ವಿದ್ಯಾರ್ಥಿಗಳ ಅಭಿವೃದ್ಧಿಯೇ ಶಿಕ್ಷಕರ ಖುಷಿ

ಕಮಲಾಪುರ ಸರ್ಕಾರಿ ಪ್ರೌಢಾಶಾಲೆಯಲ್ಲಿ 1999-2002ನೇ ಸಾಲಿನ ವಿದ್ಯಾರ್ಥಿಗಳಿಂದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಲಾಯಿತು. ನಿವೃತ್ತ ಶಿಕ್ಷಕ ವಿಶ್ವಮೂರ್ತಿ, ಮುಖ್ಯಶಿಕ್ಷಕಿ ಸುರೇಖ, ಶಿಕ್ಷಕರಾದ ಸುಧಾ, ವೀರೇಶ್, ಭಾರತಿ ಇತರರಿದ್ದರು.
ಕಮಲಾಪುರ ಸರ್ಕಾರಿ ಪ್ರೌಢಾಶಾಲೆಯಲ್ಲಿ 1999-2002ನೇ ಸಾಲಿನ ವಿದ್ಯಾರ್ಥಿಗಳಿಂದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಲಾಯಿತು. ನಿವೃತ್ತ ಶಿಕ್ಷಕ ವಿಶ್ವಮೂರ್ತಿ, ಮುಖ್ಯಶಿಕ್ಷಕಿ ಸುರೇಖ, ಶಿಕ್ಷಕರಾದ ಸುಧಾ, ವೀರೇಶ್, ಭಾರತಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಗುರುವಂದನ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ವಿಶ್ವಮೂರ್ತಿ ಅಬಿಪ್ರಾಯ
ಹೊಸಪೇಟೆ: ಇಂಥ ಅಭೂತಪೂರ್ವ ಕ್ಷಣದಿಂದ ಆಗುವ ಸಂತೋಷ ವರ್ಣಿಸಲು ಶಬ್ದಗಳು ಸಾಲವು. ನಿಮ್ಮೆಲ್ಲರ ಏಳಿಗೆ ಕಂಡು ಭಾವಪರವಶನಾಗಿರುವೆ ನಿವೃತ್ತ ಶಿಕ್ಷಕ ವಿಶ್ವಮೂರ್ತಿ ಅಭಿಪ್ರಾಯಪಟ್ಟರು.
ತಾಲೂಕಿನ ಕಮಲಾಪುರ ಸರ್ಕಾರಿ ಪ್ರೌಢಾಶಾಲೆಯಲ್ಲಿ 1999-2002ನೇ ಸಾಲಿನ ವಿದ್ಯಾರ್ಥಿಗಳಿಂದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗುರುವಿಗೆ ಸಿಗುವ ಈ ಗೌರವ ಜಗತ್ತಿನಲ್ಲಿ ಯಾವ ವೃತ್ತಿಯಲ್ಲಿದ್ದವರಿಗೂ ಸಿಗುವುದಿಲ್ಲ. ಈ ಬಾಂಧವ್ಯ ದೊಡ್ಡ ಶಕ್ತಿ,ಬಂಧನ. ಬೀಸುವ ಗಾಳಿ, ಹರಿಯುವ ನೀರು ನಿರ್ಮಲವಾಗಿರುವಂತೆ ನಿಮ್ಮಲ್ಲಿರುವ ಜ್ಞಾನ ದಿನದಿಂದ ದಿನಕ್ಕೆ ಹೆಚ್ಚಿಸುತ್ತ ಹೋದರೆ ಅದು ಪರಿಪಕ್ವವಾಗಿ ಉಳಿಯುತ್ತದೆ. ನನಗೆ ಎಲ್ಲವೂ ಗೊತ್ತಿದೆ ಎಂದು ಸುಮ್ಮನಿದ್ದರೆ ಇರುವ ಜ್ಞಾನವೂ ನಾಶವಾಗುತ್ತದೆ.
ಹಂಪಿಯಲ್ಲಿ ಕಲ್ಲಿನ ಕಲ್ಲುಗಳು ಮಾತನಾಡುತ್ತವೆ. ವಿದ್ಯಾರ್ಥಿಗಳು ಪಾಠದ ಮೂಲಕ ನೀವೇಕೆ ಮಾತನಾಡಬಾರದು. ಈ ನೆಲದಲ್ಲಿ ಅವಕಾಶ ಇದೆ. ವಿದ್ಯಾರ್ಥಿಗಳ ಅಭಿವೃದ್ಧಿಯೇ ಶಿಕ್ಷಕರ ನಿಜವಾದ ಸಾಧನೆ. ಒಳ್ಳೆಯ ವಿದ್ಯಾರ್ಥಿಗಳಿಂದ ಉತ್ತಮ ಶಿಕ್ಷಕರು ಆಗಲು ಸಾಧ್ಯ. ಶಿಕ್ಷಣ, ಜ್ಞಾನ ಪಸರಿಸುವಲ್ಲಿ ಗುರು-ಶಿಷ್ಯರಿಬ್ಬರ ಜೀವನ ಸಾರ್ಥಕತೆ ಇದೆ. ಮಕ್ಕಳು ವಿದ್ಯಾವಂತರಾಗಿ, ಪ್ರತಿಭಾವಂತರಾಗಿ ಸತ್‌ಪ್ರಜೆಗಳಾಗಿ ಬೆಳೆಯಬೇಕು ಎಂದು ತಮ್ಮ ಶಿಷ್ಯರಿಗೆ ಸಲಹೆ ನೀಡಿದರು.
ಶಿಕ್ಷಕ ಶ್ರೀನಿವಾಸ್ ಮಾತನಾಡಿ, ಈಗ ಮಕ್ಕಳಲ್ಲಿ ಸಂಸ್ಕಾರ ಕಡಿಮೆಯಾಗುತ್ತಿದೆ. ನಿಮ್ಮ ಹಾಗೆ ನಿಮ್ಮ ಮಕ್ಕಳಲ್ಲಿ ಸಂಸ್ಕಾರದ ಬೀಜ ಬಿತ್ತಿ. ತಂದೆ-ತಾಯಿಗಳು, ಗುರುಗಳಿಗೆ ಮರ್ಯಾದೆ ನೀಡುವುದನ್ನು ಕಲಿಸಿರಿ. ನೀವು ಮತ್ತು ನಿಮ್ಮ ಮುಂದಿನ ಪೀಳಿಗೆ ಸಂಸ್ಕಾರಯುತವಾಗಿ ಬಾಳಿದರೆ ಅದುವೇ ನಮಗೆ ನೀವು ಕೊಡುವ ಉಡುಗೊರೆ. ಅದನ್ನು ಬಿಟ್ಟು ನಾವು ಬೇರೇನನ್ನೂ ನಿಮ್ಮಿಂದ ಬಯಸುವುದಿಲ್ಲ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net