಬಳ್ಳಾರಿಯ ಶ್ರೀ ಸುವರ್ಣಗಿರಿಯ ವಿರಕ್ತಮಠದ ಸಿದ್ಧಲಿಂಗ ಮಹಾಸ್ವಾಮಿಗಳು ರಥೋತ್ಸವಕ್ಕೆ ಚಾಲನೆ ನೀಡಿದರು.

ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು ಹಾಗೂ ವಿವಿಧ ಮಠಧೀಶರರು ಭಾಗಿಯಾದರು. ಭಕ್ತರು ಶ್ರದ್ಧೆ, ಭಕ್ತಿ ಮತ್ತು ಸಮರ್ಪಣಾ ಮನೋಭಾವದಿಂದ ರಥವನ್ನು ಸಂಜೆ ಎಳೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net